ಚರ್ಮ ಆರೋಗ್ಯ ಮನುಷ್ಯನ ಒಟ್ಟಾರೆ ಆರೋಗ್ಯವನ್ನು ಸೂಚಿಸುತ್ತದೆ. ನಿತ್ಯ ಎರಡು ಬಾರಿ ಸ್ನಾನ, ಸ್ಥಳೀಯ ಪೌಷ್ಠಿಕವಾದ ಆಹಾರ ಸೇವನೆ, ಜಂಕ್‌ ಫುಡ್‌ಗಳಿಂದ ದೂರವಿರುವುದರಿಂದ ಚರ್ಮದ ಆರೋಗ್ಯ ಕಾಪಾಡಬಹುದು ಎಂದು ಕೆಎಂಸಿಯ ಅಸಿಸ್ಟೆಂಟ್‌ ಪ್ರೊ. ಶ್ರೇಯಾ ದೇಶಪಾಂಡೆ ಹೇಳಿದರು.

ಮಂಗಳೂರು: ಚರ್ಮ ಆರೋಗ್ಯ ಮನುಷ್ಯನ ಒಟ್ಟಾರೆ ಆರೋಗ್ಯವನ್ನು ಸೂಚಿಸುತ್ತದೆ. ನಿತ್ಯ ಎರಡು ಬಾರಿ ಸ್ನಾನ, ಸ್ಥಳೀಯ ಪೌಷ್ಠಿಕವಾದ ಆಹಾರ ಸೇವನೆ, ಜಂಕ್‌ ಫುಡ್‌ಗಳಿಂದ ದೂರವಿರುವುದರಿಂದ ಚರ್ಮದ ಆರೋಗ್ಯ ಕಾಪಾಡಬಹುದು ಎಂದು ಕೆಎಂಸಿಯ ಅಸಿಸ್ಟೆಂಟ್‌ ಪ್ರೊ. ಶ್ರೇಯಾ ದೇಶಪಾಂಡೆ ಹೇಳಿದರು.

ಅವರು ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ ವತಿಯಿಂದ ನವಭಾರತ ಸರ್ಕಲ್‌ನ ಬ್ರಹ್ಮಸಮಾಜ ಕಾಂಪ್ಲೆಕ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಚರ್ಮ ರೋಗ ಆರೋಗ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಮೂಳೆ ಮಾಂಸಗಳಿಂದ ಕೂಡಿರುವ ದೇಹಕ್ಕೆ ಹೊದಿಕೆಯಾಗಿ ದೇಹಕ್ಕೊಂದು ಆಕಾರ ಒದಗಿಸುವುದು ಚರ್ಮ. ಚರ್ಮ ನಮ್ಮನ್ನು ಬಿಸಿಲು, ಗಾಳಿ, ಮಳೆ ಇತ್ಯಾದಿಗಳಿಂದ ರಕ್ಷಿಸುತ್ತದೆ. ಚರ್ಮದ ಮೂಲಕವೇ ವಿಟಮಿನ್‌ ಡಿ ಕೂಡ ಉತ್ಪತ್ತಿಯಾಗಿ ನಮ್ಮ ಎಲುಬು ಮತ್ತು ಸ್ನಾಯುಗಳನ್ನು ಗಟ್ಟಿಯಾಗಿದುತ್ತದೆ ಎಂದರು. ಸಾಕಷ್ಟು ನೀರು ಕುಡಿಯುವುದು, ಉತ್ತಮ ನಿದ್ರೆ ಮಾಡುವುದು, ಧೂಮಪಾನ ವರ್ಜನೆ, ತ್ವಚೆಯ ತೇವಾಂಶ ರಕ್ಷಿಸಿಕೊಳ್ಳುವುದರಿಂದ ಚರ್ಮದ ಆರೋಗ್ಯವನ್ನು ಹೊಂದಬಹುದು ಎಂದರು.ಯೋಗ ಶಿಕ್ಷಕ ಜಿ.ಗೋವಿಂದರಾಯ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಇತ್ತೀಚೆಗೆ ನಿಧನರಾದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿ.ಎ. ಎ. ರಾಘವೇಂದ್ರ ರಾವ್‌ ಹಗೂ ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪಿ.ರಘುರಾಮ್‌ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಡಾ.ಪಿ.ಜಿ. ಮಹೇಶ್‌ ಸ್ವಾಗತಿಸಿದರು. ಎಸ್‌.ಜಿ. ಹೆಗ್ಡೆ ವಂದಿಸಿದರು. ಯು. ರಾಮರಾವ್‌ ನಿರೂಪಿಸಿದರು.