ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಅಂಬೇಡ್ಕರವಾದಿಗಳು ಮೂಢನಂಬಿಕೆಗಳ ಆಚರಣೆಗೆ ಹಣ ಖರ್ಚ ಮಾಡುವುದನ್ನು ನಿಲ್ಲಿಸುವುದರೊಂದಿಗೆ ನಾವೆಲ್ಲಾ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು. ಅಲ್ಲದೇ, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಅಂಬೇಡ್ಕರವಾದಿಗಳು ಮೂಢನಂಬಿಕೆಗಳ ಆಚರಣೆಗೆ ಹಣ ಖರ್ಚ ಮಾಡುವುದನ್ನು ನಿಲ್ಲಿಸುವುದರೊಂದಿಗೆ ನಾವೆಲ್ಲಾ ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಬೇಕು. ಅಲ್ಲದೇ, ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ ಎಂದು ಲೋಕೊಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.ಭಾನುವಾರ ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾ ಭವನದಲ್ಲಿ ಅಂಬೇಡ್ಕರ ವಿವಿಧೋದ್ಧೇಶ ಸಹಕಾರ ಸಂಘದ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರ ಭಾಗದಲ್ಲಿ ಈ ಬ್ಯಾಂಕ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರ ಪರಿಣಾಮವಾಗಿ ಚಿಕ್ಕೋಡಿಯಲ್ಲಿ 27 ನೇ ಶಾಖೆ ಪ್ರಾರಂಭಿಸುತ್ತಿರುವುದು ಸಂಘದ ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.ನಮ್ಮ ಜನ ಆರ್ಥಿಕವಾಗಿ ಸಬಲರಾಗಿರಬೇಕು, ಜಯಂತಿಗಳಲ್ಲಿ ಡಿಜೆಗೆ ಖರ್ಚ ಮಾಡುವ ಹಣವನ್ನು ಇಂತಹ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಬರಲಿದೆ ಎಂದು ಸಲಹೆ ನೀಡಿದರು.ಮೈಸೂರಿನ ಉರಲಿಂಗಪೆದ್ದಿ ಮಠದ ಸ್ವಾಮಿಜಿ ಹಾಗೂ ಎವಿಎಸ್‌ಎಸ್ ಗೌರವಾಧ್ಯಕ್ಷ ಜ್ಞಾನಪ್ರಕಾಶ ಸ್ವಾಮಿಜಿ ಮಾತನಾಡಿ, ಚಿಕ್ಕೋಡಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಪಾದಸ್ಪರ್ಶ ಮಾಡಿದ ನೆಲವಾಗಿದೆ. ಅದಕ್ಕಾಗಿ ಇಲ್ಲಿ ಎವಿಎಸ್‌ಎಸ್ ಸಹಕಾರ ಸಂಘ ಪ್ರಾರಂಭಿಸಲಾಗಿದೆ. ಅಂಬೇಡ್ಕರ ಅವರು ಜೀವಂತವಾಗಿರಬೇಕಾದರೆ ಅರ್ಜಿ ತೆಗೆದುಕೊಳ್ಳುವ ಜಾಗದಲ್ಲಿ ನಾವೂ ಇರಬೇಕು ಎಂದರು.
ಅಂಬೇಡ್ಕರ ಅವರನ್ನು ನಾವೆಲ್ಲಾ ಬೀದಿಯಲ್ಲಿ ನಿಲ್ಲಿಸಿದ್ದೇವೆ. ಇದರಿಂದಾಗಿ ನಾವೂ ಬೀದಿಯಲ್ಲಿ ನಿಂತಿದ್ದೇವೆ. ಅಂಬೇಡ್ಕರ ಜೀವನ ಚರಿತ್ರೆಯನ್ನು ನಮ್ಮ ಮಕ್ಕಳಿಗೆ ತಿಳಿಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.ಚಿತ್ರದುರ್ಗ ಛಲವಾದಿ ಗುರುಪೀಠದ ಜಗದ್ಗರು ಬಸವನಾಗಿ ಹಾಗೂ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ, ಉದ್ಯಮಿ ಅರವಿಂದ ಘಟ್ಟಿ ಹಾಗೂ ನಿರ್ವಹಣಾ ಸಮಿತಿಯ ದಯಾನಂದ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾನಿಧ್ಯವನ್ನು ಜ್ಞಾನಜ್ಯೋತಿ ಭಂತೇಜಿ, ನಿಲಜಗಿ ಮಾದೇವ ಸ್ವಾಮಿಜಿ, ಚಿತ್ರದುರ್ಗ ಮಾಜಿ ಸಂಸದ ಚಂದ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಡಾ.ರಾಜು ಕಾಂಬಳೆ, ಸುನೀತಾ ಐಹೊಳೆ, ಶರಣು ಶಿಂಧೆ, ಮೇಘರಾಜ ಹರಿಜನ, ಬಿ.ಡಿ.ಪವಾರ, ಮಹಾನಿಂಗ ಕೋಲಕಾರ, ರವೀಂದ್ರ ಪಾಟೀಲ, ಕಲ್ಲಪ್ಪಾ ಓಬಣ್ಣಗೋಳ, ಬಾಹುಬಲಿ ಹಂಜಿ, ನೀಲಾ ಮಾಲಿ ಉಪಸ್ಥಿತರಿದ್ದರು. ಸಂತೋಷ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಧುಮಾಳೆ ನಿರೂಪಿಸಿದರು.