ಫಿಜಾ ಬರ್ಗರ್ ನಂತಹ ಪಾಶ್ಚಾತ್ಯ ಶೈಲಿ ಆಹಾರ ತ್ಯಜಿಸಿ: ಪ್ರೊ.ದೊಡ್ಡರಂಗೇಗೌಡ

| Published : Oct 01 2024, 01:17 AM IST

ಫಿಜಾ ಬರ್ಗರ್ ನಂತಹ ಪಾಶ್ಚಾತ್ಯ ಶೈಲಿ ಆಹಾರ ತ್ಯಜಿಸಿ: ಪ್ರೊ.ದೊಡ್ಡರಂಗೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆ ನೆಪದಲ್ಲಿ ಬಂದಿರುವ ಫಿಜಾ ಬರ್ಗರಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಪೌಷ್ಟಿಕ ಆಹಾರ ಸೇವನೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಮಕ್ಕಳ ಭವಿಷ್ಯ ಮತ್ತು ರಾಷ್ಟ್ರ ಸದೃಢವಾಗಲು ಆರೋಗ್ಯವಂತ ಯುವಶಕ್ತಿ ಅವಶ್ಯಕ. ಹೀಗಾಗಿ ಬೇರೆ ಬೇರೆ ಆಹಾರಗಳಿಗೆ ಮಾರು ಹೋಗಿರುವ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಆಹಾರಗಳನ್ನು ರೂಢಿ ಮಾಡಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಫಿಜಾ ಬರ್ಗರ್ ನಂತಹ ಪಾಶ್ಚಾತ್ಯ ಶೈಲಿ ಆಹಾರ ತ್ಯಜಿಸಿ ನಮ್ಮ ಸಂಪ್ರದಾಯದ ಆಹಾರ ಪದ್ಧತಿ ರೂಢಿಸಿಕೊಂಡು ಮಕ್ಕಳ ಆರೋಗ್ಯವನ್ನು ಬಾಲ್ಯದಿಂದಲೇ ಸದೃಢಗೊಳಿಸಬೇಕು ಎಂದು ಪ್ರೊ.ದೊಡ್ಡರಂಗೇಗೌಡ ಸಲಹೆ ನೀಡಿದರು.

ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ಸೋಮವಾರ ನಡೆದ ಪೌಷ್ಟಿಕ ಆಹಾರಗಳ ಪ್ರದರ್ಶನದಲ್ಲಿ ಮಾತನಾಡಿದರು.

ಆಧುನಿಕತೆ ನೆಪದಲ್ಲಿ ಬಂದಿರುವ ಫಿಜಾ ಬರ್ಗರಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಪೌಷ್ಟಿಕ ಆಹಾರ ಸೇವನೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಮಕ್ಕಳ ಭವಿಷ್ಯ ಮತ್ತು ರಾಷ್ಟ್ರ ಸದೃಢವಾಗಲು ಆರೋಗ್ಯವಂತ ಯುವಶಕ್ತಿ ಅವಶ್ಯಕ. ಹೀಗಾಗಿ ಬೇರೆ ಬೇರೆ ಆಹಾರಗಳಿಗೆ ಮಾರು ಹೋಗಿರುವ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಆಹಾರಗಳನ್ನು ರೂಢಿ ಮಾಡಬೇಕು ಎಂದರು.

ಪಾಶ್ಚಾತ್ಯ ಮತ್ತು ಅಪೌಷ್ಟಿಕ ಆಹಾರಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಸ್ಥಳೀಯ ಗುಣಮಟ್ಟದ ಆಹಾರ ಪದ್ಧತಿ, ಸಿರಿಧಾನ್ಯ ಹೆಚ್ಚು ಬಳಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎ.ಶೇಖರ್ ಮಾತನಾಡಿ, ಮನುಷ್ಯರನ್ನು ಹೊರತು ಪಡಿಸಿ ಎಲ್ಲಾ ಪ್ರಾಣಿಗಳು ಪ್ರಾಕೃತಿಕವಾಗಿ ಸಿಗುವ ಉತ್ತಮ ಆಹಾರಗಳನ್ನೇ ಸೇವಿಸುತ್ತವೆ. ಆದರೆ, ಮನುಷ್ಯ ಮಾತ್ರ ಅಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

7 ವರ್ಷದಿಂದ 12 ವರ್ಷದ ಮಕ್ಕಳ ನಡುವೆ ಪೌಷ್ಟಿಕ ಮತ್ತು ಸಮತೋಲನದ ಆಹಾರ ನೀಡಿದರೆ ದೈಹಿಕ ಮತ್ತು ಮಾನಸಿಕವಾಗಿ ಮಕ್ಕಳು ಬಲಿಷ್ಟರಾಗುತ್ತಾರೆ ಎಂದರು.

ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಶಿವಕುಮಾರ್ ಮಾತನಾಡಿ, ಶಕ್ತಿವರ್ಧಕ ಮತ್ತು ಶರೀರದ ಸವಾಂಗೀಣ ಬೆಳವಣಿಗೆಗೆ ಎಲ್ಲಾ ಪೋಷಕಾಂಶವುಳ್ಳ ಸಮತೋಲನದ ಆಹಾರಗಳನ್ನು ಸೇವಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಪ್ರಾಕೃತಿಕವಾಗಿ ಬೆಳೆಯುವ ದ್ವಿದಳ, ಏಕದಳ ಕಾಳುಗಳು, ತರಕಾರಿಗಳು ಸೇರಿದಂತೆ ಪ್ರಾದೇಶಿಕತೆಗೆ ಮತ್ತು ಕಾಲಮಾನಕ್ಕೆ ತಕ್ಕಂತೆ ಬೆಳೆಯುವ ಆಹಾರಗಳ ಕಡೆ ಗಮನ ಹರಿಸಿದರೆ ಉತ್ತಮ ಆರೋಗ್ಯದ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ ಎಂದರು.

ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಂ ಮಾತನಾಡಿ, ಮಕ್ಕಳು ಅಥವಾ ದೊಡ್ಡವರು ಆಹಾರ ಸೇವಿಸುವಾಗ ಅದರ ಸವಿ ಅನುಭವಿಸಿ ತಿನ್ನಬೇಕು. ಎಷ್ಟು ಪ್ರಮಾಣದಲ್ಲಿ ಯಾವಾಗ ತಿನ್ನಬೇಕು ಎಂಬ ಅರಿವು ಇರಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಯೋಗೇಶ್, ರಿಜಿಸ್ಟ್ರಾರ್ ಸುಬ್ಬರಾಯ, ಯೋಗ ತರಬೇತುದಾರ ಲಕ್ಷ್ಮಣ್ ಮಾತನಾಡಿದರು. ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ನಡೆಯಿತು. ಪೌಷ್ಟಿಕ ಧಾನ್ಯ ಮತ್ತು ತರಕಾರಿಗಳಿಂದ ಸಿದ್ಧಪಡಿಸಿದ ವಿವಿಧ ರೀತಿಯ ಅಡುಗೆಗಳ ತಿಂಡಿ ತಿನಿಸುಗಳನ್ನು ಪ್ರದರ್ಶನದಲ್ಲಿಟ್ಟಿದ್ದರು. ನಂತರ ಅನ್ನಪ್ರಾಶಾನ ನಡೆಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತುಮಕ್ಕಳ ಕಲ್ಯಾಣಾಭಿವೃದ್ಧಿ ತಾಲೂಕು ಅಧಿಕಾರಿ ಕೃಷ್ಣಮೂರ್ತಿ, ಫೈನಾನ್ಸ್‌ಅಧಿಕಾರಿ ಉಮೇಶ್, ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉಪ ಮುಖ್ಯಸ್ಥ ಡಾ.ಕೆ.ಎಸ್.ರವಿ, ಡಾ.ಕಾಂಚನ, ಕುಮಾರಿ ದೀಕ್ಷಾ, ಡಾ.ಎಸ್.ಕೆ.ರಾಘವೇಂದ್ರ ಭಾಗವಹಿಸಿದ್ದರು.