ಗಣರಾಜ್ಯೋತ್ಸವ ನಿಮಿತ್ತ ವಿವಿಧ ಗಣ್ಯರಿಗೆ ಪ್ರಶಸ್ತಿ ಪ್ರದಾನ

| Published : Jan 27 2024, 01:17 AM IST

ಸಾರಾಂಶ

ಗಣರಾಜ್ಯೋತ್ಸವ ನಿಮಿತ್ತ ಶುಕ್ರವಾರ ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಗಣರಾಜ್ಯೋತ್ಸವ ನಿಮಿತ್ತ ಶುಕ್ರವಾರ ನಗರದ ನೆಹರು ಕ್ರೀಡಾಂಗಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಾಹಿತ್ಯ ಸೇವೆಯಲ್ಲಿ ಜೈದೇವಿ ರವಿಂದ್ರ ಕುಮಾರ, ಕ್ರೀಡಾ ಕ್ಷೇತ್ರದಲ್ಲಿ ಎಸ್ತರ ರಾಣಿ ತಿಮೋತಿ ಮತ್ತು ಪುಪ್ಷಕ್ ನೆಲವಾಡೆ ಸಂತೋಷ ನೆಲವಾಡೆ, ಕೈಗಾರಿಕೆ ಸಾವಿತ್ರಿ ಪ್ರಕಾಶ ಭೋಸಲೇ, ಎಲೆಕ್ಟ್ರಾನಿಕ್‌ ಮೀಡಿಯಾ ಮಹಮ್ಮದ ಆಸೀಫ ಜಮಿರೊದ್ದಿನ, ಪತ್ರಿಕಾ ಮಾಧ್ಯಮ ಸುಧಾರಾಣಿ ಜೈಕುಮಾರ, ಸಂಗೀತ ಶಿವರಾಜ ಕಾಳಶೆಟ್ಟಿ ಮೊಗಲಪ್ಪ, ಆರೋಗ್ಯ ಸೇವೆ ಡಾ.ಸುಭಾಷ ಕರ್ಪೂರ್, ಕೃಷಿ ಕಾಶೀಲಿಂಗ ಅಗ್ರಹಾರ ವೀರಯ್ಯ, ವಿಕಲಚೇತನರ ಸೇವೆ ಲೋಕನಾಥ ಶಿವಶರಣಪ್ಪಾ ಕುಂಬಾರ, ಶಿಕ್ಷಣ ಸೌಭಾಗ್ಯವತಿ ರೇವಣಸಿದಪ್ಪಾ, ಸಮಾಜ ಸೇವೆ ಮಾರುತಿ ಶಿವರಾಜ ಮಾಸ್ಟರ, ಜಾನಪದ ಇಂದ್ರಮಾ ಶ್ಯಾಮರಾವ ಹಾಗೂ ಜಾನಪದ ಡೊಳ್ಳು ಕುಣಿತ ವೈಜಿನಾಥ ಹಣಮಂತ ವಗ್ಗೆ ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತಿತರರು ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಈ ವೇಳೆ ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಎಂಎಲ್ಸಿಗಳಾದ ಅರವಿಂದ ಅರಳಿ, ರಘುನಾಥರಾವ ಮಲ್ಕಾಪೂರೆ, ನಗರ ಸಭೆ ಅಧ್ಯಕ್ಷ ಮಹ್ಮದ ಗೌಸ್, ಜಿಲ್ಲಾಧಿಕಾರಿ ಹಾಗೂ ಎಸ್ಪಿ, ಸಿಇಓ ಇದ್ದರು.