ರಸ್ತೆ, ಶುದ್ಧ ಕುಡಿವ ನೀರು, ಕನಿಷ್ಠ ಸೌಕರ್ಯ ಇಲ್ಲದ ಗ್ರಾಮಕ್ಕೆ ಪುರಸ್ಕಾರ

| Published : Jul 20 2025, 01:17 AM IST

ರಸ್ತೆ, ಶುದ್ಧ ಕುಡಿವ ನೀರು, ಕನಿಷ್ಠ ಸೌಕರ್ಯ ಇಲ್ಲದ ಗ್ರಾಮಕ್ಕೆ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಶುದ್ಧ ಕುಡಿಯುವ ನೀರು ವ್ಯವಸ್ಥೆ ಇಲ್ಲ ಚರಂಡಿ ಇಲ್ಲದೆ ಓಣಿಗಳ ರಸ್ತೆಯಲ್ಲಿ ಹರಿಯುವ ಕೊಳಚೆ ನೀರು, ರಸ್ತೆಯ ಮೇಲೆ ನಿಂತಿರುವ ಕೊಳಚೆಯ ನೀರು, ಕೆಸರುಗದ್ದೆ ಅಂತಹ ಓಣಿಗಳಿಗೆ ತೆರಳುವ ರಸ್ತೆಯ ಮೇಲೆ ನಿಂತಿರುವ ಕೊಳಚೆ ನೀರು ನಿಲ್ಲುತ್ತಿದ್ದು, ನಿತ್ಯ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಪ್ರಕಾಶ ಖೋಬ್ರೆ

ಕನ್ನಡ ಪ್ರಭ ವಾರ್ತೆ ಕಮಲಾಪುರ

ಶುದ್ಧ ಕುಡಿಯುವ ನೀರು ವ್ಯವಸ್ಥೆ ಇಲ್ಲ ಚರಂಡಿ ಇಲ್ಲದೆ ಓಣಿಗಳ ರಸ್ತೆಯಲ್ಲಿ ಹರಿಯುವ ಕೊಳಚೆ ನೀರು, ರಸ್ತೆಯ ಮೇಲೆ ನಿಂತಿರುವ ಕೊಳಚೆಯ ನೀರು, ಕೆಸರುಗದ್ದೆ ಅಂತಹ ಓಣಿಗಳಿಗೆ ತೆರಳುವ ರಸ್ತೆಯ ಮೇಲೆ ನಿಂತಿರುವ ಕೊಳಚೆ ನೀರು ನಿಲ್ಲುತ್ತಿದ್ದು, ನಿತ್ಯ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಅಂಬಲಗಾ ಗ್ರಾಮ ಪಂಚಾಯಿತಿಗೆ 15 ಜನ ಸದಸ್ಯರಿದ್ದು ಎರಡನೇ ದೊಡ್ಡಗ್ರಾಮವಾಗಿದ್ದು ಗ್ರಾಮದಲ್ಲಿ 15 ನೂರು ಜನಸಂಖ್ಯೆ ಹೊಂದಿದ್ದು ಕನಿಷ್ಠ ಮೂಲ ಸೌಕರ್ಯಗಳಿಲ್ಲ. ಸಮಸ್ಯೆಗಳು ಗೋಚರಿಸುತ್ತಿವೆ. ಇದು ಯಾವುದೋ ಗ್ರಾಮದ ಚಿತ್ರಣವಲ್ಲ. 2023 24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾದ ಕಮಲಾಪುರ ತಾಲೂಕಿನ 12 ಕಿಮೀ ದೂರದಲ್ಲಿರುವ ಕುದುಮೂಡು ಗ್ರಾಮದ ವ್ಯವಸ್ಥೆ ಕಣ್ಣಿಗೆ ರಾಚಿದ ಪರಿ ಗ್ರಾಪಂ ಅಧ್ಯಕ್ಷರೇ ಸ್ಥಳೀಯ ಕಾಂಗ್ರೆಸ್ ಪ್ರಭಾವಿ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ತಾಲೂಕು ಘಟಕದ ಅಧ್ಯಕ್ಷರು ಎರಡೆರಡು ಹುದ್ದೆ ಹೊಂದಿರುವ ಅಧ್ಯಕ್ಷರ ಹಿಡಿತದಲ್ಲಿರುವ ಗ್ರಾಮ ಪಂಚಾಯತ ಸ್ಥಿತಿ ಅದೋಗತಿ ತಲುಪಿದೆ.

ಮೂಲ ಸೌಕರ್ಯ ಒದಗಿಸುವ ಗ್ರಾಮ ಪಂಚಾಯಿತಿ ಸಂಪೂರ್ಣ ನಿರ್ಲಕ್ಷ ವಹಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದ ದ್ವಾರದಲ್ಲಿರುವ ಇದೇ ನೀರು ತುಳಿದುಕೊಂಡು ಜನರು ಓಡಾಡುವ ಸ್ಥಿತಿ ಇದ್ದರೆ ಕೊಳಚೆ ನೀರು ತುಳಿದುಕೊಂಡು ಮಕ್ಕಳು ಅಂಗನವಾಡಿಗೆ ಬರುವುದರಿಂದ ಸಾಂಕ್ರಾಮಿಕ ರೋಗ ಭೀತಿ ಶುರುವಾಗಿದೆ. ಚರಂಡಿ ನೀರು ರಸ್ತೆ ಮೇಲೆ ಹರಿದು ಬರುತ್ತಿದೆ

ಗ್ರಾಮದ ಜನರು ಸಾಕಷ್ಟು ಬಾರಿ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಪಿಡಿಒ ಅವರಿಗೆ ಹೇಳಿದ್ದರು ಕ್ಯಾರೆ ಎನ್ನುತ್ತಿಲ್ಲ.

ಓಣಿಗಳಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ನಿಲ್ಲುತ್ತಿದ್ದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ಕ್ರಮ ತೆಗೆದುಕೊಂಡಿಲ್ಲ. ಅಗತ್ಯ ಇರುವ ಕಡೆ ಶೌಚಾಲಯ ನಿರ್ಮಿಸದೆ ಇರುವ ಕಾರಣ ಸಾರ್ವಜನಿಕರು ಮುಳ್ಳುಗಂಟಿ ಆಸರೆ ಹಾಗೂ ರಸ್ತೆಯ ಬದಿಯ ಮೇಲೆ ಶೌಚ ಮಾಡುವುದು ಅನಿವಾರ್ಯವಾಗಿದೆ. ಇದು ಗಾಂಧಿ ಗ್ರಾಮ ಪುರಸ್ಕಾರ ವಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮಕ್ಕೆ ಪ್ರಶಸ್ತಿ ಕೊಡುವರು ಕುದುಮುಡ ಗ್ರಾಮಕ್ಕೆ ಬಂದು ನೋಡಿ ಮೂಗು ಮುಚ್ಚಿಕೊಂಡು ಓಡಾಡಿದರೆ ವಾಸ್ತವ ಸ್ಥಿತಿ ಏನೆಂದು ಗೊತ್ತಾಗುತ್ತದೆ ಎಲ್ಲೋ ಕೂತು ಪ್ರಶಸ್ತಿ ಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.