ಬಾಗಲಕೋಟೆ ಬಾಲಕ-ಬಾಲಕಿಯರಿಗೆ ಪ್ರಶಸ್ತಿ

| Published : Oct 13 2023, 12:15 AM IST

ಬಾಗಲಕೋಟೆ ಬಾಲಕ-ಬಾಲಕಿಯರಿಗೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಪಂದ್ಯದಲ್ಲಿ ಬಾಗಲಕೋಟೆ ಜಿಲ್ಲಾ ತಂಡವು ಕೇವಲ 04 ಅಂಕಗಳಿಂದ ಗದಗ ತಂಡವನ್ನು ಮಣಿಸುವ ಮೂಲಕ 14 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಕೊನೆಯ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಪಂದ್ಯದಲ್ಲಿ ಬಾಗಲಕೋಟೆ ಜಿಲ್ಲಾ ತಂಡವು ಕೇವಲ 04 ಅಂಕಗಳಿಂದ ಗದಗ ತಂಡವನ್ನು ಮಣಿಸುವ ಮೂಲಕ 14 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಕಿಕ್ಕಿರಿದು ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ನೆರೆದಿದ್ದ ಇಲ್ಲಿನ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಚಪ್ಪಾಳೆ ಕೇಕೆಗಳ ಸಹಕಾರ ಪಡೆದ ಬಾಗಲಕೋಟೆಯ ಬಾಲಕಿಯರು ಗದಗ ತಂಡವನ್ನು ಅಂತಿಮವಾಗಿ (24-20) ರಿಂದ ಮಣಿಸಿದರು. ಪಂದ್ಯದ ಮೊದಲಾರ್ಧದಲ್ಲಿ 04 ಅಂಕಗಳ (10-06) ಮುನ್ನಡೆ ಸಾಧಿಸಿದ್ದ ಬಾಗಲಕೋಟೆ ಬಾಲಕಿಯರು ಅದೇ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಬಾಗಲಕೋಟೆ ತಂಡವು ಚಿಕ್ಕೋಡಿ ವಿರುದ್ಧ 06 ಅಂಕಗಳಿಂದ (31-25) ಜಯಗಳಿಸಿದರೇ, ಗದಗ ತಂಡ ಹಾವೇರಿ ವಿರುದ್ಧ ಟೈಬ್ರೇಕರ್‌ನಲ್ಲಿ 02 ಅಂಕಗಳಿಂದ ಮಣಿಸುವ ಮೂಲಕ ಅಂತಿಮ ಸುತ್ತನ್ನು ತಲುಪಿದ್ದವು.

14 ವರ್ಷದ ಬಾಲಕರ ವಿಭಾಗದಲ್ಲಿ ಕಾರವಾರಕ್ಕೆ ಪ್ರಶಸ್ತಿ:

ತೀವ್ರ ಹೋರಾಟ ತೋರಿದ ಕಾರವಾರ ಜಿಲ್ಲೆಯ ಬಾಲಕರು 09 ಅಂಕಗಳಿಂದ (37-28) ಬೆಳಗಾವಿಯನ್ನು ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು, ಪಂದ್ಯದ ಮೊದಲಾರ್ಧದಲ್ಲಿ ಕೇವಲ 04 ಅಂಕಗಳ(15-11) ಮುನ್ನಡೆ ಸಾಧಿಸಿದ್ದ ಕಾರವಾರ ದ್ವಿತೀಯಾರ್ಧದಲ್ಲಿ ರೈಡಿಂಗ್ ಮತ್ತಿ ಟ್ಯಾಕಲ್‌ನಲ್ಲಿ ಸಾಂಘಿಕ ಹೋರಾಟದಿಂದ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಕಾರವಾರ ತಂಡವು ಶಿರಸಿ ವಿರುದ್ಧ 14 ಅಂಕಗಳಿಂದ (49-35) ಜಯ ಗಳಿಸಿದರೇ, ಬೆಳಗಾವಿ ತಂಡವು ಚಿಕ್ಕೋಡಿ ವಿರುದ್ದ 03 ಅಂಕಗಳಿಂದ (43-40) ಮಣಿಸುವ ಮೂಲಕ ಅಂತಿಮ ಸುತ್ತನ್ನು ಪ್ರವೇಶಿಸಿದ್ದವು.

17 ವರ್ಷದ ಬಾಲಕಿಯರ ವಿಭಾಗದಲ್ಲಿ ಚಿಕ್ಕೋಡಿಗೆ ಪ್ರಶಸ್ತಿ:ಛಲ ಬಿಡದೇ ಮುನ್ನುಗ್ಗಿದ ಚಿಕ್ಕೋಡಿಯ ಬಾಲಕಿಯರು ಧಾರವಾಡದ ವಿರುದ್ಧ 04 ಅಂಕಗಳಿಂದ (22-18) ಜಯಿಸುವ ಮೂಲಕ ಪ್ರಶಸ್ತಿಗೆ ಭಾಜನರಾದರು. ಅಂತಿಮ ಪಂದ್ಯದ ಮೊದಲಾರ್ಧದಲ್ಲಿ 03 ಅಂಕಗಳ (07-10) ಹಿನ್ನಡೆ ಕಂಡಿತ್ತಾದ್ದರೂ ಸಹ ಸೆಕೆಂಡ್ ಹಾಫ್ ನಲ್ಲಿ ತೀವ್ರ ಹೋರಾಟ ನಡೆಸಿದ ಚಿಕ್ಕೋಡಿಯ ಬಾಲಕಿಯರು ಅಂತಿಮವಾಗಿ ಪ್ರಶಸ್ತಿಗೆ ಭಾಜನರಾದರು.

ಇದಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಚಿಕ್ಕೋಡಿ ಬಾಲಕಿಯರು ಅತಿಥೇಯ ಹಾವೇರಿಯನ್ನು 21 ಅಂಕಗಳಿಂದ (32-11) ಮಣಿಸಿದ್ದರು. ಎರಡನೇ ಸೆಮಿಫೈನಲ್‌ನಲ್ಲಿ ಕೇವಲ 03 ಗುಣಗಳಿಂದ (26-23) ಧಾರವಾಡ ಬಾಲಕಿಯರು ಕಾರವಾರ ಜಿಲ್ಲಾ ಬಾಲಕಿಯರ ವಿರುದ್ಧ ಜಯಗಳಿಸಿದ್ದರು.

17 ವರ್ಷದ ಬಾಲಕರ ವಿಭಾಗದಲ್ಲಿ ಬಾಗಲಕೋಟೆಗೆ ಪ್ರಶಸ್ತಿ:ಸದರಿ ವಿಭಾಗದಲ್ಲಿ ಬಾಗಲಕೋಟೆ ಬಾಲಕರು ಶಿರಸಿ ಶೈಕ್ಷಣಿಕ ಜಿಲ್ಲೆಯ ವಿರುದ್ದ 09 ಅಂಕಗಳಿಂದ (13-04)ನಿರಾಯಾಸದ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಬಾಗಲಕೋಟೆ ತಂಡವು ಬೆಳಗಾವಿ ವಿರುದ್ಧ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ಗದಗ ವಿರುದ್ಧ ಜಯ ಸಾಧಿಸಿದ್ದರು.