ಡಾ.ರಾಮಣ್ಣವರ ಮಂಡಿಸಿದ ಪ್ರಬಂಧಕ್ಕೆ ಪ್ರಶಸ್ತಿ

| Published : Sep 04 2025, 02:00 AM IST

ಡಾ.ರಾಮಣ್ಣವರ ಮಂಡಿಸಿದ ಪ್ರಬಂಧಕ್ಕೆ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದ ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ವೈದ್ಯಕೀಯ ಮಹಾವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗ ಆಯೋಜಿಸಿದ್ದ ರಾಜ್ಯ ಘಟಕ ಅಂಗರಚನಾ ಶಾಸ್ತ್ರಜ್ಞರ ಬೆಳ್ಳಿ ಮಹೋತ್ಸವ ಸಮ್ಮೇಳನದಲ್ಲಿ ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಮುಖ್ಯಸ್ಥ, ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ಅತ್ಯುತ್ತಮ ವೈಜ್ಞಾನಿಕ ಪ್ರಶಸ್ತಿ ಲಭಿಸಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಧಾರವಾಡದ ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ವೈದ್ಯಕೀಯ ಮಹಾವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗ ಆಯೋಜಿಸಿದ್ದ ರಾಜ್ಯ ಘಟಕ ಅಂಗರಚನಾ ಶಾಸ್ತ್ರಜ್ಞರ ಬೆಳ್ಳಿ ಮಹೋತ್ಸವ ಸಮ್ಮೇಳನದಲ್ಲಿ ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರರಚನಾ ವಿಭಾಗದ ಮುಖ್ಯಸ್ಥ, ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ ಅವರಿಗೆ ಅತ್ಯುತ್ತಮ ವೈಜ್ಞಾನಿಕ ಪ್ರಶಸ್ತಿ ಲಭಿಸಿದೆ.

ವಿಶ್ವ ದೇಹದಾನ ದಿನ: ವಿಜ್ಞಾನ ಮತ್ತು ವೈದ್ಯಕೀಯದ ಮೌನ ಶಿಕ್ಷಕರನ್ನು ಗೌರವಿಸುವುದು. ದೇಹದಿಂದ ಜ್ಞಾನವನ್ನು ಬೆಳಗಿಸಿದ ದಾನಿಗಳ ಸ್ಮರಣೆ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ, ಅಂಗರಚನಾ ಶಾಸ್ತ್ರಜ್ಞರ ಘಟಕದ (ಕೆಸಿಎ) ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ಕಾಂತ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಅಂಗ ರಚನಾ ಶಾಸ್ತ್ರಜ್ಞರ ರಾಜ್ಯ ಘಟಕದ ಅಧ್ಯಕ್ಷೆ ಡಾ.ಅಶ್ವಿನಿ ಸಿ.ಎ, ಉಪಾಧ್ಯಕ್ಷ ಡಾ.ಎನ್.ಎಂ.ಸುರೇಶ, ಡಾ.ವಿದ್ಯಾ ಸಿ.ಎಸ್‌, ಪ್ರಧಾನ ಕಾರ್ಯದರ್ಶಿ ಡಾ.ಪಿ.ಎಸ್‌.ಭೂಸರಡ್ಡಿ,ಧಾರವಾಡದ ಎಸ ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ವಿಜಯ ಕುಲಕರ್ಣಿ,ಡಾ.ವೀಣಾ ಕುಲಕರ್ಣಿ, ಡಾ.ಎಸ್.ಕೆ ದೇಶಪಾಂಡೆ, ಡಾ.ಸುರೇಶ ಮನಗುತ್ತಿ ಹಾಗೂ ಡಾ.ನಾಗರಾಜ ಮಲ್ಲಶೆಟ್ಟಿ ಇದ್ದರು.ಈ ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಅಂಗರಚನಾ ಶಾಸ್ತ್ರಜ್ಞರು ಪಾಲ್ಗೊಂಡು 200ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಮಂಡಿಸಿದರು. ಈ ಸಾಧನೆಗೆ ಕೆಎಲ್ಇ ಬಿ.ಎಂ.ಕೆ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುಹಾಸಕುಮಾರ ಶೆಟ್ಟಿ ಶಿಕ್ಷಕ,ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.