ಕ್ಷೇತ್ರದ ಮತದಾರರು ಕೊಟ್ಟ ಅವಕಾಶ ಪರಿಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವುದರಿಂದ ಉತ್ತಮ ಶಾಸಕ ಪ್ರಶಸ್ತಿ ಲಭಿಸಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಹೇಳಿದರು.

ಉಪ್ಪಿನಂಗಡಿ : ಕ್ಷೇತ್ರದ ಮತದಾರರು ಕೊಟ್ಟ ಅವಕಾಶ ಪರಿಪೂರ್ಣವಾಗಿ ಸದುಪಯೋಗಪಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿರುವುದರಿಂದ ಉತ್ತಮ ಶಾಸಕ ಪ್ರಶಸ್ತಿ ಲಭಿಸಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಹೇಳಿದರು.

ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದಲ್ಲಿ ಉತ್ತಮ ಶಾಸಕ ಪ್ರಶಸ್ತಿಗೆ ಭಾಜನರಾದ ನಿಮಿತ್ತ ಕಲ್ಲೇರಿಯ ತಣ್ಣೀರುಪಂತ ಕೃಷಿಪತ್ತಿನ ಸಹಕಾರಿ ಸಭಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ತಣ್ಣೀರುಪಂತ, ಕರಾಯ, ಬರ‍್ಯ, ಉರುವಾಲು, ತೆಕ್ಕಾರು, ಪುತ್ತಿಲ, ಇಳಂತಿಲ ಸೇರಿದಂತೆ ಏಳು ಗ್ರಾಮದ ಗ್ರಾಮಸ್ಥರು ತನಗೆ ನೀಡಿದ ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದರು.

ಆದ್ಯತೆಯ ಮೇರೆಗೆ ಹಂತ ಹಂತವಾಗಿ ಯೋಜನೆಗಳಿಗೆ ಮಂಜೂರಾತಿ ಪಡೆಯುವಲ್ಲಿ ತನ್ನ ಕೈಯಲ್ಲಿ ಆದ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಬಳಿಕ ಮಾತನಾಡಿದ ಹಿರಿಯ ನ್ಯಾಯವಾದಿ ಅಗರ್ತ ಸುಬ್ರಹ್ಮಣ್ಯ ಕುಮಾರ್ ಮಾತನಾಡಿ ಶಾಸಕ ಹರೀಶ ಪೂಂಜಾ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅದೆಷ್ಟೆ ಅಭಿವೃದ್ಧಿ ಕೆಲಸ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಆ ಮೂಲಕ ಜನರ ವಿಶ್ವಾಸಕ್ಕೆ ಇಲ್ಲಿ ನೆರೆದಿದ್ದ ಸಭಿಕರೇ ಸಾಕ್ಷಿ ಎಂದರು.ಅಧ್ಯಕ್ಷತೆ ವಹಿಸಿದ ಕರಾಯ ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾದ ಅತುಲ್ ಕುಮಾರ್ ಹಲೇಜಿ ಮಾತನಾಡಿ ಶಾಸಕ ಮಾದರಿ ಕಾರ್ಯವೈಖರಿ ಶ್ಲಾಘನೀಯ ಎಂದರು.

ಪ್ರಮುಖರಾದ ಸೀತಾರಾಮ ಶೆಟ್ಟಿ, ದಾಸಪ್ಪ ಗೌಡ, ಸುದರ್ಶನ್ ಕೊಲ್ಲಿ, ಅನಂತಕೃಷ್ಣ ಕುದ್ದಣ್ಣಾಯ, ಆನಂದ, ಸಂದೇಶ ಕುಮಾರ್ ಜೈನ್, ಜನಾರ್ಧನ ಶೆಟ್ಟಿ, ಸೇಸಪ್ಪ ಸಾಲಿಯಾನ್, ಪ್ರಸನ್ನ ದರ್ಬೆ, ಪ್ರಶಾಂತ್ ಪೈ ಬರ‍್ಯ, ಚಿದಾನಂದ ನಾಯ್ಕ, ರಾಜಶೇಖರ ರೈ, ಜಗದೀಶ ಶೆಟ್ಟಿ ಮೈರಾ, ಮಂಜುನಾಥ ಸಾಲ್ಯಾನ್, ಲೀಲಾವತಿ, ಸುಧಾ, ಸಿವಿಲ್ ಇಂಜಿನಿಯರ್ ಸಾಮ್ರಾಟ್ ಕರ್ಕೇರ, ಮನೋಹರ ಶೆಟ್ಟಿ ಬರ‍್ಯ, ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು. ತಣ್ಣೀರುಪಂತ ಸಿ.ಎ ಬ್ಯಾಂಕ್ ಅಧ್ಯಕ್ಷ ಜಯನಂದ ಕಲ್ಲಾಪು ಸ್ವಾಗತಿಸಿ ಪ್ರಭಾಕರ ಪೊಸಂತೊಡಿ ವಂದಿಸಿದರು.ಎರಡು ಲಕ್ಷ ಬಾಂಡ್‌ ವಿತರಣೆ: ಇದೇ ಸಂದರ್ಭದಲ್ಲಿ ಬರ‍್ಯ ಪುತ್ತಿಲ ಬಿಜೆಪಿ ಸ್ಪಂದನಾ ವತಿಯಿಂದ ಸಮಾಜದ ಅಶಕ್ತ ಕುಟುಂಬದ ಇತ್ತೀಚೆಗೆ ಮೃತರಾದ ಪುತ್ತಿಲ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಪ್ರವೀಣ ಬೇಂಗಿಲ ಅವರ ಮಗುವಿನ ಭವಿಷ್ಯಕ್ಕೆ ಎರಡು ಲಕ್ಷ ರು. ಭದ್ರತಾ ಬಾಂಡ್ ನ್ನು ಶಾಸಕರ ಮೂಲಕ ವಿತರಿಸಿದರು.