ಕನ್ನಡಪ್ರಭದ ಉಗಮ ಸೇರಿ 25 ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಶಸ್ತಿ

| N/A | Published : Mar 01 2025, 01:01 AM IST / Updated: Mar 01 2025, 11:38 AM IST

journalism
ಕನ್ನಡಪ್ರಭದ ಉಗಮ ಸೇರಿ 25 ಪತ್ರಕರ್ತರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಕೆಯುಡಬ್ಲ್ಯುಜೆ ದತ್ತಿನಿಧಿಯ 25 ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ‘ಕನ್ನಡಪ್ರಭ’ದ ತುಮಕೂರು ಜಿಲ್ಲೆಯ ವಿಶೇಷ ಪ್ರತಿನಿಧಿ ಉಗಮ ಶ್ರೀನಿವಾಸ್ ಸೇರಿದಂತೆ ಹಲವು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದೆ.

 ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ ಕೆಯುಡಬ್ಲ್ಯುಜೆ ದತ್ತಿನಿಧಿಯ 25 ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ‘ಕನ್ನಡಪ್ರಭ’ದ ತುಮಕೂರು ಜಿಲ್ಲೆಯ ವಿಶೇಷ ಪ್ರತಿನಿಧಿ ಉಗಮ ಶ್ರೀನಿವಾಸ್ ಸೇರಿದಂತೆ ಹಲವು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದೆ.

ವೃತ್ತಿ ಸೇವೆ, ಸಾಮಾಜಿಕ ಬದ್ಧತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ:

ಸಿ.ಆರ್.ಕೃಷ್ಣರಾವ್ ಪ್ರಶಸ್ತಿ- ಉಗಮ ಶ್ರೀನಿವಾಸ್, ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ- ಸುಬ್ಬು ಹೊಲೆಯಾರ್, ಡಿವಿಜಿ ಪ್ರಶಸ್ತಿ- ರಾಘವೇಂದ್ರ ಗಣಪತಿ, ಎಚ್.ಎಸ್. ದೊರೆಸ್ವಾಮಿ ಪ್ರಶಸ್ತಿ- ಜಿ.ಯು.ಭಟ್, ಎಸ್.ವಿ. ಜಯಶೀಲರಾವ್ ಪ್ರಶಸ್ತಿ- ಅನು ಶಾಂತರಾಜು, ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ- ಸುಭಾಷ್ ಹೂಗಾರ, ಗೊಮ್ಮಟ ಮಾಧ್ಯಮ ಪ್ರಶಸ್ತಿ- ಎಂ.ಆರ್.ಸತ್ಯನಾರಾಯಣ, ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ- ಮಂಜುಶ್ರೀ ಎಂ. ಕಡಕೊಳ, ಬದರಿನಾಥ ಹೊಂಬಾಳೆ ಪ್ರಶಸ್ತಿ- ಗಂಗಹನುಮಯ್ಯ, ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ- ಡಾ.ಸಿದ್ಧನಗೌಡ ಪಾಟೀಲ್, ಕಿಡಿಶೇಷಪ್ಪ ಪ್ರಶಸ್ತಿ- ಮು.ವೆಂಕಟೇಶಯ್ಯ, ರವಿ ಬೆಳಗೆರೆ ಪ್ರಶಸ್ತಿ- ಎಂ.ಕೆ.ಹೆಗಡೆ, ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ- ಎಂ.ಯೂಸುಫ್ ಪಟೇಲ್, ಎಚ್.ಕೆ.ವೀರಣ್ಣಗೌಡ ಸ್ಮಾರಕ ಪ್ರಶಸ್ತಿ- ಬಸವರಾಜ ಹೆಗ್ಗಡೆ, ರಾಜಶೇಖರ ಕೋಟಿ ಪ್ರಶಸ್ತಿ- ಕೆ.ಕೆ.ಬೋಪಣ್ಣ, ಪಿ.ರಾಮಯ್ಯ ಪ್ರಶಸ್ತಿ- ಎಸ್.ಟಿ.ರವಿಕುಮಾರ್, ಮಾ.ರಾಮಮೂರ್ತಿ ಸ್ಮಾರಕ ಪ್ರಶಸ್ತಿ- ತಾ.ನಂ. ಕುಮಾರಸ್ವಾಮಿ, ಮಹದೇವ ಪ್ರಕಾಶ್ ಪ್ರಶಸ್ತಿ- ಪ್ರಭುಲಿಂಗ ನಿಲೂರೆ, ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ- ಚಂದ್ರಶೇಖರ ಶೃಂಗೇರಿ, ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ- ಗಿರೀಶ್ ಉಮ್ರಾಯಿ, ಎಂ.ನಾಗೇಂದ್ರ ರಾವ್ ಪ್ರಶಸ್ತಿ- ಕೆ.ಬಿ.ಜಗದೀಶ್, ಶ್ರೀಮತಿ ಗಿರಿಜಮ್ಮ ರುದ್ರಪ್ಪ ತಾಳಿಕೋಟಿ ಪ್ರಶಸ್ತಿ- ಕವಿತ, ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ- ಗಣೇಶ್ ಕಾಸರಗೋಡು, ಮೂಡಣ ಹಾವೇರಿ ಪ್ರಶಸ್ತಿ- ಎಂ.ಚಿರಂಜೀವಿ ಅವರು ಆಯ್ಕೆಯಾಗಿದ್ದಾರೆ.

ಕೆಯುಡಬ್ಲ್ಯುಜೆ ವಿಶೇಷ ಪ್ರಶಸ್ತಿಗಳು:

ರಂಗನಾಥ್ ಎಸ್. ಭಾರದ್ವಾಜ್, ರಮಾಕಾಂತ್, ಶ್ರೀನಿವಾಸ್, ಬಿ. ಪಿಳ್ಳರಾಜು, ಭಾಸ್ಕರ ರೈ ಕಟ್ಟ, ಗುರುಶಾಂತ.ಎನ್, ಎಸ್.ಎಂ.ಮನೋಹರ, ಸಿ.ಬಿ.ಸುಬೇದಾರ್.