ಸಾರಾಂಶ
ಮುಧೋಳದ ಲಲಿತಾ ಸಂಗಪ್ಪ ಸೋರಗಾಂವಿ, ತೇಜಸ್ವಿನಿ ಬಾಬು ಬರಗಿ, ಶೈಲಾ ವಿವೇಕ ಕಕರಡ್ಡಿ ಮಾಲಿಕತ್ವದ ಮಳಲಿ ಗ್ರಾಮದ ನೇತ್ರಾವತಿ ಫಾಲಿಪ್ಯಾಕ್ ಪ್. ಲಿ. ಸಂಸ್ಥೆಗೆ 2025ರ ಸಾಲಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಔಟ್ ಸ್ಟ್ಯಾಂಡಿಂಗ್ ವುಮನ್ ಎಂಟರ್‌ಪ್ರೇನರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಧೋಳ: ಮುಧೋಳದ ಲಲಿತಾ ಸಂಗಪ್ಪ ಸೋರಗಾಂವಿ, ತೇಜಸ್ವಿನಿ ಬಾಬು ಬರಗಿ, ಶೈಲಾ ವಿವೇಕ ಕಕರಡ್ಡಿ ಮಾಲಿಕತ್ವದ ಮಳಲಿ ಗ್ರಾಮದ ನೇತ್ರಾವತಿ ಫಾಲಿಪ್ಯಾಕ್ ಪ್. ಲಿ. ಸಂಸ್ಥೆಗೆ 2025ರ ಸಾಲಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಔಟ್ ಸ್ಟ್ಯಾಂಡಿಂಗ್ ವುಮನ್ ಎಂಟರ್‌ಪ್ರೇನರ್ ಪ್ರಶಸ್ತಿಯನ್ನು ಸಂಸ್ಥೆಯ ಸಿಇಒ ಸಂಗಪ್ಪ ಕಲ್ಲಪ್ಪ ಸೋರಗಾಂವಿ ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಬಂಡವಾಳ ಹೂಡಿಕೆದಾರರ (ಇನ್ವೆಸ್ಟ್ ಕರ್ನಾಟಕ-2025) ಸಮಾವೇಶದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ಬೃಹತ್ ಹಾಗೂ ಮದ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಇಲಾಖೆಯ ಅಧಿಕಾರಿಗಳಿಂದ ಪ್ರಶಸ್ತಿ ಸ್ವಿಕರಿಸಿದರು.