ಸಾರಾಂಶ
ಹಳೆಯ ವಿದ್ಯಾರ್ಥಿ ಸುಮನ್ ನಾರಾಯಣ್ ನೆನಪಿಗಾಗಿ ಮಾನವ ಸಂಪನ್ಮೂಲ ನಿರ್ವಹಣೆಯ ವಿಷಯದಲ್ಲಿ ಉತ್ತಮ ಸಾಧನೆಗಾಗಿ ನೀಡುವ ಚಿನ್ನದ ಪದಕ ಪಡೆದರು.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಾಮುಂಡಿಬೆಟ್ಟ ರಸ್ತೆಯಲ್ಲಿರುವ ಎಸ್ಡಿಎಂ ಐಎಂಡಿಯ 29ನೇ ವಾರ್ಷಿಕ ಘಟಿಕೋತ್ಸವವು ಶುಕ್ರವಾರ ಜರುಗಿತು.ಪಿಜಿಡಿಎಂ 2022-2024 ರ ಬ್ಯಾಚ್ ನಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳು ಮುಖ್ಯ ಅತಿಥಿ ಟಿಮ್ ಕೆನ್ ಇಂಡಿಯಾದ ಅಧ್ಯಕ್ಷ ಸಂಜಯ್ ಕೌಲ್ ಚಿನ್ನದ ಪದಕ ಪ್ರದಾನ ಮಾಡಿದರು.
.ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಅಧ್ಯಕ್ಷರ ಚಿನ್ನದ ಪದಕ - ಉಮಾ ಸಾಯಿ ಕಿರಣ್ ಮಿನ್ನಾಕುರಿ, ಹಳೆಯ ವಿದ್ಯಾರ್ಥಿ ಅಂಕುರ್ ಗುಪ್ತ ನೆನಪಿಗಾಗಿ ಹಣಕಾಸು ವಿಷಯದಲ್ಲಿ ಉತ್ತಮ ಸಾಧನೆಗಾಗಿ ನೀಡುವ ಚಿನ್ನದ ಪದಕವನ್ನು ಕೆ.ಕೆ. ಕರುಂಬಯ್ಯ ತಮ್ಮದಾಗಿಸಿಕೊಂಡರು.ಹಳೆಯ ವಿದ್ಯಾರ್ಥಿ ಸುಮನ್ ನಾರಾಯಣ್ ನೆನಪಿಗಾಗಿ ಮಾನವ ಸಂಪನ್ಮೂಲ ನಿರ್ವಹಣೆಯ ವಿಷಯದಲ್ಲಿ ಉತ್ತಮ ಸಾಧನೆಗಾಗಿ ನೀಡುವ ಚಿನ್ನದ ಪದಕ ಪಡೆದರು.
ಮಾರ್ಕೆಟಿಂಗ್ ವಿಷಯದಲ್ಲಿ ಉತ್ತಮ ಸಾಧನೆಗಾಗಿ ಉಮಾ ಸಾಯಿಕಿರಣ್ ಮಿನ್ನಾಕುರಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಅಲ್ಲದೆ ಸಿಸ್ಟಮ್ಸ್ ವಿಷಯದಲ್ಲಿ ಉತ್ತಮ ಸಾಧನೆಗಾಗಿಯೂ ಚಿನ್ನದ ಪದಕ ಪಡೆದಿದ್ದಾರ.ಹಳೆಯ ವಿದ್ಯಾರ್ಥಿ ಅಂಕುರ್ ಗುಪ್ತ ನೆನಪಿಗಾಗಿ ಒಟ್ಟಾರೆ ಅತ್ಯುತ್ತಮ ಪ್ರದರ್ಶನಕ್ಕೆ ರಜತ್ಶಹಾ ಚಿನ್ನಪಡೆದಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಡಾ.ಎಸ್.ಎನ್. ಪ್ರಸಾದ್ ಮೊದಲಾದವರು ಇದ್ದರು.