ಸಿಟಿಆರ್ ಐ ಮುಖ್ಯಸ್ಥರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

| Published : May 06 2024, 12:30 AM IST

ಸಿಟಿಆರ್ ಐ ಮುಖ್ಯಸ್ಥರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಮೂಲತಃ ತಮಿಳುನಾಡಿನ ಪುದುಚೇರಿಯ ಡಾ. ರಾಮಕೃಷ್ಣನ್ 1997ರಲ್ಲಿ ಹುಣಸೂರಿನ ಸಿಟಿಆರ್ಐ ಕೇಂದ್ರದಲ್ಲಿ ಕರ್ತವ್ಯ ಆರಂಭಿಸಿ ವಿವಿಧ ಹಂತಗಳಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ 2013ರಲ್ಲಿ ಕೇಂದ್ರದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್ ಐ)ದ ಮುಖ್ಯಸ್ಥ ಡಾ.ಎಸ್. ರಾಮಕೃಷ್ಣನ್ ಅವರಿಗೆ ಇಂಡಿಯನ್ ಸೊಸೈಟಿ ಆಫ್ ಟೊಬ್ಯಾಕೋ ಸೈನ್ಸ್ ಮತ್ತು ಐಸಿಎಆರ್- ಕೇಂದ್ರೀಯ ತಂಬಾಕು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಕೊಡಮಾಡುವ ಫೆಲೋ ಆಫ್ ಇಂಡಿಯನ್ ಸೊಸೈಟಿ ಆಫ್ ಟೊಬ್ಯಾಕೋ ಸೈನ್ಸ್2020 (ಎಫ್.ಐ.ಎಸ್.ಟಿ.ಎಸ್- 2020) ನೀಡಿ ಗೌರವಿಸಲಾಯಿತು.

ಆಂಧ್ರಪ್ರದೇಶದ ರಾಜಮುಂಡ್ರಿಯ ಐಸಿಎಆರ್- ಸಿಟಿಆರ್ಐನ ಕೇಂದ್ರ ಕಚೇರಿಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ 77ನೇ ಐಸಿಎಆರ್- ಸಿಟಿಆರ್ಐ ಫೌಂಡೇಷನ್ ಡೇ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ವಿಜ್ಞಾನಿ, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ ನ ಕಾರ್ಯನಿರ್ವಾಹಕ ಪ್ರಧಾನ ನಿರ್ದೇಶಕ ಡಾ. ಟ್ರಿಲೋಖನ್ ಮಹಾಪಾತ್ರ ಪ್ರಶಸ್ತಿ ನೀಡಿ ಗೌರವಿಸಿದರು.

ಮೂಲತಃ ತಮಿಳುನಾಡಿನ ಪುದುಚೇರಿಯ ಡಾ. ರಾಮಕೃಷ್ಣನ್ 1997ರಲ್ಲಿ ಹುಣಸೂರಿನ ಸಿಟಿಆರ್ಐ ಕೇಂದ್ರದಲ್ಲಿ ಕರ್ತವ್ಯ ಆರಂಭಿಸಿ ವಿವಿಧ ಹಂತಗಳಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ 2013ರಲ್ಲಿ ಕೇಂದ್ರದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು. ತಂಬಾಕು ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವುದು, ಪರಿಸರ ಸ್ನೇಹಿ ಕೃಷಿ ಮತ್ತು ತಂಬಾಕಿಗೆ ಬೆಂಬಿಡದೆ ಕಾಡುತ್ತಿದ್ದ ಸೊರಗು ರೋಗ (ಫ್ಯೂಸೇರಿಯಮ್ ವಿಲ್ಡ್ಡಿಸೀಸ್)ಕ್ಕೆ ಸೂಕ್ತ ಪರಿಹಾರ ನೀಡಿದ ಇವರ ಸಂಶೋಧನೆ ಅನನ್ಯವಾದುದು. ಎಫ್.ಸಿ.ಎಚ್ (ಫ್ಲೂ ಕ್ಯೂರ್ಡ್ ಹುಣಸೂರು) 222 ಎನ್ನುವ ನೂತನ ತಂಬಾಕು ತಳಿಯನ್ನು ಸಂಶೋಧನೆಯ ಮೂಲಕ ಮಾರುಕಟ್ಟೆಗೆ ತರುವಲ್ಲಿ ಡಾ. ರಾಮಕೃಷ್ಣನ್ ಪಾತ್ರ ಬಹುದೊಡ್ಡದು ಎಂದರು.

ಇದೀಗ ರಾಜ್ಯಾದ್ಯಂತ ತಂಬಾಕು ಬೆಳೆಗಾರರು ಎಫ್.ಸಿ.ಎಚ್- 222 ತಳಿಯನ್ನೇ ಬಳಸುತ್ತಿದ್ದಾರೆ. ಮಾತ್ರವಲ್ಲದೇ ರೋಗಮುಕ್ತ ಎಫ್.ಸಿ.ವಿ ತಂಬಾಕು ಬೆಳೆಯಲು ಕೋಕಾಪೀಟ್ ಮಾಧ್ಯಮದ ಮೂಲಕ ಟ್ರೈಕೋಡರ್ಮ ಮತ್ತು ಫಾಸಿಲೋಮೈಸಿಸ್ ಔಷಧಗಳ ಬಳಕೆಯ ಕುರಿತು ನೀಡಿದ ಸಂಶೋಧನೆ ಇಂದು ರೈತರಿಗೆ ರೋಗಮುಕ್ತ ತಂಬಾಕು ಬೆಳೆಯಲು ಸಾಧ್ಯವಾಗಿದೆ ಎಂದು ಪ್ರಗತಿಪರ ರೈತರು ತಿಳಿಸುತ್ತಾರೆ.