ಸಾರಾಂಶ
ಪಟ್ಟಣದ ಶಾಲಾ ಮೈದಾನದಲ್ಲಿ ಕೋಳಾಲ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯಿತು.
ಕೊರಟಗೆರೆ: ಪಟ್ಟಣದ ಶಾಲಾ ಮೈದಾನದಲ್ಲಿ ಕೋಳಾಲ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯಿತು.
ಮಹಾಲಕ್ಷ್ಮಿ ವಿದ್ಯಾ ಸಂಸ್ಥೆ ಶಿಕ್ಷಕ ಸೋಮಶೇಖರ್ ಮಾತನಾಡಿ, ತಾಲೂಕಿನಲ್ಲಿ ಆರು ಹೋಬಳಿಗಳಿದ್ದು, ಅದರಲ್ಲಿ ಕೋಳಾಲ ದೊಡ್ಡ ಹೋಬಳಿಯಾಗಿದೆ. ಇದರಲ್ಲಿ ಏಳು ಕ್ಲಸ್ಟರ್‌ಗಳಿದ್ದು. ೨೫ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿವೆ. ಇದರಲ್ಲಿ ನಮ್ಮ ಶಾಲೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಾಧನೆ ಪ್ರಮಾಣ ಹೆಚ್ಚುತ್ತಿದೆ. ನಮಗೆ ಮತ್ತು ನಮ್ಮ ಶಾಲೆಗೆ ಹಾಗೂ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಗೆ ಕೀರ್ತಿ ತಂದಿದ್ದಾರೆ ಎಂದರು.ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ. ವಾಸುದೇವ್. ಕಾರ್ಯದರ್ಶಿ ಮುರಳಿ ಕೃಷ್ಣ. ಭುಜಂಗಯ್ಯ ಆರ್. ಧರ್ಮದರ್ಶಿ ನಟರಾಜು. ಶ್ರೀ ಪ್ರಸಾದ್. ರವಿರಾಜ್ ಅರಸ್. ಮಂಜುನಾಥ್ . ನಾಗರಾಜು. ಲಕ್ಷ್ಮೀನರಸಯ್ಯ. ವಿಶೇಷ ಅಧಿಕಾರಿ ಕೇಶವಮೂರ್ತಿ. ಕಾರ್ಯನಿರ್ವಣ ಅಧಿಕಾರಿ ಲಕ್ಷ್ಮಣ್ ಹಾಜರಿದ್ದರು.