ಸಾರಾಂಶ
ದ್ಯಾಗಿರಿಯ ಬಿ.ವಿ.ವಿ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನಿಷಾ ನದಾಪ ಕಲಾ ವಿಭಾಗದಲ್ಲಿ 590 ಅಂಕಗಳ ಮೂಲಕ ಇಡೀ ರಾಜ್ಯಕ್ಕೆ 7 ಮತ್ತು ಜಿಲ್ಲೆಗೆ ಪ್ರಥಮ ರ್‍ಯಾಂಕ್ ಪಡೆದಿದ್ದಾಳೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಸಕ್ತ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿನ ಫಲಿತಾಂಶ ಹೆಮ್ಮೆ ಪಡುವಂತಾಗಿದೆ. ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಸಮಾಜಕ್ಕೆ ಮಾದರಿಯಾಗುವಂತಾಗಲಿ ಎಂದು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಬಿ.ವಿ.ವಿ.ಸಂಘದ ಪ.ಪೂ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸತ್ಕರಿಸಿ ಮಾತನಾಡಿದ ಅವರು, ವಿದ್ಯಾಗಿರಿಯ ಬಿ.ವಿ.ವಿ ಸಂಘದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನಿಷಾ ನದಾಪ ಕಲಾ ವಿಭಾಗದಲ್ಲಿ 590 ಅಂಕಗಳ ಮೂಲಕ ಇಡೀ ರಾಜ್ಯಕ್ಕೆ 7 ಮತ್ತು ಜಿಲ್ಲೆಗೆ ಪ್ರಥಮ ರ್‍ಯಾಂಕ್ ಪಡೆದಿದ್ದಾಳೆ. ಪ್ರವೀಣ್ ಕೊಲ್ಕಾರ ವಿಜ್ಞಾನ ವಿಭಾಗದಲ್ಲಿ 590 ಅಂಕಗಳೊಂದಿಗೆ ರಾಜ್ಯಕ್ಕೆ 9 ಹಾಗೂ ಜಿಲ್ಲೆಗೆ 2ನೇ ರ್‍ಯಾಂಕ್ ಪಡೆದಿರುವುದು ಖುಷಿ ಪಡುವ ವಿಚಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾ ವಿಭಾಗದಲ್ಲಿ ಬಾಗಲಕೋಟೆಯಲ್ಲಿನ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಮೋನಿಕಾ ಪೂಜಾರಿ 589/600, ಗಂಗವ್ವ ಎಚ್.ಮಡ್ಡಿ 573/600, ರಾಮದುರ್ಗದ ಸ್ಟೇಟ್ ಪದವಿಪೂರ್ವ ಕಾಲೇಜಿನ ನೇತ್ರಾವತಿ 570/600, ಮುಧೋಳದ ಬಿವಿವಿಎಸ್ ಮಹಿಳಾ ಪ.ಪೂ ಕಾಲೇಜಿನ ಆರ್.ಎಸ್. ಕಲ್ಮಡಿ, ವಾಣಿಜ್ಯ ವಿಭಾಗದಲ್ಲಿ ರಾಮದುರ್ಗದ ಸ್ಟೇಟ್ ಪದವಿಪೂರ್ವ ಕಾಲೇಜಿ ರೇಖಾ ಪಾಟೀಲ 679/600, ಪಲ್ಲವಿ ಕಮ್ಮಾರ 578/600, ಲೋಕಾಪುರದ ಬಿವಿವಿಎಸ್ ಮಹಿಳಾ ಪಪೂ ಕಾಲೇಜಿನ ವಿದ್ಯಾ ಬಿರಾದಾರ ಪಾಟೀಲ 574/600, ಪವಿತ್ರಾ ಪಾಟೀಲ 574/600, ಸಾಲಹಳ್ಳಿಯ ರಾಮಕೃಷ್ಣ ಪರಮಹಂಸ ಪ.ಪೂ ಕಾಲೇಜಿನ ಶಂಕರಗೌಡ ಪಾಟೀಲ 574/600, ವಿಜ್ಞಾನ ವಿಭಾಗದಲ್ಲಿ ರಾಮದುರ್ಗದ ಸ್ಟೇಟ ಪದವಿಪೂರ್ವ ಕಾಲೇಜಿನ ಜ್ಯೋತಿ ಕಡಿವಾಲ 565/600, ಮುಧೋಳ ಆರ್.ಎಂ.ಜಿ. ಪದವಿಪೂರ್ವ ಕಾಲೇಜಿನ ಅಕ್ಷತಾ ಮಟಗಾರ 562/600, ಹಾಗೂ ಸುಮಿತ್ರಾ ವೈಮಾದರ 547/600 ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.ಈ ವೇಳೆ ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ವಾಹನಗಳ ನಿರ್ವಹಣೆ ಸಂಯೋಜಕ ಅಶೋಕ ರೇಣುಕಪ್ಪ ಕರಡಿ, ಪ್ರಾಚಾರ್ಯ ಕೆ.ಎಚ್. ಹೊಸುರ, ಬಿ.ಎ.ಗಂಜಿಹಾಳ, ಶಾಂತಕುಮಾರ ವಂಟಮುರಿ, ರವಿ ಚಿತ್ರಗಾರ, ರುದ್ರಪ್ಪ ಮುದನೂರ, ಶಿವು ಹುದ್ದಾರ ಸೇರಿದಂತೆ ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.