ಪುತಿನ ಸಾಹಿತ್ಯದ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ನವೆಂಬರ್ ಸೇರಿದಂತೆ ಎಲ್ಲಾ ತಿಂಗಳಲ್ಲಿ ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕವಿ ಪುತಿನ ವಿಚಾರಧಾರೆಗಳನ್ನು ಪರಿಚಯ ಮಾಡುವ ಕಾರ್ಯವನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ದಸರಾ ನಂತರ ಮೇಲುಕೋಟೆಯಲ್ಲಿ ಪುತಿನ ಸಂಸ್ಮರಣೆ ಆಯೋಜಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕರ್ನಾಟಕದ ನವೋದಯ ಸಾಹಿತ್ಯದ ರತ್ನತ್ರಯರಲ್ಲಿ ಓರ್ವರಾದ ಕವಿ ಪುತಿನ ಹೆಸರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇಬ್ಬರು ಉದಯೋನ್ಮುಖ ಸಾಹಿತಿಗಳಿಗೆ ನವೆಂಬರ್‌ನಲ್ಲಿ ಪುತಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಪುತಿನ ಟ್ರಸ್ಟ್ ಕಾರ್ಯದರ್ಶಿ ಬಿ.ವಿ ನಂದೀಶ್ ತಿಳಿಸಿದರು.ಮೇಲುಕೋಟೆಯ ಪುತಿನ ಕಲಾಮಂದಿರಲ್ಲಿ ಕವಿಯ 28 ವರ್ಷದ ಪುಣ್ಮಸ್ಮರಣೆ ಅಂಗವಾಗಿ ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಪುತಿನ ವಿಚಾರಧಾರೆಗಳು ಮತ್ತು ಸಾಹಿತ್ಯಗಳನ್ನು ಇಂದಿನ ಪೀಳಿಗೆಗೆ ತಲುಪಿಸಲು ಟ್ರಸ್ಟ್ ಹತ್ತಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದರು.
ಪುತಿನ ಸಾಹಿತ್ಯದ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ನವೆಂಬರ್ ಸೇರಿದಂತೆ ಎಲ್ಲಾ ತಿಂಗಳಲ್ಲಿ ಶಾಲಾ- ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕವಿ ಪುತಿನ ವಿಚಾರಧಾರೆಗಳನ್ನು ಪರಿಚಯ ಮಾಡುವ ಕಾರ್ಯವನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ದಸರಾ ನಂತರ ಮೇಲುಕೋಟೆಯಲ್ಲಿ ಪುತಿನ ಸಂಸ್ಮರಣೆ ಆಯೋಜಿಸಲಾಗುತ್ತದೆ ಎಂದರು.ಪುತಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಟ್ರಸ್ಟ್ ಸದಸ್ಯರಾದ ಕೆ.ಜೆ.ನಾರಾಯಣ ಮತ್ತು ಬಿ.ಎನ್.ಸುರೇಶ್ ಮಾತನಾಡಿ, ಪುತಿನ ವ್ಯಾಸಂಗ ಮಾಡಿದ ಇಲ್ಲಿನ ಶತಮಾನದ ಶಾಲೆ ಗ್ರಂಥಾಲಯಕ್ಕಾಗಿ ಪುತಿನ ರಚಿಸಿದ ಎಲ್ಲಾ ಕೃತಿಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ ಎಂದರು.
ಕವಿ ವ್ಯಾಸಂಗ ಮಾಡಿದ ಶಾಲೆಯ ಗ್ರಂಥಾಲಯದಲ್ಲಿ ಅವರ ಕೃತಿಗಳ ಪ್ರತ್ಯೇಕ ಪುತಿನ ಗ್ರಂಥಗಳ ವಿಭಾಗ ಮಾಡಬೇಕೆಂಬ ಮುಖ್ಯಶಿಕ್ಷಕ ಸಂತಾನರಾಮನ್ ಆಶಯ ಹೆಚ್ಚು ಅರ್ಥಪೂರ್ಣವಾಗಿದೆ. ಶಾಲೆಯಿಂದ ಲಿಖಿತ ಮನವಿ ನೀಡಿದಲ್ಲಿ ಟ್ರಸ್ಟ್ ಪ್ರಕಟಣೆಯ ಎಲ್ಲಾ ಕೃತಿಗಳನ್ನೂ ನೀಡಲಾಗುತ್ತದೆ ನವೆಂಬರ್ ಮಾಹೆಯಲ್ಲಿ ಶಾಲಾ ಗ್ರಂಥಾಲಯದಲ್ಲಿ ಪುತಿನ ವಿಭಾಗವನ್ನು ಪ್ರಾರಂಭಿಸಲು ಪುತಿನ ಟ್ರಸ್ಟ್ ಸಂಪೂರ್ಣಸಹಕಾರ ನೀಡಲಿದೆ. ಇದರಿಂದ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಕವಿಪುತಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಮೂಡುತ್ತದೆ. ಇಂತಹ ಪ್ರಯತ್ನ ಎಲ್ಲಾ ಶಾಲಾಕಾಲೇಜುಗಳಲ್ಲಿ ನಡೆಯಬೇಕು ಎಂದರು.ಕವಿ ಪುಣ್ಯಸ್ಮರಣೆ ನಿಮಿತ್ತ ಗಣ್ಯರು ಪ್ರತಿಮೆಗೆ ಮಾಲಾರ್ಪಣೆಮಾಡಿ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಚೆಲುವನಾರಾಯಣಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿ.ವೆಂಕಟರಾಮೇಗೌಡ, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮುಖ್ಯಶಿಕ್ಷಕ ಎಸ್.ಎನ್ ಸಂತಾನರಾಮನ್ ಕಲಾವಿದ ಹರಿಧರ, ಪುತಿನ ಕಲಾಮಂದಿರದ ವ್ಯವಸ್ಥಾಪಕ ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.