ಸೈಬರ್ ಕ್ರೈಂ ಬಗ್ಗೆ ಜಾಗೃತಿ ಅವಶ್ಯಕ

| Published : Dec 20 2024, 12:46 AM IST

ಸಾರಾಂಶ

ಇಂದಿನ ದಿನಮಾನಗಳಲ್ಲಿ ಸೈಬರ್ ಕ್ರೈಂಗಳು ದಿನೇ ದಿನೇ ಹೆಚ್ವುತ್ತಿದ್ದು, ಸೈಬರ್‌ ಕ್ರೈಂ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು

ಮುಳಗುಂದ: ಇಂದಿನ ದಿನಮಾನಗಳಲ್ಲಿ ಸೈಬರ್ ಕ್ರೈಂ ಬಗ್ಗೆ ಜಾಗೃತಿ ವಹಿಸುವುದು ಅವಶ್ಯಕವಾಗಿದೆ ಎಂದು ಡಿವೈಎಸ್ಪಿ ಮಹಾಂತೇಶ ಸಜ್ಜನ ಹೇಳಿದರು.

ಪಟ್ಟಣದ ಆರ್.ಎನ್. ದೇಶಪಾಂಡೆ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಗದಗ ಜಿಲ್ಲಾ ಪೊಲೀಸ್ ಹಾಗೂ ಮುಳಗುಂದ ಪೊಲೀಸ್ ಠಾಣೆ ಸಹಯೋಗದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಸೈಬರ್ ಕ್ರೈಂಗಳು ದಿನೇ ದಿನೇ ಹೆಚ್ವುತ್ತಿದ್ದು, ಸೈಬರ್‌ ಕ್ರೈಂ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಬೇಕು. ಜತೆಗೆ ಮನೆಯಲ್ಲಿರುವ ಪಾಲಕರಿಗೆ ಸೈಬರ್‌ ಕ್ರೈಂ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಸೈಬರ್‌ ಕ್ರೈಂ ನಿಯಂತ್ರಿಸುವಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.

ಉಡೂಗರೆಯ ಆಮೇಷವೊಡ್ಡಿ, ಸ್ಕ್ರಾಚ್ ಕಾರ್ಡ್, ಆನ್ ಲೈನ್ ಗೇಮ್, ಜಾಹೀರಾತು ಹೀಗೆ ಹತ್ತು ಹಲವು ವಿಧಗಳಲ್ಲಿ ವಂಚಕರು ನಿಮ್ಮ ಮಾಹಿತಿ ಪಡೆದು ನಿಮಗೆ ತಿಳಿಯದಂತೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಹಣ ದೋಚುತ್ತಾರೆ.

ನಿಮ್ಮ ಜಾಗದಲ್ಲಿ ಟಾವರ್‌ ಅಳವಡಿಸಲು ಬಾಡಿಗೆ ಕೊಟ್ಟಲ್ಲಿ ತಿಂಗಳಿಗೆ ಲಕ್ಷ ಹಣ ಗಳಿಸಬಹುದು ಎಂದು ಆಮಿಷ ತೋರಿಸಿ ಹಣ ವಂಚಕರ ಖಾತೆಗೆ ಹಾಕಿಸಿಕೊಂಡು ಮೋಸ ಮಾಡುತ್ತಾರೆ. ಫೇಸ್ ಬುಕ್‌ನಲ್ಲಿ ಸೈನಿಕ ಅಧಿಕಾರಿ ಅಂತಾ ಹೇಳಿ ಬೈಕ್ ಹಾಗೂ ಕಾರು ಕಡಿಮೆ ಬೆಲೆಗೆ ಮಾರುವುದಿದೆ ಎಂದು ನಂಬಿಸಿ ಹಣ ಪಡೆದು ವಂಚನೆ ಮಾಡುತ್ತಾರೆ. ಕಡಿಮೆ ಅವಧಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಆನ್‌ಲೈನ್ ಮೂಲಕ ಕೊಡುತ್ತೇವೆ, ಕೊಡಿಸುತ್ತೇವೆ ಅಂತಾ ಹೇಳಿ ಪ್ರೊಸೆಸಿಂಗ್ ಫೀಸ್ ಅಂತಾ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಾರೆ.ನಿಮಗೆ ಆನ್ ಲೈನ್ ಲಾಟರಿ ಮೂಲಕ ಬಹುಮಾನ ಬಂದಿದೆ ಅಂತಾ ನಂಬಿಸಿ ಪ್ರತಿಷ್ಟಿತ ಕಂಪನಿಗಳ ಹೆಸರು ಹೇಳಿ ಆನ್ ಲೈನ್ ಮೂಲಕ ಹಣ ಪಡೆದು ವಂಚನೆ ಮಾಡುತ್ತಾರೆ. ಓಎಲ್ಎಕ್ಸ್, ಟ್ವಿಟರ್, ಫೇಸ್ ಬುಕ್ ಇತ್ಯಾದಿ ಆನ್ ಲೈನ್ ಮೂಲಕ ಕಡಿಮೆ ದರದಲ್ಲಿ ಮಾರಾಟ ಅಥವಾ ಖರೀದಿ ಬಗ್ಗೆ ಆಸೆ ತೋರಿಸಿ ಭಾಗಶಃ ಹಣ ವರ್ಗಾಯಿಸಿದಲ್ಲಿ ವಾಹನ ಡೆಲಿವರಿ ಮಾಡುವುದಾಗಿ ಹೇಳಿ ವಂಚಕರು ಹಣ ವರ್ಗಾಯಿಸಿಕೊಂಡು ವಂಚನೆ ಮಾಡುತ್ತಾರೆ. ಆಧಾರ ಕಾರ್ಡ್‌, ಪಾನ್ ಕಾರ್ಡ್‌ಗಳ ಜತೆ ಲಿಂಕ್ ಮಾಡಬೇಕಾಗಿದೆ ಅಂತಾ ಹೇಳಿ ಓಟಿಪಿ ಪಡೆದು ವಂಚನೆ ಮಾಡುತ್ತಾರೆ, ಹೀಗೆ ಹತ್ತು ಹಲವು ವಿಧಗಳಲ್ಲಿ ಕಳ್ಳರು ನಿಮ್ಮನ್ನ ವಂಚನೆ ಮಾಡುತ್ತಾರೆ ಎಂದರು.

ಈಗ ಹೊಸ ವಿಧಾನಗಳಿಂದ ವಂಚಿಸಲಾಗುತ್ತಿದೆ. ನಿಮ್ಮ ಮೊಬೈಲ್ ನಲ್ಲಿ ಅಟೋ ಡೌನ್‌ಲೋಡ್ ಆಕ್ಟೀವೇಶನ್ ಆನ್ ಇರುತ್ತೇ ಎಲ್ಲ ಆಪ್ ಡೌನಲೋಡ್ ಆಗುವು ಜತೆಗೆ ವಂಚಕರ ಆಪ್ ಇರುತ್ತದೆ ಅದು ಡೌನಲೋಡ್ ಮಾಡಿದ ತಕ್ಷಣ ನಿಮ್ಮ ಮಾಹಿತಿ ಸೋರಿಕೆ ಆಗಿ ನಿಮ್ಮ ಹಣ ಕಳೆದುಕೊಳ್ಳತ್ತಿರಿ. ನಾವು ಎಷ್ಟೇ ಜಾಗೃತಿಯಿಂದ ಇದ್ದರೂ ಕಮ್ಮಿನೇ. ಕ್ಷಣ ಕ್ಷಣಕ್ಕೂ ವಂಚಕರು ಕಳ್ಳತನ ಮಾಡುವ ವಿಧಾನ ಬದಲಾವಣೆ ಮಾಡಿ ಜನತೆಗೆ ಮೋಸ ಮಾಡುತ್ತಾರೆ.

ಒಂದು ವೇಳೆ ನೀವು ವಂಚನೆಗೆ ಒಳಪಟ್ಟಿದ್ದರೆ ತಕ್ಷಣ 1 ಗಂಟೆ ಅವಧಿಯೊಳಗೆ 1930 ಹೆಲ್ಪ್ ಲೈನ್ ಗೆ ತಕ್ಷಣ ಕಾಲ್ ಮಾಡಿದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕಳೆದುಕೊಂಡ ಹಣ ಮರಳಿ ಪಡೆಯುವ ಅವಕಾಶ ಇರುತ್ತೇ. ಇವು ಮಾಡುವುದರ ಮೂಲಕ ಇಂತಹ ಸೈಬರ್ ಕ್ರೈಂ ಅಪರಾಧ ತಡೆಯಲು ಸಾಧ್ಯ ಎಂದು ವಿವರಿಸಿದರು.

ಈ ವೇಳೆ ಮಹಾವಿದ್ಯಾಲಯದ ಪ್ರಾ.ಆರ್‌.ಎಂ. ಕಲ್ಲನಗೌಡರ, ಪಿಎಸ್‌ಐ ಆರ್.ವೈ. ಜಲಗೇರಿ, ಸಿಬ್ಬಂದಿ ಶಿವಕುಮಾರ ಹರ್ಲಾಪುರ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಗಳು ಇದ್ದರು.