ಋತುಚಕ್ರ ಕುರಿತು ಅರಿವು ಅಗತ್ಯ: ಡಾ. ಕೌಲಗಿ

| Published : Jun 01 2024, 12:45 AM IST

ಸಾರಾಂಶ

ಯಾದಗಿರಿ ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕಗಳ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಋತು ಚಕ್ರ ಸ್ವಚ್ಛತಾ ದಿನದ ಕಾರ್ಯಕ್ರಮದಲ್ಲಿ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಋತುಚಕ್ರದ ಬಗ್ಗೆ ಹೆಣ್ಣು ಮಕ್ಕಳಲ್ಲಿ ಸೂಕ್ತ ಅರಿವು ಅಗತ್ಯ ಎಂದು ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಹೇಳಿದರು.

ನಗರದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕ ವತಿಯಿಂದ ಹಮ್ಮಿಕೊಂಡಿದ್ದ "ವಿಶ್ವ ಋತು ಚಕ್ರ ಸ್ವಚ್ಛತಾ ದಿನ "ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಋತುಚಕ್ರ ಅದು ನಿಸರ್ಗ ಸಹಜವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಅದರ ಬಗ್ಗೆ ಹೆಣ್ಣುಮಕ್ಕಳು ಮೌಢ್ಯತೆ ರೂಢಿಸಿಕೊಳ್ಳದೆ, ಆರೋಗ್ಯ ದೃಷ್ಟಿಯಿಂದ ಜಾಗೃತಿ ಹೊಂದಬೇಕೆಂದರು ಹೇಳಿದರು.

ಋತುಚಕ್ರದ ಸಂದರ್ಭದಲ್ಲಿ ಹೆಣ್ಣುಮಕ್ಕಳು ಸಂಕೋಚ ಪಟ್ಟು ಮುಜುಗರ ಅನುಭವಿಸುತ್ತಾರೆ. ಕೆಲವರು ತೀವ್ರ ಭಯಭೀತಗೊಳ್ಳುತ್ತಾರೆ. ಮೌಢ್ಯತೆಯಿಂದ ಕುಟುಂಬದ ಸದಸ್ಯರು ದೂರವಿಡುತ್ತಾರೆ. ಆದ್ದರಿಂದ ಋತುಚಕ್ರದ ಬಗ್ಗೆ ಅರಿವು ಮೂಡಿಸಿಬೇಕಾದ ಅವಶ್ಯಕತೆಯಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಆರೋಗ್ಯ ಇಲಾಖೆಯ ಸಕ್ಕುಬಾಯಿ, ರಾಜೇಶ್ವರಿ ಮತ್ತು ಇಮ್ಯಾನುವೆಲ್ ಮಾತನಾಡಿ, ಋತುಚಕ್ರ ಸಂದರ್ಭದಲ್ಲಿ ಹೆಣ್ಣುಮಕ್ಕಳು ಸ್ವಚ್ಛತೆ ಕಾಪಾಡಿಕೊಳ್ಳುವುದು ಅವಶ್ಯ. ಋತುಚಕ್ರ ಸಂದರ್ಭದಲ್ಲಿ ಹಳೆಯ ಪದ್ಧತಿ ಅನುಸರಿಸದೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಆಧುನಿಕ ಉಪಕರಣ ಬಳಸಿ ಆರೋಗ್ಯ ಕಾಪಾಡಿಕೊಳ್ಳಬೆಕೆಂದು ತಿಳಿಸಿದರು.

ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ಹಲವು ಪ್ರಶ್ನೆ ಕೇಳುವುದರ ಮೂಲಕ ಸಮಸ್ಯೆಗಳಿಗೆ ಪರಿಹರಿ ಕಂಡುಕೊಂಡರು. ಈ ವೇಳೆ ಎನ್‌ಎಸ್‌ಎಸ್ ಅಧಿಕಾರಿ ಡಾ.ಚಂದ್ರಶೇಖರ ಕೊಂಕಲ್, ಮಂಜುನಾಥ, ಅಧ್ಯಾಪಕರಾದ ಡಾ. ಉಮಾದೇವಿ, ಡಾ. ನಾಗಲಾಂಬಿಕಾದೇವಿ ಸೇರಿ ಹಲವರಿದ್ದರು.