ಯುವಜನರಲ್ಲಿ ಧರ್ಮದ ಬಗ್ಗೆ ಅರಿವು ಅಗತ್ಯ: ಗಣೇಶ್‌ ಭಟ್‌

| Published : Dec 30 2024, 01:00 AM IST

ಸಾರಾಂಶ

ಮೂರುಕಾವೇರಿ ಮಹಮ್ಮಾಯಿ ದೇವಸ್ಥಾನದ ದರ್ಶನ ಪಾತ್ರಿ ಕೃಷ್ಣ ಪಾತ್ರಿ, ಭಜನಾ ಶಿಕ್ಷಕ ಅಶೋಕ್ ನಾಯಕ್ ಕಳಸ ಬೈಲ್, ದಾನಿಗಳಾದ ಪ್ರಭಾಕರ ಬಂಗೇರ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ಧರ್ಮದ ಅರಿವು ಮೂಡಿಸಬೇಕು ಎಂದು ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಏಳಿಂಜೆ ಹೇಳಿದರು. ಯೈಕಳ ಸಮೀಪದ ಮುಂಚಿಗುಡ್ಡೆಯಲ್ಲಿ ಶ್ರೀ ಮಂತ್ರದೇವತಾ ಸೇವಾ ಸಮಿತಿ ಮುಂಚಿಗುಡ್ಡೆಯ 20 ನೇ ವರ್ಷದ ಸಾರ್ವಜನಿಕ ಶ್ರೀ ಶನಿಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐಕಳ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮೂರುಕಾವೇರಿ ಮಹಮ್ಮಾಯಿ ದೇವಸ್ಥಾನದ ದರ್ಶನ ಪಾತ್ರಿ ಕೃಷ್ಣ ಪಾತ್ರಿ, ಭಜನಾ ಶಿಕ್ಷಕ ಅಶೋಕ್ ನಾಯಕ್ ಕಳಸ ಬೈಲ್, ದಾನಿಗಳಾದ ಪ್ರಭಾಕರ ಬಂಗೇರ ಅವರನ್ನು ಸನ್ಮಾನಿಸಲಾಯಿತು.

ಮೂಲ್ಕಿ ನ.ಪಂ. ಸದಸ್ಯ ಯೋಗೀಶ್ ಕೋಟ್ಯಾನ್, ಕಲ್ಲಮುಂಡ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೇಶವ ಕೋಟ್ಯಾನ್, ಐಕಳ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಐಕಳ ಪಂಚಾಯಿತಿ ಸದಸ್ಯರಾದ ಚೇತನ್ ಶೆಟ್ಟಿ, ದಯೇಶ್ ಐಕಳ, ಉದ್ಯಮಿ ಪ್ರದೀಪ್, ಸುರೇಶ್ ಸುವರ್ಣ ಐಕಳ, ಅಭಿಲಾಷ್ ಶೆಟ್ಟಿ ಕಟೀಲು ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ವಿಶ್ವನಾಥ್ ಸ್ವಾಗತಿಸಿದರು. ಶ್ರೀಶ ಸರಫ್ ಐಕಳ ನಿರೂಪಿಸಿದರು.