ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ ಕಾರ್ಯಾಗಾರ

| Published : Sep 15 2024, 01:47 AM IST

ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಆಗುವ ಸಮಸ್ಯೆಗಳು ಮತ್ತು ಮನುಕುಲಕ್ಕೆ ಒದಗಬಹುದಾದ ಅಪಾಯ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಎಸ್‌.ಬಿ.ಆರ್‌.ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಮತ್ತು ಭೂಗೋಳಶಾಸ್ತ್ರ ವಿಭಾಗಗಳು ಐಕ್ಯೂಎಸಿ ಸಹಯೋಗದಲ್ಲಿ ಹವಾಮಾನ ಬದಲಾವಣೆಯ ಕಾರಣ ಮತ್ತು ಪರಿಣಾಮ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕ್ಲೈಮೆಟ್ ಫ್ರೆಸ್‌ ‌ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಗಿದ್ದ ಎಂಜಿನಿಯರ್‌ ರಾಜೇಂದ್ರಕುಮಾರ್‌ ಮಾತನಾಡಿ, ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಆಗುವ ಸಮಸ್ಯೆಗಳು ಮತ್ತು ಮನುಕುಲಕ್ಕೆ ಒದಗಬಹುದಾದ ಅಪಾಯದ ಬಗ್ಗೆ ಆಳವಾದ ತಿಳುವಳಿಕೆ ನೀಡುವಲ್ಲಿ ಈ ಕಾರ್ಯಾಗಾರವು ನಿರ್ಣಾಯಕ ಪಾತ್ರ ವಹಿಸಿದೆ ಎಂದರು.

ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಯೋಜನಾ ವ್ಯವಸ್ಥಾಪಕ ಹಾಗೂ ಹವಾಮಾನ ರಾಯಭಾರಿ ವಿನಿತ್‌ ಮೆಹತಾ ಇದ್ದರು.

ಸಹಯೋಗ ಮತ್ತು ಸೃಜನಶೀಲತೆಯನ್ನು ಒಳಗೊಂಡ ಈ ಕಾರ್ಯಾಗಾರವು ಕೃಷಿ, ಸಾರಿಗೆ, ಪಳೆಯುಳಿಕೆ ಇಂಧನ, ಏರುತ್ತಿರುವ ತಾಪಮಾನ ಮತ್ತು ಸಮುದ್ರಮಟ್ಟಗಳು, ಕರಗುವ ಹಿಮನದಿಗಳು ಮತ್ತು ಇಂಗಾಲದ ಹೊರಸೂಸುವಿಕೆ ವಿವರಗಳೊಂದಿಗೆ ಹವಾಮಾನ ಬದಲಾವಣೆಯ ವಿವಿಧ ವಿಷಯಗಳ ಕುರಿತು ಸಚಿತ್ರ ಫ್ಲ್ಯಾಷ್‌ ಕಾರ್ಡ್‌ ನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಅವರು ಭೂಗೋಳಶಾಸ್ತ್ರ ವಿಭಾಗ ಮತ್ತು ಆಂಗ್ಲಭಾಷಾ ವಿಭಾಗಗಳನ್ನು ಅಭಿನಂದಿಸಿ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಮತ್ತು ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ ಎಂದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಿ. ಗೀತಾ ಸ್ವಾಗತಿಸಿದರು. ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ. ಸೋಮಶೇಖರ ವಂದಿಸಿದರು. ನಿಹಾರಿಕ ಹೆಗ್ಡೆ ಪ್ರಾರ್ಥಿಸಿದರು. ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ.ಆರ್‌. ಇಂದ್ರಾಣಿ ಕಾರ್ಯಕ್ರಮ ನಿರೂಪಿಸಿದರು.