ರಾಜ್ಯದಲ್ಲಿ ಅಹಿಂದ ಸಮುದಾಯಗಳಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಮೂಡಿಸುವ ಅಗತ್ಯವಿದೆ.

ಉತ್ತರ ಕನ್ನಡ ಜಿಲ್ಲಾ ಸಮಾಲೋಚನೆ ಸಭೆ

ಕನ್ನಡಪ್ರಭ ವಾರ್ತೆ ಕುಮಟಾ

ರಾಜ್ಯದಲ್ಲಿ ಶೇ.೮೫ರಷ್ಟು ಅಹಿಂದ ಸಮುದಾಯ ಇದ್ದರೂ ಈ ಸಮುದಾಯಗಳಲ್ಲಿ ಒಗ್ಗಟ್ಟಿನ ಕೊರತೆ, ಆಂತರಿಕ ಭಿನ್ನಾಭಿಪ್ರಾಯದಿಂದ ಉನ್ನತ ಹುದ್ದೆಗಳು ಅಹಿಂದ ಸಮುದಾಯಕ್ಕೆ ದಕ್ಕುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಅಹಿಂದ ಸಮುದಾಯಗಳಲ್ಲಿ ಜಾಗೃತಿ ಮತ್ತು ಒಗ್ಗಟ್ಟು ಮೂಡಿಸುವ ಅಗತ್ಯವಿದೆ ಎಂದು ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ. ನಾಗೇಶ ನಾಯ್ಕ ಹೇಳಿದರು.

ಪಟ್ಟಣದಲ್ಲಿ ಅಹಿಂದ ಕರ್ನಾಟಕದಿಂದ ಉತ್ತರ ಕನ್ನಡ ಜಿಲ್ಲಾ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ತೀರಾ ಅಗತ್ಯವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇತರ ಸಮಸ್ಯೆಗಳನ್ನು ವಿವರಿಸಿದರು. ನಮ್ಮ ಜಿಲ್ಲೆಯ ಒಟ್ಟಾರೆ ಪ್ರಗತಿಗೆ ಅಹಿಂದ ಸಮುದಾಯದೊಂದಿಗೆ ಇತರೆಲ್ಲ ಸಹಕಾರ, ಒಗ್ಗಟ್ಟಿನ ಸಹಯೋಗ ಅತ್ಯವಶ್ಯ ಎಂದರು.

ಪ್ರಮುಖರಾದ ಅನಂತ ನಾಯ್ಕ ಹಾಗೂ ತೋಳಿ ಭರಮಣ್ಣ ಮಾತನಾಡಿ, ರಾಜ್ಯದಲ್ಲಿ ಅಹಿಂದ ಸಂಘಟನೆ ಬೆಳೆಸಲು ಅನೇಕರ ಶ್ರಮವಿದೆ. ಅಹಿಂದ ಚಳವಳಿಗೆ ದೀರ್ಘ ಕಾಲದ ಇತಿಹಾಸ ಇದೆ. ಹಿಂದುಳಿದ ವರ್ಗಗಳು, ದಲಿತ ಸಮುದಾಯಗಳು, ಕೃಷಿಕರು, ಮೀನುಗಾರರು ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಕಳೆದುಕೊಂಡಿದ್ದರಿಂದ ಅವರಿಗೆ ಚಾರಿತ್ರಿಕ ಮೋಸ ಆಗಿದೆ. ಅದಕ್ಕಾಗಿ ಬಾಬಾ ಸಾಹೇಬ ಅಂಬೇಡ್ಕರ್, ಜ್ಯೋತಿಲಾಲ ಪುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವರಾಜ ಅರಸು, ಎಲ್.ಜಿ. ಹಾವನೂರು ಮುಂತಾದವರ ಹೋರಾಟದ ಫಲವಾಗಿ ಕೆಲ ಅವಕಾಶಗಳು ಅಹಿಂದ ಸಮುದಾಯಗಳಿಗೆ ದೊರೆಯುವಂತಾಯಿತು. ಎಲ್ಲ ಜಿಲ್ಲೆಗಳಲ್ಲಿ ಇಂಥ ಸಮಾನ ಮನಸ್ಕರ ಸಭೆಯನ್ನು ಮಾಡಿ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ನಮ್ಮ ಪ್ರಾತಿನಿಧ್ಯವನ್ನು ಸ್ಥಾಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.ಸಂಜೀವ ಲೋಕಪುರ ಬೆಂಗಳೂರು, ಬಾಳೇಶ ದಾಸನಟ್ಟಿ ಗೋಕಾಕ ಚರ್ಚೆಯಲ್ಲಿ ಪಾಲ್ಗೊಂಡರು.

ಜಿಲ್ಲೆಯ ವಿವಿಧ ಸಂಘಟನೆಗಳಿಂದ ರಾಮ ಮೊಗೇರ ಭಟ್ಕಳ, ಸಿ.ಎಫ್.ನಾಯ್ಕ ಶಿರಸಿ, ಆರ್.ಎಚ್.ನಾಯ್ಕ ಕಾಗಾಲ, ಬೆನಿತ್ ಸಿದ್ಧಿ ಯಲ್ಲಾಪುರ, ವೀರಭದ್ರ ನಾಯ್ಕ ಸಿದ್ದಾಪುರ, ಎಂ.ಡಿ. ನಾಯ್ಕ ಭಟ್ಕಳ, ಸುಧಾಕರ ತಾರಿ ಕುಮಟಾ, ಅರವಿಂದ ಕರ್ಕಿಕೋಡಿ, ಕನ್ನೇಶ ಕೋಲಶೀರ್ಸಿ, ಐ.ಕೆ.ನಾಯ್ಕ, ರಾಜೇಶ ದೇಶಭಾಗ, ಶಿವಾಜಿ ಬನವಾಸಿ, ಸುಭಾಷ ಕಾನಡೆ, ಮಂಗಲದಾಸ ನಾಯ್ಕ ಮಂಕಿ, ಮಹದೇವ ಛಲವಾದಿ ಶಿರಸಿ, ದಾಮೋದರ ನಾಯ್ಕ ಅಂಕೋಲಾ, ರಾಮಕೃಷ್ಣ ನಾಯ್ಕ ಕ್ಯಾದಗಿ, ಎಚ್.ಎಲ್.ಶಿವಾನಂದ ಕಾನಗೋಡ, ಉಮಾಕಾಂತ ಹೊಸಕಟ್ಟಾ, ಶ್ರೀಧರ ನಾಯ್ಕ ಭಟ್ಕಳ, ಸಂತೋಷ ಬೋವಿವಡ್ಡರ, ನಿಸ್ಸಾರ್ ಅಹಮದ ಪಟೇಲ್, ಜೈವಂತ ಮರಾಠಿ ಯಲ್ಲಾಪುರ, ತುಳಸಿದಾಸ ಪಾವಸ್ಕರ್ ಹೊನ್ನಾವರ, ನಾಗರತ್ನ ಸತೀಶ ಕಾರವಾರ, ಸವಿತಾ ಮುಕ್ರಿ ಧಾರೇಶ್ವರ, ಮಂಜು ಚಂದ್ರಪ್ಪ ಕಂತ್ರಾಜಿ ಬನವಾಸಿ, ಮಾಲತೇಶ ಬನವಾಸಿ, ರಾಘವೇಂದ್ರ ಮುಕ್ರಿ, ಸುಧಾಕರ ನಾಯ್ಕ ಗುಡ್ನಾಪುರ, ಮಂಜುನಾಥ ಆಗೇರ ಬರ್ಗಿ, ಪ್ರಭು ಹಳ್ಳೇರ ಸಂಶಿ, ಗಣಪತಿ ಹಳ್ಳೇರ ಮಂಕಿ ಇತರರು ಇದ್ದರು.

ಸಿದ್ದಾಪುರ ನಾಮಧಾರಿ ಸಂಘದ ಉಪಾಧ್ಯಕ್ಷ ವಿ.ಎನ್.ನಾಯ್ಕ ಬೇಡ್ಕಣಿ ಸ್ವಾಗತಿಸಿದರು. ಸಿದ್ದಾಪುರದ ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ ವಂದಿಸಿದರು.