ಮಾದಪ್ಪನ ಬೆಟ್ಟದಲ್ಲಿ ಕಸದಬುಟ್ಟಿ ಇಟ್ಟು ಸ್ವಚ್ಛತೆ ಅರಿವು

| Published : Mar 05 2024, 01:34 AM IST

ಮಾದಪ್ಪನ ಬೆಟ್ಟದಲ್ಲಿ ಕಸದಬುಟ್ಟಿ ಇಟ್ಟು ಸ್ವಚ್ಛತೆ ಅರಿವು
Share this Article
  • FB
  • TW
  • Linkdin
  • Email

ಸಾರಾಂಶ

ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಮತ್ತು ಮೈಸೂರು ಪರಿಸರ ವಾರಿಯರ್ಸ್ ವತಿಯಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಡಸ್ಟ್ ಬಿನ್‌ಗಳನ್ನು ಇಡುವ ಮೂಲಕ ಭಕ್ತರಿಗೆ ಅರಿವು, ಮನವಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಮತ್ತು ಮೈಸೂರು ಪರಿಸರ ವಾರಿಯರ್ಸ್ ವತಿಯಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಡಸ್ಟ್ ಬಿನ್‌ಗಳನ್ನು ಇಡುವ ಮೂಲಕ ಭಕ್ತರಿಗೆ ಅರಿವು, ಮನವಿ ಮಾಡಲಾಯಿತು. ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಆನೆ ತಲೆದಿಂಬ ಮತ್ತು ರಂಗಸ್ವಾಮಿ ಒಡ್ಡು ದಾರಿಯಲ್ಲಿ ಡಸ್ಟ್ ಬಿನ್‌ಗಳನ್ನು ಇಟ್ಟ ಸಂದರ್ಭದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು ಮಾತನಾಡಿ, ಮಹಾಶಿವರಾತ್ರಿ ಜಾತ್ರೆ ಮಹೋತ್ಸವದ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಪಾದಯಾತ್ರೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಪಾದಯಾತ್ರೆಗಳು ಬರುವ ಸ್ಥಳಗಳಲ್ಲಿ ಇಟ್ಟಿರುವ ಡಸ್ಟ್ ಬಿನ್ ಗಳಲ್ಲಿನ್ನು ಇಡಲಾಗಿದ್ದು, ತ್ಯಾಜ್ಯಗಳನ್ನು ಹಾಕಿ ಪ್ಲಾಸ್ಟಿಕ್ ಮುಕ್ತ ಶ್ರೀ ಕ್ಷೇತ್ರವಾಗಿಸಬೇಕು ಎಂದರು.ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಪರಿಸರ ವಾರಿಯರ್ಸ್‌ ಗ್ರೂಪ್ ನ ಸಂದೇಶಗಳನ್ನು ಭಕ್ತರು ಪಾಲಿಸುವ ಮೂಲಕ ಸಹಕಾರ ನೀಡಬೇಕು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಮಾನವಿ ಮಾಡಿದರು. ಮೈಸೂರು ಪರಿಸರ ವಾರಿಯರ್ಸ್ ಮಂಜುನಾಥ್ ಮಾತನಾಡಿ, ಮಲೆ ಮಹದೇಶ್ವರನ ಬೆಟ್ಟಕ್ಕೆ ಬರುವ ಭಕ್ತರು ಪಾದಯಾತ್ರೆಯಲ್ಲಿ ಬರುವ ವೇಳೆಯಲ್ಲಿ ಅರಣ್ಯ ಪ್ರದೇಶದಲ್ಲಿ ತಾವು ತಿಂದು ನೀರು ಕುಡಿದು ಬಿಸಾಕುವ ಪ್ಲಾಸ್ಟಿಕ್ ಬಾಟಲ್ ಮತ್ತು ತ್ಯಾಜ್ಯಗಳನ್ನು ಪ್ರಾಣಿಗಳು ತಿಂದು ಜೀವ ಹಾನಿ ಉಂಟಾಗುತ್ತದೆ ಜೊತೆಗೆ ಅರಣ್ಯದಲ್ಲಿ ತ್ಯಾಜ್ಯಗಳು ಸಂಗ್ರಹವಾಗಿ ಪರಿಸರದಲ್ಲಿ ಮಾರಕವಾಗುತ್ತದೆ ಇದನ್ನು ತಪ್ಪಿಸಲು ಭಕ್ತರು ಪ್ಲಾಸ್ಟಿಕ್ ಮುಕ್ತ ಏಕ ಬಳಕೆ ಅನುಸರಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿ, ಸಿಬಂದಿ ಉಪಸ್ಥಿತರಿದ್ದರು.