ಸಾರಾಂಶ
- ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ವಿಷಾನಿಲ, ದುರ್ನಾತದ ಆತಂಕ
- ನೆರಡಗಂ, ಚೇಗುಂಟಾ ಶ್ರೀಗಳದ್ವಯರ ಗ್ರಾಮಯಾತ್ರೆಗೆ ಚಿಂತನೆ- ಕನ್ನಡಪ್ರಭ ಸರಣಿ ವರದಿ ಭಾಗ : 43
ಕನ್ನಡಪ್ರಭ ವಾರ್ತೆ ಯಾದಗಿರಿ"ಜನರ ಬದುಕಿದರೆ ಭಕ್ತರು, ಭಕ್ತರಿದ್ದರೆ ಮಠ-ಮಾನ್ಯಗಳು ಉಳಿಯೋದು... "
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಜನರ ನೋವು ಆಲಿಸಲು ಈ ಭಾಗದ ಮಠ ಮಾನ್ಯಗಳು ಒಲವು ತೋರಿರುವುದು ಭಕ್ತವಲಯದಲ್ಲಿ ತುಸು ನೆಮ್ಮದಿ ಮೂಡಿಸಿದೆ. ಕೆಮಿಕಲ್ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿ- ದುರ್ನಾತದಿಂದಾಗಿ ಅಸಹನೀಯ ಬದುಕು ಸಾಗಿಸುತ್ತಿರುವ ಈ ಭಾಗದ ಹತ್ತಾರು ಹಳ್ಳಿಗಳಲ್ಲಿ ಇಲ್ಲಿನ ಪ್ರಮುಖ ಮಠಾಧೀಶರು ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ಮೂಲಕ, ಇಲ್ಲಿನವರ ನೋವು-ನಲಿವುಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಕಿವಿ ಹಿಂಡಲಿದ್ದಾರೆ. ಚುನಾವಣೆಗಳ ಸಂದರ್ಭದಲ್ಲಿ ಮಾತ್ರ ಮಠ ಮಾನ್ಯಗಳಿಗೆ ಭೇಟಿ ಕೊಡುವುದಲ್ಲ, ನಂತರವೂ ಜನರ ಸಂಕಷ್ಟ ಆಲಿಸಲು ಪಕ್ಷಾತೀತ ರಾಜಕಾರಣದ ಅವಶ್ಯಕತೆ ಇರಬೇಕು ಎಂಬ ಬಗ್ಗೆ ಮಠಾಧೀಶರು ಹೆಜ್ಜೆ ಇಡುತ್ತಿರುವುದು ಸಕಾಲಿಕ ಅನ್ನೋದು ಜನರ ಅಂಬೋಣ.---
ಕೋಟ್-1: ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ರಾಸಾಯನಿಕ ಕಂಪನಿಗಳು ಸೇರಿದಂತೆ ಇತರ ಕೈಗಾರಿಕೆಗಳಿಂದ ಕಾನೂನುಬಾಹಿರವಾಗಿ ಪರಿಸರಕ್ಕೆ ಹಾನಿಯಗುವ ತ್ಯಾಜ್ಯ ವಸ್ತು ಮತ್ತು ವಿಷಾನಿಲವನ್ನು ಹೊರ ಹಾಕುತ್ತಿರುವ ಪರಿಣಾಮ, ಕರ್ನಾಟಕ ಮತ್ತು ತೆಲಂಗಾಣ ಗ್ರಾಮಗಳ ಜನರ ಮತ್ತು ಪಶು-ಪಕ್ಷಿ-ಪ್ರಾಣಿಗಳ ಮೇಲೆ ದುಶ್ಪರಿಣಾಮ ಬೀರುತ್ತಿರುವುದು ಕಂಡು ಬಂದಿದೆ. ಚರ್ಮ, ಕಣ್ಣು, ಉಸಿರಾಟ ಮತ್ತು ಗರ್ಭಿಣಿಯರಿಗೆ ತೊಂದರೆಯಾಗುತ್ತಿದೆ ಎಂದು ನಮ್ಮ ಮಠಕ್ಕೆ ಆಗಿಸುವ ಬಹುಪಾಲು ಭಕ್ತರು ಮತ್ತು ಕೆಲ ವೈದ್ಯರು ತಿಳಿಸಿದ್ದಾರೆ. ಇದನ್ನು ಗಮನಿಸಿದರೆ ಮುಂದಿನ ಪೀಳಿಗೆಯವರು ನಾನಾ ತೊಂದರೆಗಳಿಂದ ಅನುಭವಿಸುವುದು ಖಚಿತವಾದಂತೆ ಕಾಣುತ್ತಿದೆ. ಸುತ್ತಲಿನ ಗ್ರಾಮಗಳ ಮಠಾಧೀಶರು, ಪರಿಸರವಾದಿಗಳು, ವೈದ್ಯರು ಮತ್ತು ಸಾಮಾಜಿಕ ಕಾಳಜಿಯುಳ್ಳವರ ತಂಡ ಮಾಡಿಕೊಂಡು ಕೈಗಾರಿಕೆಗಳಿಂದ ತೊಂದರೆ ಅನುಭವಿಸುತ್ತಿರುವ ಗ್ರಾಮಗಳ ಗ್ರಾಮಸ್ಥರನ್ನು ಭೇಟಿ ಮಾಡಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗುತ್ತೇವೆ. ಸರ್ಕಾರ ರೈತರಲ್ಲಿ ಭೂಮಿ ತೆಗೆದುಕೊಳ್ಳುವಾಗ ದೊಡ್ಡ-ದೊಡ್ಡ ಜವಳಿ, ಸಾರ್ವಜನಿಕ ಉದ್ಯೋಮಗಳು ಸ್ಥಾಪಿಸಿ ಜನರಿಗೆ ಉದ್ಯೋಗ ನೀಡುತ್ತೇವೆಂದು ಹೇಳಿ, ಜನರಿಗೆ ಉದ್ಯೋಗ ನೀಡದಿರುವುದು ದೂರದ ಮಾತಾಗಿದ್ದು, ಜನರ ಜೀವಕ್ಕೆ ಕುತ್ತು ತರುವ ಕೈಗಾರಿಕೆಗಳು ಸ್ಥಾಪನೆ ಮಾಡುವುದಕ್ಕೆ ಅನುವು ಮಾಡಿಕೊಟ್ಟಿದ್ದು ವಿಷಾದನೀಯ.- ಶ್ರೀ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು, ಪಶ್ಚಿಮಾದ್ರಿ ಸಂಸ್ಥಾನ ಮಠ, ನೇರಡಗಂ.(20ವೈಡಿಆರ್10)
---ಕೋಟ್-2 : ನಮ್ಮ ತೆಲಂಗಾಣದ ಗಡಿಗೆ ಹಂಚಿಕೊಂಡಿರುವ, ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ರಾಸಾಯನಿಕ ಕಂಪನಿಗಳು ಹೊರ ಹಾಕುವ ತ್ಯಾಜದ ಘಾಟು ನಮ್ಮ ರಾಜ್ಯದ ಚೇಗುಂಟ, ಕೃಷ್ಣಾ, ಐನಾಪುರ ಸೇರಿದಂತೆ ಕರ್ನಾಟಕದ ಅನೇಕ ಗ್ರಾಮಗಳ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ರಾತ್ರಿ ಮತ್ತು ಬೆಳಗ್ಗಿನ ಜಾವದಲ್ಲಿ ಏತ್ತೆಚವಾಗಿ ಬೀಡುವ ದುರ್ವಾಸನೆಯು ತಾಳಲಾಗದೆ ಮನೆಯ ಬಾಗಿಲು, ಕೀಟಕಿ ಮತ್ತು ಮಾಸ್ಕ್ ಗಳನ್ನು ಹಾಕಿಕೊಳ್ಳುವುದು ಸರ್ವ ಸಾಮಾನ್ಯವಾಗಿದೆ. ಇದು ಭವಿಷ್ಯತಿನಲ್ಲಿ ಅನೇಕ ರೋಗ-ರುಜಿನಿಗಳಿಗೆ ಕಾರಣವಾಗುಬಹುದು ಎಂಬ ಭಯ ಜನ ಸಾಮಾನ್ಯರಲ್ಲಿ ಕಾಡುತ್ತಿದೆ. ಆ ಕಾರಣದಿಂದ ನಾವು ಸೇರಿದಂತೆ ಈ ಭಾಗದ ಗ್ರಾಮಗಳ ಪ್ರವಾಸ ಕೈಗೊಂಡು ಜನರ ತೊಂದರೆಗಳನ್ನು ಆಲಿಸುವುದು ಈ ಜೀವ ಸಂಕುಲಕ್ಕೆ ಕಂಠಕವಾಗಿರುವ ಕಂಪನಿಗಳನ್ನು ಅನುಮತಿ ರದ್ಧು ಮಾಡಲು ಯಾವ ರೀತಿ ಸರಕಾರದ ಮೇಲೆ ಒತ್ತಡವನ್ನು ಹಾಕಬೇಕು ಎಂದು ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ಸಿದ್ಧರಾಗಿದ್ದೇವೆ. ಇದಕ್ಕೆ ಪಕ್ಷಾತೀತವಾಗಿ ರಾಜಕಾರಣಿಗಳು ಮತ್ತು ಪರಿಸರವಾದಿಗಳು ಕೈಜೋಡಿಸಿದ್ದಾರೆ. : ಶ್ರೀ ಕ್ಷೀರಲಿಂಗಯ್ಯ ಮಹಾಸ್ವಾಮಿಗಳು, ಪಾರ್ವತಿ ಪರಮೇಶ್ವರ ದೇವಸ್ಥಾನ, ಚೇಗುಂಟಾ, ತೆಲಂಗಾಣ. (20ವೈಡಿಆರ್11)
===========ಬಾಕ್ಸ್=========- ನಾಳೆ (ಮೇ 22) ಕಡೇಚೂರಿಗೆ ಛಲವಾದಿ ನಾರಾಯಣಸ್ವಾಮಿ
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಅವರು ಯಾದಗಿರಿ ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಮೇ 22 ರ ಗುರುವಾರ ಭೇಟಿ ನೀಡಲಿದ್ದಾರೆ. ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿರುವ ಅವರು, ಮೇ 21 ರಂದು ಸಂಜೆ ಯಾದಗಿರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಗುರುವಾರ (ಮೇ 22) ಬೆಳಿಗ್ಗೆ ಯಾದಗಿರಿಯಲ್ಲಿನ ಎಸ್ಟಿ ಕಾಲೋನಿಗೆ ಭೇಟಿ ನೀಡುವ ಅವರು ನಂತರ ಸೈದಾಪುರದಲ್ಲಿ ನಡೆಯಲಿರುವ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾರೆ. ಮಧ್ಯಾಹ್ನ 12 ರಿಂದ 1 ಗಂಟೆ ಸುಮಾರಿಗೆ ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವ ಅವರು, ಜಿಟಿಟಿಸಿ ಗೆಸ್ಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ರಾಯಚೂರಿನತ್ತ ತೆರಳಲಿದ್ದಾರೆ.-
20ವೈಡಿಆರ್12 : ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕರು, ವಿಧಾನ ಪರಿಷತ್.20ವೈಡಿಆರ್13 : ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))