ಮಹಿಳಾ ಜಾಗೃತಿ ಬೆಳೆಸುವ ಉದ್ದೇಶದಿಂದ ಇನ್ನರ್‌ವ್ಹೀಲ್‌ ಕ್ಲಬ್ ವತಿಯಿಂದ ಅಂತರ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ರೂಪಕ ಮತ್ತು ಕಿರು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಂಜಿತ, ನಮ್ಮ ಪರಿಕಲ್ಪನೆಯನ್ನು ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಸಹೃದಯದಿಂದ ಬೆಂಬಲಿಸಿದ್ದಾರೆ. ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು. ಸ್ಪರ್ಧೆಯಲ್ಲಿ ಕೋಡಿಮಠ ಪದವಿಪೂರ್ವ ಕಾಲೇಜು ಪ್ರಥಮ, ಸರಕಾರಿ ಇಂಜಿನಿಯರಿಂಗ್ ಕಾಲೇಜು ದ್ವಿತೀಯ, ಹಾಗೂ ಪ್ರತಿಭಾ ಕಾಲೇಜು ತೃತೀಯ ಸ್ಥಾನ ಗಳಿಸಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಹಿಳೆಯರ ಸುರಕ್ಷತೆಗೆ ಸಂವಿಧಾನದಲ್ಲಿ ಸಾಕಷ್ಟು ಕಾನೂನು ಸೌಲಭ್ಯಗಳು ಇದ್ದರೂ, ಸಮಾಜದಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯಗಳ ಘಟನೆಗಳು ಇನ್ನೂ ಮುಂದುವರಿಯುತ್ತಿರುವುದು ಆತಂಕಕಾರಿ. ಮಹಿಳೆಯರು ಹೆಚ್ಚಿನ ಜಾಗೃತಿಯನ್ನು ಹೊಂದುವುದು ಕಾಲದ ಅವಶ್ಯಕತೆಯಾಗಿದೆ ಎಂದು ಇನ್ನರ್‌ವ್ಹೀಲ್‌ ಕ್ಲಬ್ ಅಧ್ಯಕ್ಷೆ ರಂಜಿತ ತಿಳಿಸಿದರು.ಮಹಿಳಾ ಜಾಗೃತಿ ಬೆಳೆಸುವ ಉದ್ದೇಶದಿಂದ ಇನ್ನರ್‌ವ್ಹೀಲ್‌ ಕ್ಲಬ್ ವತಿಯಿಂದ ಅಂತರ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ರೂಪಕ ಮತ್ತು ಕಿರು ನಾಟಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಂಜಿತ, ನಮ್ಮ ಪರಿಕಲ್ಪನೆಯನ್ನು ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಸಹೃದಯದಿಂದ ಬೆಂಬಲಿಸಿದ್ದಾರೆ. ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು. ಸ್ಪರ್ಧೆಯಲ್ಲಿ ಕೋಡಿಮಠ ಪದವಿಪೂರ್ವ ಕಾಲೇಜು ಪ್ರಥಮ, ಸರಕಾರಿ ಇಂಜಿನಿಯರಿಂಗ್ ಕಾಲೇಜು ದ್ವಿತೀಯ, ಹಾಗೂ ಪ್ರತಿಭಾ ಕಾಲೇಜು ತೃತೀಯ ಸ್ಥಾನ ಗಳಿಸಿತು.ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಶ್ ಮಾತನಾಡಿ, “ಮಹಿಳೆಯರು ಅಂಜಿಕೆಯನ್ನು ಬಿಟ್ಟು ಕಾನೂನಿನಲ್ಲಿ ನೀಡಿರುವ ಹಕ್ಕುಗಳನ್ನು ಬಳಸಿಕೊಳ್ಳಬೇಕು. ಅಗತ್ಯಬಿದ್ದಾಗ ಸಮಾಜ ಸಂಸ್ಥೆಗಳು ನಿಮ್ಮ ಜೊತೆಯಲ್ಲಿವೆ, ಎಂದು ಆತ್ಮಸ್ಥೈರ್ಯ ತುಂಬಿದರು.ಹೊಳೆನರಸೀಪುರ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ರೋಹಿತ್ ತೀರ್ಪುಗಾರರಾಗಿ ಪಾಲ್ಗೊಂಡು ಮಾತನಾಡಿ, ಮಹಿಳೆ ಇಂದು ಭೂಮಿಯಿಂದ ಬಾಹ್ಯಾಕಾಶದವರೆಗೆ ತನ್ನ ಗುರುತು ಸಾಧಿಸಿದ್ದಾಳೆ. ಶಿಕ್ಷಣ ಮತ್ತು ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಕೊಂಡರೆ ಸಮಾಜಕ್ಕೂ ಪ್ರಯೋಜನ ಎಂದು ಸಲಹೆ ನೀಡಿದರು.ಇನ್ನರ್ ವೀಲ್ ಕ್ಲಬ್ ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದೆ ಎಂದು ಅವರು ಪ್ರಶಂಸಿಸಿದರು.