ಸಾಂವಿಧಾನಿಕ ಚಿಂತನೆಗಳ ಅರಿವು ಅಗತ್ಯ: ಮುನಿರಾಜು

| Published : Feb 11 2024, 01:47 AM IST

ಸಾರಾಂಶ

ದೊಡ್ಡಬಳ್ಳಾಪುರ: ಗಣರಾಜ್ಯೋತ್ಸವದ 75ನೇ ವರ್ಷಾಚರಣೆಯ ಹಿನ್ನಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಶನಿವಾರ ದೊಡ್ಡಬಳ್ಳಾಪುರ ತಾಲೂಕು ಪ್ರವೇಶಿಸಿದೆ.

ದೊಡ್ಡಬಳ್ಳಾಪುರ: ಗಣರಾಜ್ಯೋತ್ಸವದ 75ನೇ ವರ್ಷಾಚರಣೆಯ ಹಿನ್ನಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾ ಶನಿವಾರ ದೊಡ್ಡಬಳ್ಳಾಪುರ ತಾಲೂಕು ಪ್ರವೇಶಿಸಿದೆ. ತಾಲೂಕಿನ ನಂದಿಬೆಟ್ಟ ಕ್ರಾಸ್ ಮೂಲಕ ಹೆಗ್ಗಡಿಹಳ್ಳಿಗೆ ಪ್ರವೇಶಿಸಿದ ರಥವನ್ನು ಮಹಿಳೆಯರು ಕಳಶಗಳನ್ನು ಹೊತ್ತು ಪೂರ್ಣಕುಂಭ ಮೆರವಣಿಗೆ ಮೂಲಕ ಸ್ವಾಗತಿಸಿದರು. ಶಾಲಾ ಮಕ್ಕಳು ಸಂವಿಧಾನ ಕುರಿತ ಜಾಗೃತಿ ಫಲಕಗಳನ್ನು ಹಿಡಿದು ಸಂವಿಧಾನ ಜಾಗೃತಿ ಮೂಡಿಸುವ ರಥವನ್ನು ಬರಮಾಡಿಕೊಂಡರು.

ತಾಪಂ ಇಒ ಮುನಿರಾಜು ಮಾತನಾಡಿ, ಸಂವಿಧಾನ ಜಾಗೃತಿ ಜಾಥಾ ವಿಶೇಷವಾದ ಅಭಿಯಾನ. ಈಗಾಗಲೇ ಜಾಥಾ ಕಾರ್ಯಕ್ರಮ ದೇವನಹಳ್ಳಿ, ಹೊಸಕೋಟೆ ಮುಗಿಸಿ ನಮ್ಮ ತಾಲೂಕಿಗೆ ಆಗಮಿಸಿದೆ. ಹೆಗ್ಗಡಿಹಳ್ಳಿ ಗ್ರಾಪಂ ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘಟನೆಗಳ‌ ಮುಖಂಡರು ಪಕ್ಷಾತೀತವಾಗಿ ಭಾಗವಹಿಸಿದ್ದಾರೆ. ಎಲ್ಲ ಪಂಚಾಯ್ತಿಗಳಲ್ಲಿ‌ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿದ ಬಳಿಕ ದೊಡ್ಡಬಳ್ಳಾಪುರದಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ ಬೀಳ್ಕೊಡಲಾಗುವುದು ಎಂದು ಹೇಳಿದರು.

ಹೆಗ್ಗಡಿಹಳ್ಳಿ ಗ್ರಾಪಂ ಸದಸ್ಯ ಮುನಿಕೃಷ್ಣಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದಲೂ ವಿವಿಧ‌ ಸಂಘಟನೆಗಳು ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಸಂವಿಧಾನದಿಂದಲೇ ನಾವೆಲ್ಲ ಜೀವಿಸುತ್ತಿದ್ದೇವೆ. ಜನಸಾಮಾನ್ಯರಿಗೆ ಎಲ್ಲ ರೀತಿಯ ಸ್ಥಾನ‌ಮಾನ ನೀಡಿರುವ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಸ್ವಾತಂತ್ರ್ಯ ಬಂದಾಗ ಎಷ್ಟು‌ ಸಂಭ್ರಮ ಪಟ್ಟಿದ್ದೇವೋ ಅದೇ ರೀತಿ ಸಂಭ್ರಮದ ವಾತಾವರಣ ಇಲ್ಲಿ‌ ಮನೆ ಮಾಡಿದೆ ಎಂದು ಹೇಳಿದರು.

ಜಿಲ್ಲಾ ನೋಡಲ್ ಅಧಿಕಾರಿ ಕವಿತಾ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಮುನಿರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮಾಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆಂಜಿನಮ್ಮ, ಉಪಾಧ್ಯಕ್ಷ ಜಗನ್ನಾಥ್ , ಸದಸ್ಯರಾದ ಮಂಜುನಾಥ್ ,ಪಲ್ಲವಿ, ಕವಿತಾ, ಮುನಿರತ್ನಮ್ಮ, ಮುನಿಕೃಷ್ಣಪ್ಪ, ಮಂಜುಳಾ, ಮುರಳಿ, ಮಂಜುಳಮ್ಮ, ಮುನಿರಾಜಪ್ಪ, ಪಿಡಿಒ ಸೌಮ್ಯ ವಿ, ಕಾರ್ಯದರ್ಶಿ ಲಕ್ಷ್ಮಮ್ಮ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಸಂಘಟನೆ ಸದಸ್ಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.10ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿಯಲ್ಲಿ ಸಂವಿಧಾನ ರಥಕ್ಕೆ ಸ್ವಾಗತ ನೀಡಲಾಯಿತು.10ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಹೆಗ್ಗಡಿಹಳ್ಳಿಯಲ್ಲಿ ಸಂವಿಧಾನ ಜಾಗೃತಿ ರಥಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.