ಕಡ್ಡಾಯ ಮತದಾನ ಮಾಡುವಂತೆ ವೈದ್ಯರ ಜಾಗೃತಿ

| Published : May 03 2024, 01:09 AM IST

ಸಾರಾಂಶ

ಬಾದಾಮಿ: ನಮ್ಮ ಮತ ನಮ್ಮ ಹಕ್ಕು ಎಂಬ ಧ್ಯೇಯದೊಂದಿಗೆ ಮೇ 7 ರಂದು ಲೋಕಸಭಾ ಚುನಾವಣೆಯ ದಿನ ತಪ್ಪದೇ ಮತದಾನ ಮಾಡುವಂತೆ ತಮ್ಮ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಹೇಳಿದರು.

ಬಾದಾಮಿ: ನಮ್ಮ ಮತ ನಮ್ಮ ಹಕ್ಕು ಎಂಬ ಧ್ಯೇಯದೊಂದಿಗೆ ಮೇ 7 ರಂದು ಲೋಕಸಭಾ ಚುನಾವಣೆಯ ದಿನ ತಪ್ಪದೇ ಮತದಾನ ಮಾಡುವಂತೆ ತಮ್ಮ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ಹೇಳಿದರು.ತಾಲೂಕಿನ ಬೇಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇಲೂರ ಪಿ.ಎಚ್.ಸಿ.ವೈದ್ಯಾಧಿಕಾರಿ ಡಾ.ವಾಸುದೇವರಾವ್ ಮಾತನಾಡಿ, ಎಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್.ಮಹಾಲಿಂಗಪೂರ ಮತದಾನ ಕುರಿತು ವಿವರವಾದ ಮಾಹಿತಿ ನೀಡಿದರು.

ಪಿಡಿಒ ಆರತಿ ಕೋಲಾರ್ ಹಾಗೂ ಸಿಬ್ಬಂದಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಎಸ್.ಬಿ.ಜಟಗಿಮಠ, ಬಿ.ಎಚ್.ನರಸಾಪೂರ, ವಿ.ಕೆ.ಚಳಗೇರಿ, ಬಿ.ಎನ್.ಜೋಶಿ, ಉಮೇಶ್ ಅಕ್ಕಸಾಲಿಗರ ಎಸ್.ವೈ.ದಳವಾಯಿ, ಬಿ.ಪಿ.ಮ್ಯಾಗೇರಿ, ಶಶಿಕಲಾ, ಮಹೇಶ್ ಹುಲ್ಯಾಳ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.ಬೇಲೂರು ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಬಿ.ಜಟಗಿಮಠ ಅವರು ಮತದಾನ ಜಾಗೃತಿ ಪ್ರತಿಜ್ಞಾವಿಧಿ ಬೋಧಿಸಿದರು.