ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸರ್ಕಾರಿ ಶಾಲೆ ಉಳಿಸುವುದು, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೋಲಾರದಿಂದ ಮೈಸೂರಿಗೆ ಸೈಕಲ್ ನಲ್ಲಿ 12 ಗಂಟೆಯಲ್ಲಿ ಕ್ರಮಿಸಿ ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಶ್ರೀನಿವಾಸ್ ಅವರನ್ನು ದಸಂಸ ಮುಖಂಡರು ಮತ್ತು ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು.ನಗರದ ಪುರಭವನ ಬಳಿ ಕೋಲಾರ ಜಿಲ್ಲೆ ಬೀರಮಾನಹಳ್ಳಿಯ ಶ್ರೀನಿವಾಸ್ ಅವರು ವೃತ್ತಿಯಲ್ಲಿ ದೈಹಿಕ ಶಿಕ್ಷರಾಗಿದ್ದ ಅವರು 60 ವರ್ಷವಾದರೂ ಸೈಕಲ್ ಸವಾರಿಯಲ್ಲಿ ವಿಶ್ವ ದಾಖಲೆ ಬರೆಯಲು ಮುಂದಾಗಿದ್ದಾರೆ. ಸರ್ಕಾರಿ ಶಾಲೆ ಉಳಿಸಿ, ಪರಿಸರ ಸಂರಕ್ಷಣೆ, ವ್ಯಾಯಾಮ, ಸಾಮಾಜಿಕ ಆಶಯಗಳನ್ನು ಈಡೇರಿಕೆ ಸೈಕಲ್ ಯಾತ್ರೆ ನಡೆಯುತ್ತಿದ್ದ ವೇಳೆ ಇಲ್ಲೊಬ್ಬರು ಸಮಾನತೆ ಅರಿವು ಸಾರಲು ಕೋಲಾರದಿಂದ ಮೈಸೂರಿಗೆ 12 ಗಂಟೆಯಲ್ಲಿ ಕ್ರಮಿಸಿ ಸಮಾನತೆ ಸಂದೇಶವನ್ನು ಸಾರಿದರು.ಪುರುಭವನ ಆವರಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜೈ ಭೀಮ್ ಘೋಷಣೆ ಮೂಲಕ ಶ್ರೀನಿವಾಸ್ ಅವರನ್ನು ಸ್ವಾಗತಿಸಲಾಯಿತು.ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಮಾತನಾಡಿ, ಸಮಾನತೆ ಸಂದೇಶ ಹೊತ್ತು ಸೈಕಲ್ ಸವಾರಿ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿರುವ ಶ್ರೀನಿವಾಸ್ ಅವರಿಗೆ ಅಭಿನಂದನೆ. ಪ್ರಸ್ತುತ ಭಾರತ ಬುದ್ಧ ಬಯಸಿದ ಭಾರತ ಆಗಿಲ್ಲ. ಜಾತಿ- ಧರ್ಮಗಳ ಮಧ್ಯ ಕಂದಕ ಹೆಚ್ಚಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಸಮಾನತೆಯ ಕನಸನ್ನು ಹೊತ್ತು ಸೈಕಲ್ ತುಳಿಯುತ್ತಿರುವುದು ಜನ ಮೆಚ್ಚಬೇಕಾದ ಕೆಲಸ. ಅಂಬೇಡ್ಕರ್ ಚಿಂತನೆಗಳಂತೆ ದೇಶ ಸಾಗಬೇಕು ಎಂದರು. ದೇಶಾದ್ಯಂತ 10,500 ಕಿ.ಮೀ ಸೈಕಲ್ ಜಾಥಾ ನಡೆಸಿರುವ ಕ್ರೀಡಾಪಟು, 43 ವರ್ಷಗಳಿಂದ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇವರು ಕೋಲಾರಕ್ಕೆ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಕೋಲಾರದಿಂದ ಬೆಂಗಳೂರಿಗೆ ಹಾಗೂ ಕೋಲಾರದಿಂದ ನಾಗಪುರ ಅಂಬೇಡ್ಕರ ಪುಣ್ಯ ಭೂಮಿ ಮತ್ತು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಸಂಘಟನ ಸಂಚಾಲಕ ಶಂಭುಲಿಂಗಸ್ವಾಮಿ, ಕಲ್ಲಳ್ಳಿ ಕುಮಾರ್, ಬಿ.ಡಿ. ಶಿವಬುದ್ಧಿ, ಹೆಗ್ಗನೂರು ಲಿಂಗರಾಜು, ಹುಣಸೂರು ರಾಮಕೃಷ್ಣ, ರಾಜು, ಎಚ್.ಡಿ. ಕೋಟೆ ಮಹೇಶ್, ಸಿದ್ದರಾಜು, ದಾಸಯ್ಯ, ಸರಗೂರು ಕಾಳಸ್ವಾಮಿ, ರಾಜು ಕುಕ್ಕೂರು, ಚಂದ್ರಶೇಖರ್, ಸೋಮಶೇಖರ್, ತಿಮ್ಮೇಗೌಡ, ಆಪ್ಸರ್ ಅಹಮ್ಮದ್, ಪ್ರಕಾಶ್, ವಿಶ್ವನಾಥ್ ಮೊದಲಾದವರು ಇದ್ದರು.