ಪರಿಸರ ಸ್ನೇಹಿ ದೀಪಾವಳಿಗಾಗಿ ಜಾಗೃತಿ ಕಾರ್ಯಕ್ರಮ

| Published : Nov 01 2024, 12:08 AM IST

ಸಾರಾಂಶ

ಪಟಾಕಿ ಸಿಡಿತದಿಂದ ಹಲವು ಆರೋಗ್ಯ ಸಮಸ್ಯೆಗಳು ಸೇರಿದಂತೆ ಮನುಷ್ಯನ ಕಣ್ಣು, ಕಿವಿಗೆ ಹಾನಿಯಾಗಿ ಜೀವನ ಪೂರ್ತಿ ನರಳುವಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯಿಂದ ‘ಪಟಾಕಿ ಬಿಟ್ಟಾಕಿ, ಪರಿಸರ ಉಳಿಸಿ’ ಸಂದೇಶದೊಂದಿಗೆ ಜನತೆಗೆ ಜಾಗೃತಿ ಮೂಡಿಸಲಾಯಿತು.

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯಿಂದ ಮದ್ದೂರು- ಮಳವಳ್ಳಿ ಮುಖ್ಯ ರಸ್ತೆಯಲ್ಲಿ ‘ಪಟಾಕಿ ಬಿಟ್ಹಾಕಿ- ಪರಿಸರ ಉಳಿಸಿ’ ಕಾರ್ಯಕ್ರಮಕ್ಕೆ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್ ಚಾಲನೆ ನೀಡಿ ಮಾತನಾಡಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ಮೂಲಕ ಉತ್ತಮ ವಾತಾವರಣ ಕಲ್ಪಿಸೋಣ ಎಂದರು.

ವೇದಿಕೆ ಉಪಾಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ ಮಾತನಾಡಿ, ಪಟಾಕಿ ಸಿಡಿಸುವ ಮೂಲಕ ದೇಶದ ಆರ್ಥಿಕ ಸಂಪತ್ತನ್ನು ಹಾಳು ಮಾಡುತ್ತಿದ್ದೇವೆ. ದೀಪಾವಳಿ ಹಬ್ಬದಂದು ಮನೆಯವರು ಸೇರಿ ಗಿಡನೆಟ್ಟು ಪೋಷಣೆ ಮಾಡಿದರೆ ಅದರ ನೆನಪು ನಿಮಗೆ ಇರುತ್ತದೆ. ಪರಿಸರ ಉಳಿಸಿದ ಪುಣ್ಯ ಬರುತ್ತದೆ ಎಂದು ಹೇಳಿದರು.

ಪರಿಸರ ಸಾಮಾಜಿಕ ಚಿಂತಕ ಅಂಬರಹಳ್ಳಿ ಸ್ವಾಮಿ ಮಾತನಾಡಿ, ಪಟಾಕಿ ಸಿಡಿತದಿಂದ ಹಲವು ಆರೋಗ್ಯ ಸಮಸ್ಯೆಗಳು ಸೇರಿದಂತೆ ಮನುಷ್ಯನ ಕಣ್ಣು, ಕಿವಿಗೆ ಹಾನಿಯಾಗಿ ಜೀವನ ಪೂರ್ತಿ ನರಳುವಂತಾಗುತ್ತದೆ ಎಂದು ಎಚ್ಚರಿಸಿದರು.

ಇದೇ ವೇಳೆ ಪಟಾಕಿ ಬಿಟ್ಟು ದೀಪ ಹಚ್ಚುವ ಮೂಲಕ ಹಬ್ಬ ಆಚರಿಸಿ ಪರಿಸರ ಉಳಿಸುವ ಬಗ್ಗೆ ಪ್ರತಿಜ್ಞಾನ ವಿಧಿ ಬೋಧಿಸಲಾಯಿತು.

ಪಟಾಕಿ ಬಿಟ್ಟು, ಗಿಡ ನೆಟ್ಟು, ಪರಿಸರ ಉಳಿಸಿ ಎಂದು ಘೋಷಣೆಗಳನ್ನು ಕೂಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ವೇದಿಕೆ ಪದಾಧಿಕಾರಿಗಳಾದ ರಘುವೆಂಕಟೇಗೌಡ, ಕರಡಕೆರೆ ಯೋಗೇಶ್, ಗುಡಿಗೇರೆ ಬಸವರಾಜು, ಮೈಕ್‌ಸೆಟ್ ಸುರೇಶ್, ಕ್ಯಾತಘಟ್ಟದ ಲಿಂಗಯ್ಯ, ಟೈಲರ್ ರಾಜು, ಮುಡೀನಹಳ್ಳಿ ತಿಮ್ಮಯ್ಯ, ದೇವರಹಳ್ಳಿ ಪುಟ್ಟರಾಜು, ತಿಪ್ಪೂರು ಅನ್ನದಾನಿ, ಆಲಭುಜನಹಳ್ಳಿ ಸುರೇಶ್, ಹನುಮೇಗೌಡ, ಬಿದರಹೊಸಹಳ್ಳಿ ಚಿಕ್ಕಬೋರೇಗೌಡ, ಸಿದ್ದರಾಜು, ಮಣಿಗೆರೆ ಕಾಳಪ್ಪ ಸೇರಿದಂತೆ ಹಲವರಿದ್ದರು.