ತಂಬಾಕು ದುಷ್ಪರಿಣಾಮ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ

| Published : Jun 03 2024, 12:32 AM IST

ತಂಬಾಕು ದುಷ್ಪರಿಣಾಮ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತಂಬಾಕಿನಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ

ಕೂಡ್ಲಿಗಿ: ಪಟ್ಟಣದ ಜ್ಞಾನಭಾರತಿ ಮಹಾವಿದ್ಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ತಾಲೂಕು ವಕೀಲರ ಸಂಘ, ಆರೋಗ್ಯ ಇಲಾಖೆ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಯಡಿಯೂರು ಸಿದ್ದಲಿಂಗೇಶ್ವರ ಸಾಮೂಹಿಕ ವಿದ್ಯಾಸಂಸ್ಥೆ, ಆರೋಹಣ ಸೊಸೈಟಿ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ತಂಬಾಕು ನಿಷೇಧ ದಿನದ ಕಾರ್ಯಕ್ರಮವನ್ನು ಜೊತೆಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ನೆರವು ಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಸ್.ಪಿ. ಪ್ರದೀಪಕುಮಾರ್ ಮಾತನಾಡಿ, ತಂಬಾಕು ಸೇವನೆಯಿಂದ ವಿದ್ಯಾರ್ಥಿಗಳು ದೂರ ಇರಬೇಕು. ಇಲ್ಲದೇ ಹೋದಲ್ಲಿ ತಂಬಾಕಿನಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ತಂಬಾಕು ತ್ಯಜಿಸುವ ವಿಧಾನವೆಂದರೆ ಪೌಷ್ಟಿಕ ಆಹಾರ ಸೇವಿಸುವುದು, ತಂಬಾಕು ಸೇವಿಸುವ ವ್ಯಕ್ತಿಗಳಿಂದ, ಅಂತಹ ಪರಿಸರದಿಂದ ಸಾಧ್ಯವಾದಷ್ಟು ದೂರವಿರುವುದು ತಂಬಾಕು ತಿನ್ನಬೇಕೆನಿಸಿದಾಗ ಮನಸ್ಸನ್ನು ನಿಗ್ರಹಿಸಲು ನಿಮಗೆ ಖುಷಿ ನೀಡುವ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕಗು. ತಂಬಾಕಿನಲ್ಲಿರುವ ನಿಕೋಟಿನಿಂದ ರಾಸಾಯನಿಕ ವಸ್ತು ಪ್ರಸನ್ನವಾಗಿರುತ್ತದೆ ಎಂಬ ಕಟು ಸತ್ಯ ಅರ್ಥ ಮಾಡಿಕೊಳ್ಳಬೇಕು. ತಂಬಾಕು ತ್ಯಜಿಸುವುದರಿಂದ ರಕ್ತದೊತ್ತಡ ಮತ್ತು ಹೃದಯಬಡಿತ ಸಾಮಾನ್ಯ ಹಂತಕ್ಕೆ ಬರುತ್ತದೆ. ದೇಹದಲ್ಲಿ ಕಾರ್ಬನ್ ಮೊನಾಕ್ಸೈಡ್ ಪ್ರಮಾಣ, ಹೃದಯಘಾತ ಕಡಿಮೆಯಾಗುತ್ತದೆ. ಹಣ ಉಳಿತಾಯವಾಗುತ್ತದೆ ಎಂದರು.

ಪ್ಯಾನೆಲ್ ವಕೀಲರಾದ ಡಿ.ಕರಿಬಸವರಾಜು, ಜೆ.ಎಂ. ಮಲ್ಲಿಕಾರ್ಜುನಯ್ಯರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಇಡಿ ಕಾಲೇಜು ಪ್ರಾಂಶುಪಾಲ ವಿಜಯಕುಮಾರ್ ವಹಿಸಿದ್ದರು. ಜ್ಯೋತಿ ಪ್ರಾರ್ಥಿಸಿದರು. ನವೀನಕುಮಾರ್ ನಿರೂಪಿಸಿದರು. ರಶ್ಮಿ ಕೆ. ಪ್ರಶಾಂತಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಭಾಗವಹಿಸಿದ್ದರು.