ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವ ಮೂಲಕವೇ ಸರ್ಕಾರ ರಚಿಸುವ ಅವಕಾಶಗಳಿರುವುದರಿಂದ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಅವರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುವುದು ಅಗತ್ಯ. ವಿದ್ಯಾವಂತರೇ ಇಂದು ಮತದಾನದಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುತ್ತಿಲ್ಲ. ಚುನಾವಣಾ ಆಯೋಗ ಸ್ಥಳೀಯ ಇಲಾಖೆಗಳ ಮೂಲಕ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ವಿದ್ಯಾವಂತ ಯುವಜನರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರುವುದು ವಿಷಾದನೀಯ ಎಂದು ಕೆ.ಪಿ.ಎಸ್ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಮುಳ್ಳಯ್ಯ ತಿಳಿಸಿದರು.ಹಳೇಬೀಡಿನ ಕೆ.ಪಿ.ಎಸ್.ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಮತದಾನ ಎಂದರೇನು, ದೇಶದ ಚುನಾವಣೆ ನೀತಿ ಅದರ ವ್ಯವಸ್ಥೆ, ಲೋಕಸಭೆ, ವಿಧಾನಸಭೆಯ ಮಹತ್ವ, ಲೋಕಸಭೆಯ ಪಕ್ಷದ ನಾಯಕ, ವಿಧಾನಸಭೆಯ ಪಕ್ಷದ ನಾಯಕ , ವಿಚಾರಗಳು, ಪ್ರಧಾನಮಂತ್ರಿಯ ದೇಶದ ಹೊಣೆ, ಮುಖ್ಯಮಂತ್ರಿಯ ರಾಜ್ಯದ ಹೊಣೆ ಇವುಗಳು ವಿಚಾರ ಮತ್ತು ಮಕ್ಕಳಿಗೆ ಶಾಲಾ ಹಂತದಲ್ಲೇ ಮತದಾನದ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಕ್ಕಳು ಭವಿಷ್ಯದ ಮೂಲಕ ಉತ್ತಮ ದೇಶವನ್ನು ಕಟ್ಟಲು ಸಾಧ್ಯವಿದೆ. ಮತದಾನದ ಬಗ್ಗೆ ವಿವಿಧ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.೨೦೨೫-೨೬ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ಚುನಾವಣೆ ದಿನಾಂಕದ ಅಧಿಸೂಚನೆ, ಅಧಿಕಾರಿಗಳ ನೇಮಕಾತಿ, ಚುನಾವಣೆಗೆ ಸ್ವರ್ಧಿಸಿದ ೨೯ ಅಭ್ಯರ್ಥಿಗಳು ನಾಮಪ್ರತ ಸಲ್ಲಿಕೆ, ವಾಪಸ್ ದಿನಾಂಕದಲ್ಲಿ ಕೊನೆಯ ಹಂತದಲ್ಲಿ ೨೦ ಸ್ಥಾನಕ್ಕೆ ಚುನಾವಣಿ ನಡೆಸಲಾಯಿತು.ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಮತಹಾಕುವ ವ್ಯವಸ್ಥೆ ತುಂಬ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಮತಹಾಕುವ ಸಂಖೆ ೩೩೬ ಮೊಬೈಲ್ ಇ.ವಿ.ಎಂ ಮೂಲಕ ಮತಚಲಾಯಿಸಿದರು. ಚುನಾವಣಿಯಲ್ಲಿ ಆಯ್ಕೆಗೊಂಡ ವಿಧ್ಯಾರ್ಥೀಗಳಿಗೆ ಪಕ್ಷದ ನಾಯಕ, ನಾಯಕಿ, ವಿವಿಧ ಮಂತ್ರಿಗಳು ಅದರಲ್ಲಿ ಹಣಕಾಸಿನ ಮಂತ್ರಿ, ಶಿಕ್ಷಣಾ ಮಂತ್ರಿ, ಸ್ವಚ್ಛತಾ ಮಂತ್ರಿ, ಕ್ರೀಡಾಮಂತ್ರಿ, ಆಹಾರ ಮಂತ್ರಿ ಹಾಗೂ ಇತರೆ ಮಂತ್ರಿಗಳ ಆಯ್ಕೆಯಾದರು.ಶಾಲಾ ಸಂಸತ್ತು ಮತದಾನವನ್ನು ಹಗರೆ ಸ.ಪ.ಪೂ.ಕಾಲೇಜು ರಾಜ್ಯಶಾಸ್ತ್ರ ಉಪನ್ಯಾಸಕ ಷಣ್ಮಖ ರವರ ಮಾರ್ಗದರ್ಶದಲ್ಲಿ ಯಶಸ್ವಿಯಾಗಿ ನೆಡೆಸಿಕೊಟ್ಟರು. ಚುನಾವಣಾಧಿಕಾರಿಯಾಗಿ ಶಿಕ್ಷಕ ಮೋಹನ್ ರಾಜ್ ಕಾರ್ಯನಿರ್ವಹಿಸಿದ್ದು, ಎಲ್ಲಾ ಶಿಕ್ಷಕರು ಚುನಾವಣೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಮತದಾನದ ಬಗ್ಗೆ ತಿಳಿಸಿದರು.