ಬಾಳೆಲೆ: ತಂತ್ರಜ್ಞಾನದಿಂದ ರೈತರ ಶಕ್ರೀಕರಣ ಜಾಗೃತಿ ಕಾರ್ಯಕ್ರಮ

| Published : Sep 04 2025, 01:01 AM IST

ಬಾಳೆಲೆ: ತಂತ್ರಜ್ಞಾನದಿಂದ ರೈತರ ಶಕ್ರೀಕರಣ ಜಾಗೃತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬಾಳೆಲೆಯಲ್ಲಿ ತಂತ್ರಜ್ಞಾನದಿಂದ ರೈತರ ಶಕ್ತೀಕರಣ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬಾಳೆಲೆಯಲ್ಲಿ ‘ತಂತ್ರಜ್ಞಾನದಿಂದ ರೈತರ ಶಕ್ತಿಕರಣ’ ಎಂಬ ಶೀರ್ಷಿಕೆಯಡಿ ಜಾಗೃತಿ ಮೂಡಿಸಿದರು.ಬಾಳೆಲೆಯ ಗದ್ದೆಗಳಲ್ಲಿ ಹಾಗೂ ಪಟ್ಟಣದಲ್ಲಿ ಕಾರ್ಯಕ್ರಮ ನಡೆಸಿದ ವಿದ್ಯಾರ್ಥಿಗಳು, ವಿವಿಧ ಮೊಬೈಲ್ ಆ್ಯಪ್‌ಗಳನ್ನು ಪರಿಚಯಿಸಿ, ಇದನ್ನು ಕೃಷಿ ಕ್ಷೇತ್ರದಲ್ಲ್ಲಿಹೇಗೆ ಬಳಸಬಹುದು, ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯಿಂದ ಆಗುವ ಪ್ರಯೋಜನ ಮತ್ತು ಲಾಭವೇನು ಎಂಬುವುದರ ಕುರಿತು ಮಾಹಿತಿ ನೀಡಿದರು.ಮೊಬೈಲ್ ಆ್ಯಪ್‌ಗಳು ಕೃಷಿ ಕಾರ್ಯಗಳನ್ನು ಸುಲಭಗೊಳಿಸುವುದರ ಜೊತೆಗೆ ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ರೈತರಿಗೆ ವಿವರಿಸಿದರು.ತಂತ್ರಜ್ಞಾನ ಬಳಸಿ ಕೃಷಿಯಲ್ಲಿ ಯಶಸ್ಸು ಸಾಧಿಸುವ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಲು ವಿದ್ಯಾರ್ಥಿಗಳು ಆಕರ್ಷಕ ಪೋಸ್ಟರ್‌ಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು. ಲ್ಯಾಪ್‌ಟಾಪ್‌ಗಳ ಮೂಲಕ ನೇರ ಪ್ರದರ್ಶನಗಳನ್ನು ನೀಡಿದರು. ಗದ್ದೆಗಳಲ್ಲಿ ನೀರು ತುಂಬಿಸಿ, ಮಣ್ಣು ಮಿಶ್ರಣ ಮಾಡುವ ಕಾರ್ಯದಲ್ಲೂ ಪಾಲ್ಗೊಂಡ ವಿದ್ಯಾರ್ಥಿಗಳು ರೈತರ ಹಿತಕ್ಕಾಗಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಾಳೆಲೆಯಲ್ಲಿ ಸುಮಾರು 21 ದಿನ ಗ್ರಾಮೀಣ ಜೀವನದ ಸಂಪರ್ಕವನ್ನು ಸಾಧಿಸಿ, ಗ್ರಾಮಾಭಿವೃದ್ಧಿಗೆ ಕೈಜೋಡಿಸಲು ಪ್ರೇರೇಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ರೈತರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.