ಹೊನ್ನಾಳಿಯಲ್ಲಿ ಹಿಂದುಳಿದ, ದಲಿತರಿಂದ ಜನಜಾಗೃತಿ ರ್ಯಾಲಿ

| Published : Apr 20 2025, 01:51 AM IST

ಹೊನ್ನಾಳಿಯಲ್ಲಿ ಹಿಂದುಳಿದ, ದಲಿತರಿಂದ ಜನಜಾಗೃತಿ ರ್ಯಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ ಸಂರಕ್ಷರ ಬೃಹತ್ ಸಮಾವೇಶ ನಡುಕರ್ನಾಟಕದ ದಾವಣಗೆರೆಯಲ್ಲಿ ಏ.26ರಂದು ಬೆಳಗ್ಗೆ 11 ಗಂಟೆಗೆ ಬೀರಲಿಂಗೇಶ್ವರ ದೇವಸ್ಥಾನ ಆವರಣ, ಹೈಸ್ಕೂಲ್ ಫೀಲ್ಡ್ ಸಮಿಪ ಜರುಗಲಿದೆ.

- ಸಂವಿಧಾನ ಸಂರಕ್ಷಣಾ ಪಡೆ ಸದಸ್ಯತ್ವ ಪಡೆಯಲು ಎಚ್‌.ಎ.ಉಮಾಪತಿ ಮನವಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸಂವಿಧಾನದ ಸಂರಕ್ಷರ ಬೃಹತ್ ಸಮಾವೇಶ ನಡುಕರ್ನಾಟಕದ ದಾವಣಗೆರೆಯಲ್ಲಿ ಏ.26ರಂದು ಬೆಳಗ್ಗೆ 11 ಗಂಟೆಗೆ ಬೀರಲಿಂಗೇಶ್ವರ ದೇವಸ್ಥಾನ ಆವರಣ, ಹೈಸ್ಕೂಲ್ ಫೀಲ್ಡ್ ಸಮಿಪ ಜರುಗಲಿದೆ.

ಈ ನಿಟ್ಟಿನಲ್ಲಿ ಸಂವಿಧಾನ ಸಂರಕ್ಷಣಾ ಪಡೆ ಸದಸ್ಯರಾಗಲು ಜನರಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಹೊನ್ನಾಳಿ ತಾಲೂಕಿನ ಹಿಂದುಳಿದ ವರ್ಗಗಳು ಸೇರಿದಂತೆ ದಲಿತ ಸಮುದಾಯದವರು ಪಟ್ಟಣದ ಪುರಸಭೆಯಿಂದ ಕನಕದಾಸ ವೃತ್ತಕ್ಕೆ ತೆರಳಿ ಅಲ್ಲಿ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.

ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ ಈ ಸಂದರ್ಭ ಮಾತನಾಡಿ, ಸಂವಿದಾನ ಸಂರಕ್ಷಕ ಆಗುವುದೆಂದರೆ ಶಾಂತಿಯ ತೋಟದ ಮಾಲಿಗಳಾಗುವುದು, ಪ್ರೀತಿ ಸಂದೇಶದ ಪಾರಿವಾಳಗಳಾಗುವುದು, ಸತ್ಯದ ವಕ್ತಾರರಾಗುವುದು, ಸ್ವಾತಂತ್ರ್ಯದ ನಿನಾದವಾಗುವುದು, ನ್ಯಾಯದ ಪರಿಪಾಲಕರಾಗುವುದು, ನಾಡ ಕಾಯುವ ಯೋಧರಾಗುವುದು ಎಂದರ್ಥ ಎಂದರು.

ಇಡೀ ವಿಶ್ವ ಮೆಚ್ಚಿ, ತಲೆ ಬಾಗಿರುವ ಡಾ.ಅಂಬೆಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನದ ಸಂರಕ್ಷಕರಾಗಿ ಸೇವೆ ಸಲ್ಲಿಸುವುದು ಕೂಡ ಭಾರತೀಯ ಪ್ರಜೆಗಳ ಸೌಭಾಗ್ಯವಾಗಿದೆ. ನಾವು ಸಂವಿಧಾನ ಸಂರಕ್ಷರಾಗುವ ಜೊತೆಗೆ ನಮ್ಮವರನ್ನೂ ಇದರ ಸದಸ್ಯರನ್ನಾಗಿಸೋಣ ಎಂದರು.

ಸಂವಿಧಾನ ರಕ್ಷಣಾ ಪಡೆಯ ಸದಸ್ಯರಾಗಲು ಬಯಸುವವರು ಕ್ಯು.ಆರ್. ಕೋಡ್‌ಗಳ ಮೂಲಕ ಕನಿಷ್ಠ ₹100 ಕೊಡುಗೆ ಸಂದಾಯ ಮಾಡಿ, ಅಗತ್ಯ ವಿವರ ಒದಗಿಸಿ ನೋಂದಾಯಿಸಿಕೊಳ್ಳಬಹುದು. ಕ್ಯು.ಆರ್. ಕೋಡ್‌ ಸಮಾವೇಶ ಕಾರ್ಯಕ್ರಮದ ಕರಪತ್ರಗಳಲ್ಲಿ ಲಭ್ಯವಿದೆ. ಕರಪತ್ರಗಳನ್ನು ಬೈಕ್ ರ್ಯಾಲಿ ಮೂಲಕ ಸಾಗುತ್ತಾ ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ಉಮಾಪತಿ ಹೇಳಿದರು.

ಈ ಸಂದರ್ಭ ದಲಿತ ಮುಖಂಡರಾದ ದಿಡಗೂರು ತಮ್ಮಣ್ಣ ಪ್ರಜಾ ಪರಿವರ್ತನಾ ಸಮಿತಿ ಮುಖಂಡ ಎ.ಡಿ. ಈಶ್ವರಪ್ಪ, ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಅಂಜು ನಾಯ್ಕ, ಕಾಂಗ್ರೆಸ್ ಯುವ ಮುಖಂಡ ಎಚ್.ಎಸ್. ರಂಜಿತ್, ಮನೋಜ್ ವಾಲಜ್ಜಿ, ಹಾಲುಮತ ಸಮಾಜದ ರಾಜು ಕಣ್ಣಗಣ್ಣಾರ, ವಿನಯ್ ವಗ್ಗರ್, ಮಾರಿಕೊಪ್ಪದ ಮಂಜಪ್ಪ, ಕುರುವ ಮಂಜಪ್ಪ, ಸೊರಟೂರು ಹನುಮಂತಪ್ಪ, ವಿವಿಧ ಸಮುದಾಯಗಳ ಮುಖಂಡರು ಇದ್ದರು.

- - -

-19ಎಚ್.ಎಲ್.ಐ1.ಜೆಪಿಜಿ:

ಸಂವಿಧಾನ ಸಂರಕ್ಷಕರ ಸಮಾವೇಶ ಬಗ್ಗೆ ಜನಜಾಗೃತಿ ಮೂಡಿಸಲು ಹೊನ್ನಾಳಿ ತಾಲೂಕಿನ ಹಿಂದುಳಿದ ವರ್ಗಗಳು, ದಲಿತ ಸಮುದಾಯಗಳ ಮುಖಂಡರು ಹೊನ್ನಾಳಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಿದರು.