ಸಾರಾಂಶ
ಮದ್ಯಸೇವನೆ ಒಂದು ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮದ್ಯವೆಸನ ಮುಕ್ತರನ್ನಾಗಿ ಮಾಡಲು ಆರೋಗ್ಯ ಇಲಾಖೆಯೂ ಚಿಕಿತ್ಸೆಯನ್ನು ಸಹ ನೀಡುತ್ತಿದೆ. ಅದೇ ರೀತಿ ಸಂಸ್ಥೆ ಮದ್ಯವೆಸನ ಮುಕ್ತರನ್ನಾಗಿ ಮಾಡಲು ರಾಜ್ಯಾದ್ಯಾಂತ ವದ್ಯವರ್ಜನಾ ಶಿಬಿರ ನಡೆಸಿ ಕುಡಿತ ಬಿಡಿಸುವ ಕೆಲಸ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮದ್ಯವರ್ಜನ ಶಿಬಿರದ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳೀಧರ್ ತಿಳಿಸಿದರು.ಪಟ್ಟಣದ ಹಾರೋಹಳ್ಳಿಯ ಶ್ರೀಲಕ್ಷ್ಮಿನಾರಾಯಣಸ್ವಾಮಿ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿ ಹಾರೋಹಳ್ಳಿ, ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆದ 1850ನೇ ಮದ್ಯವರ್ಜನಾ ಶಿಬಿರದಲ್ಲಿ ಮಾತನಾಡಿದರು.
ಮದ್ಯಸೇವನೆ ಒಂದು ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮದ್ಯವೆಸನ ಮುಕ್ತರನ್ನಾಗಿ ಮಾಡಲು ಆರೋಗ್ಯ ಇಲಾಖೆಯೂ ಚಿಕಿತ್ಸೆಯನ್ನು ಸಹ ನೀಡುತ್ತಿದೆ. ಅದೇ ರೀತಿ ಸಂಸ್ಥೆ ಮದ್ಯವೆಸನ ಮುಕ್ತರನ್ನಾಗಿ ಮಾಡಲು ರಾಜ್ಯಾದ್ಯಾಂತ ವದ್ಯವರ್ಜನಾ ಶಿಬಿರ ನಡೆಸಿ ಕುಡಿತ ಬಿಡಿಸುವ ಕೆಲಸ ಮಾಡುತ್ತಿದೆ ಎಂದರು.ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿಬಾಬು ಮಾತನಾಡಿ, ಇತ್ತೀಚಿನ ದಿನಗಳ ಕುಡಿತಕ್ಕೆ ಹೆಚ್ಚು ಒಳಗಾಗಿದ್ದಾರೆ. ಇದರಿಂದ ಮನೆಗಳಲ್ಲಿ ಜಗಳ, ಕಲಹಗಳು ಉಂಟಾಗಿ, ನೆಮ್ಮದಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗಾಗಿ ಯುವಜನತೆ ಕುಡಿತದ ದಾಸ್ಯದಿಂದ ವಿಮುಕ್ತರಾಗಬೇಕು ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಅಶ್ವಥ್‌ಕುಮಾರೇಗೌಡ ಮಾತನಾಡಿ, ಮದ್ಯವರ್ಜನಾ ಶಿಬಿರ ಡಾ.ವೀರೇಂದ್ರ ಹೆಗ್ಗಡೆ ಅವರ ಕನಸ್ಸಿನ ಕೂಸು. ಶಿಬಿರದಲ್ಲಿ ಹಲವು ಮಂದಿ ಪಾಲ್ಗೊಂಡು ವ್ಯಸನಮುಕ್ತರನ್ನಾಗಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.ಶಿಬಿರದಲ್ಲಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಯೋಜನಾಧಿಕಾರಿ ಎಸ್.ಯಶವಂತ್, ಎಚ್.ಆರ್.ಧನ್ಯಕುಮಾರ್, ಡಾ.ಸಿ.ಎ.ಅರವಿಂದ್, ಬಂಕ್ ಶ್ರೀನಿವಾಸ್, ಡೇರಿ ನಿವೃತ್ತ ಕಾರ್‍ಯದರ್ಶಿ ಗಿರೀಗೌಡ, ಪಟೇಲ್ ರಮೇಶ್, ರಾಮಕೃಷ್ಣ, ಸಿ.ಡಿ.ಮಹದೇವು, ಲಕ್ಷ್ಮೇಗೌಡ, ಚಂದ್ರಶೇಖರ್, ಗ್ರಾಪಂ ಅಧ್ಯಕ್ಷರಾದ ಪ್ರಭಾಕರ್, ರಾಜೇಗೌಡ, ಧರ್ಮಸ್ಥಳ ಸಂಸ್ಥೆಯ ಕುಪ್ಪಸ್ವಾಮಿ, ಸರ್ವಮಂಗಳ, ಸಂತೋಷ್, ಉಮೇಶ್, ತೇಶ್ವಿನಿ, ಮಾದವನನಾಯ್ಕ, ದಿವಾಕರ್, ಪೂಜಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು.