ಕಾಡಾನೆ ಕುರಿತು ಜನಜಾಗೃತಿ
KannadaprabhaNewsNetwork | Published : Oct 18 2023, 01:00 AM IST
ಸಾರಾಂಶ
ನೇಚರ್ ಕನ್ಸರ್ವೇಷನ್ ಫೌಂಡೇಶನ್ ಮೈಸೂರು, ಕರ್ನಾಟಕ ಅರಣ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆನೆ ಮತ್ತು ಜನರ ಹೊಂದಾಣಿಕೆ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಯಿತು.
ಕನ್ನಡಪ್ರಭ ವಾರ್ತೆ ಅರೇಹಳ್ಳಿ ಬೇಲೂರು ತಾಲೂಕಿನ ಅರೇಹಳ್ಳಿಯ ಸರಕಾರಿ ಬಸ್ ನಿಲ್ದಾಣದ ಎದುರು ನೇಚರ್ ಕನ್ಸರ್ವೇಷನ್ ಫೌಂಡೇಶನ್ ಮೈಸೂರು, ಕರ್ನಾಟಕ ಅರಣ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆನೆ ಮತ್ತು ಜನರ ಹೊಂದಾಣಿಕೆ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಯಿತು. ಆನೆ ಹಾಗೂ ಮಾನವರ ಹೊಂದಾಣಿಕೆ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಮೈಸೂರಿನಿಂದ ಆಗಮಿಸಿದಂತಹ ಪೃಥ್ವಿ ಕಲಾತಂಡದವರು ನಡೆಸಿಕೊಟ್ಟರು. ಆನೆಗಳ ಕುರಿತು ಹಾಡುಗಳನ್ನು ಹಾಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಯಿತು. ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಭು, ವಲಯಾರಣ್ಯಾಧಿಕಾರಿ ವಿನಯ್ ಕುಮಾರ್, ಹಾಸನ ಆನೆಕಾರ್ಯಪಡೆಯ ಅಧಿಕಾರಿ ಜಯಂತ್ ಕಾಮ್ರೆಕರ್, ಉಪ ವಲಯಣ್ಯಾಧಿಕಾರಿ ಗುರುರಾಜ್, ರೋಟರಿ ಸಂಸ್ಥೆಯ ಅಧ್ಯಕ್ಷ ರೋ.ಪೃಥ್ವಿ, ರೋ.ವಿನಾಯಕ್, ರೋ.ಚೇತನ್, ರೋ.ವಿನಯ್, ರೋ.ವಿಜಯ್, ರೋ.ಕಾರ್ತಿಕ್, ಎಟಿಎಫ್ ಮತ್ತು ಆರ್‌ಆರ್‌ಟಿ ಸಿಬ್ಬಂದಿಗಳು ಭಾಗವಹಿಸಿದ್ದರು.