ಸರ್ಕಾರಿ ಸ್ನಾತಕೋತ್ತರ ಕೇಂದ್ರದಲ್ಲಿ ಸಕಾಲ ಅರಿವು ಕಾರ್ಯಕ್ರಮ

| Published : Dec 25 2023, 01:30 AM IST

ಸರ್ಕಾರಿ ಸ್ನಾತಕೋತ್ತರ ಕೇಂದ್ರದಲ್ಲಿ ಸಕಾಲ ಅರಿವು ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ನಿಗದಿತ ಸಮಯದಲ್ಲಿ ಎಲ್ಲಾ ನಾಗರಿಕರಿಗೆ ಕಚೇರಿ ಸೇವೆಗಳನ್ನು ಒದಗಿಸುವ ಮೂಲಕ ಸರ್ಕಾರವು ಸಾರ್ವಜನಿಕರಿಗೆ ನೀಡುವ ಸೌಲಭ್ಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ತಲುಪಿಸುವ ದೃಢಸಂಕಲ್ಪದೊಂದಿಗೆ ಸಕಾಲ ಯೋಜನೆಯನ್ನು ಅನುಷ್ಠಾನಗೊಳಿಸಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.೨೦೧೧ನೇ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಸರ್ವಾನುಮತದಿಂದ ಅಂಗೀಕರಿಸಿ ಇದನ್ನು ಜಾರಿಗೆ ತರಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸ್ವಾಯತ್ತ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಸರ್ಕಾರದ ಮಹತ್ತರ ಯೋಜನೆಗಳಲ್ಲೊಂದಾದ "ಸಕಾಲ " ಅರಿವು ಜಾಗೃತಿ ಕಾರ್ಯಕ್ರಮದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಎಂ.ಬಿ.ಇರ್ಷಾದ್‌ರವರು ವಹಿಸಿ ಮಾತನಾಡಿ, ಜಿಲ್ಲಾಡಳಿತವು ಸಕಾಲ ಅರಿವು ಕಾರ್ಯಕ್ರಮದ ಕಾರ್ಯಾಗಾರವನ್ನು ಹಲವು ಕಡೆ ಹಮ್ಮಿಕೊಂಡಿದ್ದು ನಿಗದಿತ ಸಮಯದಲ್ಲಿ ಎಲ್ಲಾ ನಾಗರಿಕರಿಗೆ ಕಚೇರಿ ಸೇವೆಗಳನ್ನು ಒದಗಿಸುವ ಮೂಲಕ ಸರ್ಕಾರವು ಸಾರ್ವಜನಿಕರಿಗೆ ನೀಡುವ ಸೌಲಭ್ಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ತಲುಪಿಸುವ ದೃಢಸಂಕಲ್ಪದೊಂದಿಗೆ ಸಕಾಲ ಯೋಜನೆಯನ್ನು ಅನುಷ್ಠಾನಗೊಳಿಸಿ ಜಾಗೃತಿಯನ್ನು ಮೂಡಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು, ಅಧಿಕಾರಿಗಳು, ಅಧ್ಯಾಪಕರು, ಹಿರಿಯ ನಾಗರಿಕರು ಎಲ್ಲರಿಗೂ ಸಕಾಲದ ಸೇವೆಯನ್ನು ಸಕಾಲಕ್ಕೆ ಒದಗಿಸಲು ಪ್ರಯತ್ನಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಆರ್.ಶಾಂತರವರು ಉದ್ಘಾಟಿಸಿ, ಸಕಾಲ ಅರಿವು ಯೋಜನೆಯ ಬಗ್ಗೆ ಮಾತನಾಡಿದರು. ಸಂಚಾಲಕರಾದ ಡಾ.ಸುರೇಶ.ಸಿ ರವರು ಪ್ರಾಸ್ತಾವಿಕವಾಗಿ ಸಕಾಲ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಸಕಾಲ ಕರ್ನಾಟಕ ರಾಜ್ಯದ ಒಂದು ವಿಶೇಷ ಮಹತ್ತರ ಯೋಜನೆಯಾಗಿದೆ. ಇದು ಕರ್ನಾಟಕ ರಾಜ್ಯದ ಅನುಸೂಚಿಯಲ್ಲಿ ಉಲ್ಲೇಖಿಸಿದ ನಾಗರಿಕ ಸೇವೆಗಾಗಿ ನಿಗದಿತ ಕಾಲದೊಳಗೆ ಸೇವೆಯನ್ನು ಒದಗಿಸುವ ಯೋಜನೆಯಾಗಿದೆ. ೨೦೧೧ನೇ ಡಿಸೆಂಬರ್‌ನಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಸರ್ವಾನುಮತದಿಂದ ಅಂಗೀಕರಿಸಿ ಜಾರಿಗೆ ತರಲಾಯಿತು. ಸಕಾಲದ ಉದ್ದೇಶ: ಈ ನಿಯಮವು ಸಾರ್ವಜನಿಕರಿಗೆ ನಿಗದಿತ ವೇಳೆಯಲ್ಲಿ ನಾಗರಿಕ ಸೇವೆಗಳನ್ನು ಶೀಘ್ರವಾಗಿ ಒದಗಿಸುವುದಾಗಿದೆ. ಅಂದರೆ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿ ನಾಗರಿಕ ಸೇವೆಗೆ ಅರ್ಜಿ ಸಲ್ಲಿಸಿದಾಗ ಅದಕ್ಕೆ ಶೀಘ್ರವಾಗಿ ಪರಿಹಾರ ದೊರಕಿಸಿ ಕೊಡುವ ಯೋಜನೆಯಾಗಿದೆ. ಸಕಾಲಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಮಾಹಿತಿ ಪಡೆದುಕೊಳ್ಳಲು ಕರ್ನಾಟಕ ಸರ್ಕಾರ ಡಬ್ಲ್ಯೂಡಬ್ಲೂಡಬ್ಲ್ಯೂಕೆಜಿ. ಎಸ್‌ಸಿ.ಕೆ ಎಆರ್.ಎನ್‌ಐಸಿ. ಇನ್ ಎಂಬ ವೆಬ್‌ಸೈಟ್‌ನಲ್ಲಿ ಸಾಕಷ್ಟು ಮಾಹಿತಿ ದೊರಕಿಸಿಕೊಡುತ್ತದೆ. ನಾಗರಿಕ ಸೇವೆಗಳನ್ನು ಪಡೆಯಲು ಸಕಾಲದಲ್ಲಿ ಅರ್ಜಿ ಸಲ್ಲಿಸಿದಾಗ ಅದನ್ನು ಪರಿಶೀಲಿಸಲು ನಿಯೋಜಿತ ಅಧಿಕಾರಿಯನ್ನು ನೇಮಕ ಮಾಡಲಾಗಿರುತ್ತದೆ. ಒಂದು ವೇಳೆ ನಿಯೋಜಿತ ಅಧಿಕಾರಿ ನಿಗದಿತ ವೇಳೆಯಲ್ಲಿ ಪರಿಹಾರ ನೀಡದಿದ್ದರೆ ಸಕ್ಷಮ ಅಧಿಕಾರಿಗೆ ಅಪೀಲು ಸಲ್ಲಿಸಬಹುದು. ಸಕ್ಷಮ ಅಧಿಕಾರಿ ಸರ್ಕಾರ ದಿಂದ ನೇಮಕವಾದ ಒಬ್ಬ ಅಧಿಕಾರಿಯಾಗಿದ್ದು ವಿಳಂಬವಾದ ಸೇವೆಗೆ ಪರಿಹಾರಕ್ಕೆ ವಚ್ಚ ವಿಧಿಸುವ ಅಧಿಕಾರ ಹೊಂದಿರುತ್ತಾರೆ. ಒಂದು ವೇಳೆ ನಿಮ್ಮ ಅರ್ಜಿ ವಿಳಂಬವಾದರೆ, ತಿರಸ್ಕೃತವಾದರೆ ಸಕ್ಷಮ ಅಧಿಕಾರಿಗೆ ಅಪೀಲು ಸಲ್ಲಿಸಬಹುದು. ಸಕ್ಷಮ ಅಧಿಕಾರಿ ದಿನಕ್ಕೆ ೨೦ ರುಪಾಯಿಗಳಂತೆ ಪರಿಹಾರ ನೀಡಬಹುದು. ಮಹಿಳಾ ಮತ್ತು ಮಕ್ಕಳ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ಗೃಹ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣ ವಸತಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ, ಶಿಕ್ಷಣ ಇಲಾಖೆ, ಇಂದನ ಇಲಾಖೆ ಮುಂತಾದ ಇಲಾಖೆಗಳಲ್ಲಿ ಸಕಾಲ ಸೇವೆ ಲಭ್ಯವಿದೆ. ಇದನ್ನು ಎಲ್ಲರು ಸದುಪಯೋಗಪಡಿಸಿಕೊಂಡು ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ ಎಂದರು. ಕಾರ್ಯಕ್ರಮದಲ್ಲಿ ಡಾ.ಎನ್. ವೆಂಕಟನರಸಯ್ಯ, ಪ್ರಮೀಳ, ಮಂಜಮ್ಮ ಹಾಗೂ ಪವನ್. ಜೆ.ಕೆ ಮುಂತಾದವರು ಉಪಸ್ಥಿತರಿದ್ದರು.