ಸಾರಾಂಶ
ಶ್ರದ್ಧೆ, ಭಕ್ತಿ, ವಿಶ್ವಾಸವಿಟ್ಟು ದೇವಿ ಸೇವೆ ಮಾಡಿದಾಗ ಸಕಲ ಇಷ್ಟಾರ್ಥಗಳನ್ನು ನೀಡುತ್ತಾಳೆ
ಗದಗ: ದೇವಿಯ ಆರಾಧನೆಯಿಂದ ಪ್ರಾಪಂಚಿಕ ದುಃಖ-ದುಮ್ಮಾನಗಳು ದೂರವಾಗುತ್ತವೆ ಎಂದು ಶ್ರೀ ಶಂಕರಾನಂದ ಸ್ವಾಮಿಗಳು ಹೇಳಿದರು.
ನಗರದ ಶ್ರೀಸದ್ಗುರು ಮುಕ್ಕಣ್ಣೇಶ್ವರ ಮಠದಲ್ಲಿ ನಡೆದ ದಸರಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶ್ರದ್ಧೆ, ಭಕ್ತಿ, ವಿಶ್ವಾಸವಿಟ್ಟು ದೇವಿ ಸೇವೆ ಮಾಡಿದಾಗ ಸಕಲ ಇಷ್ಟಾರ್ಥಗಳನ್ನು ನೀಡುತ್ತಾಳೆ. ಮಕ್ಕಳನ್ನು ಇಂಥ ಸಂಸ್ಕಾರಕ್ಕೆ ತಾಯಂದಿರು ಅಣಿಗೊಳಿಸಬೇಕು ಎಂದರು.ಉಪನ್ಯಾಸ ನೀಡಿದ ಬಿ.ಎಚ್. ಗರಡಿಮನಿ, ಶ್ರೀದೇವಿ ಅವತಾರಗಳ ಹಿನ್ನೆಲೆ, ಭಾರತೀಯ ಪರಂಪರೆ ಮಹತ್ವವನ್ನು ವಿವರಿಸಿ, ಮದುವೆ ಮುಂತಾದ ಕಾರ್ಯಗಳಲ್ಲಿ ದೇವರ ಕಾರ್ಯ ಅನ್ನುವುದು ಇಂದಿಗೂ ನಡೆಸಿಕೊಂಡು ಬಂದಿರುವುದು ನಮ್ಮ ಪರಂಪರೆಯಾಗಿದೆ ಎಂದರು.
ಎಸ್.ವಿ. ಕೊಂಡಿ ಮಾತನಾಡಿದರು. ಪ್ರವಚನಕಾರ ಮಲ್ಲೇಶಪ್ಪ ಅಣ್ಣಿಗೇರಿ, ವಿ.ಕೆ. ಗುರುಮಠ, ಬಸವರಾಜ ಬಿಂಗಿ, ವೈ.ಎಸ್. ಕೊಂಡಿ, ರತನ್ ದೇಸಾಯಿ, ವಿ.ಎಸ್. ಕೊಟಗಿ, ನಾಮದೇವ ಜಗದಾಳೆ, ವಿ.ಎ. ಕುಂಬಾರ, ಎಂ.ಜಿ. ಕಮತರ, ಆರ್.ಆರ್. ಕಾಶಪ್ಪನವರ, ಮಂಜುನಾಥ ಡಿ. ನಾಗರಾಳ, ಲಕ್ಷ್ಮಣ ಮಸ್ಕಿ, ರಾಮನಗೌಡ ಕಗದಾಳ, ಶಿವರಡ್ಡಿ ಬರಡಿ, ಬಸವರಾಜ ಭಜಂತ್ರಿ ಇದ್ದರು. ಸಂಗೀತ ಸೇವೆಯನ್ನು ಶ್ರೀಕಾಂತ ಹೂಲಿ, ಅಮರೇಶ ಕರಬಿಷ್ಠಿ ನೀಡಿದರು. ಕೆ.ಬಿ. ಕೊಣ್ಣುರ ಕಾರ್ಯಕ್ರಮ ನಿರೂಪಿಸಿದರು. ಎಸ್.ಕೆ. ಮಾಗುಂಡ, ಆರ್.ಎಫ್. ಹಾಳಕೇರಿ ಸ್ವಾಗತಿಸಿದರು. ಚನ್ನಪ್ಪಗೌಡ್ರ ವಂದಿಸಿದರು.