ಸಾರಾಂಶ
ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಿಂದ ಜಿಲ್ಲೆಯ ಏಳು ಮಂದಿ ಮಠಾಧೀಶರು ಶನಿವಾರ ಕರ್ನಾಟಕದಿಂದ ತೆರಳಿದ್ದಾರೆ. ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಠಾಧೀಶರು ಲಕ್ನೋಗೆ ಪ್ರಯಾಣ ಬೆಳೆಸಿದರು.
ಚಿತ್ರದುರ್ಗ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಿಂದ ಜಿಲ್ಲೆಯ ಏಳು ಮಂದಿ ಮಠಾಧೀಶರು ಶನಿವಾರ ಕರ್ನಾಟಕದಿಂದ ತೆರಳಿದ್ದಾರೆ. ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮಠಾಧೀಶರು ಲಕ್ನೋಗೆ ಪ್ರಯಾಣ ಬೆಳೆಸಿದರು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ತಾಲೂಕಿನ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಭಗೀರಥ ಗುರುಪೀಠದಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅಯೋಧ್ಯೆಗೆ ತೆರಳಿದರು. ಶನಿವಾರ ಸಂಜೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿದಾಗ ಎಲ್ಲಿರೂಗ ಅದ್ದೂರಿ ಸ್ವಾಗತ ಕೋರಿ ಬಿಗಿ ಪೊಲೀಸ್ ಬಸ್ತ್ ನಲ್ಲಿ ಅಯೋಧ್ಯೆಗೆ ಕರೆದೊಯ್ಯಲಾಗಿದೆ. ಅಯೋಧ್ಯೆಯಲ್ಲಿ ದೇಶದ ಸುಮಾರು 4 ಸಾವಿರ ಸಾಧು ಸಂತರು, ಗಣ್ಯರು ಸೇರಲಿದ್ದಾರೆ.ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಕುಂಚಿಟಿಗ ಪೀಠದ ಶಾಂತವೀರ ಸ್ವಾಮೀಜಿ ಬೆಳಿಗ್ಗೆ ಚಿತ್ರದುರ್ಗ ಬಿಡುವ ಮೊದಲು ಮುರುಘಾಮಠಕ್ಕೆ ತೆರಳಿ ಕತೃ ಗದ್ದುಗೆಗೆ ನಮಿಸಿದರು.