ಸಾರಾಂಶ
ರಾಮ ಮಂದಿರ ನಿರ್ಮಾಣದ ಕುರಿತಾಗಿ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡೋಣ. ನಮ್ಮ ಸಂಸ್ಕೃತಿ ಸಂಪ್ರದಾಯ ಎತ್ತಿ ಹಿಡಿಯುವ ಕೆಲಸ ಮಾಡಬೇಕು
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಹಿಂದೂಗಳಿಗೆ ಅಯೋಧ್ಯೆಯು ಶ್ರದ್ಧಾ ಹಾಗೂ ಧಾರ್ಮಿಕ ಕೇಂದ್ರವಾಗಿದೆ. ರಾಮ ಮಂದಿರ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಲಾಲಕೃಷ್ಣ ಅಡ್ವಾನಿಯವರು. ಅವರು ಇಡೀ ದೇಶದ ತುಂಬೆಲ್ಲ ರಥಯಾತ್ರೆ ಮೂಲಕ ಸಂಚರಿಸಿ, ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದರು. ವಿಶ್ವ ಹಿಂದೂ ಪರಿಷತ್ ಹೋರಾಟ ಕೈಗೊಂಡರು ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.ಪಟ್ಟಣದ ಕಮತಗಿ ಸರ್ಕಲ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೊರ್ಚಾ ಘಟಕದ ವತಿಯಿಂದ ನಡೆದ ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ ಕುರಿತಾಗಿ ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡೋಣ. ನಮ್ಮ ಸಂಸ್ಕೃತಿ ಸಂಪ್ರದಾಯ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಹೇಳಿದರು.
ಮುಖಂಡರಾದ ಕಮಲು ಮಾಲಪಾಣಿ, ಬಾಲು ನಿರಂಜನ, ರವಿ ಅಂಗಡಿ, ನಗರ ಘಟಕದ ಅಧ್ಯಕ್ಷ ಪ್ರಶಾಂತ ಜವಳಿ, ಭುವನೇಶ ಪೂಜಾರ, ಶಿವು ಬಾದೋಡಗಿ, ಶೀತಲ ಸತ್ತಿಗೇರಿ, ಕೊಣ್ಣೂರ, ಶಿವು ತುಪ್ಪದ, ಪರಶುರಾಮ ಮದಕಟ್ಟಿ, ಗಣೇಶ ನನ್ನಾ, ಪ್ರವೀಣ ಪಟ್ಟಣಶೆಟ್ಟಿ, ಶಿವು ಗೋತಗಿ, ಕೃಷ್ಣಾ ಬೀಳಗಿ, ಪ್ರಭು ಕಳ್ಳಿಗುಡ್ಡ, ವಿರೂಪಾಕ್ಷ ಹಿರೇಮಠ, ಷಡಕ್ಷರಯ್ಯ ಹಿರೇಮಠ, ಮಂಜು ನೇಮದಿ, ಲಕ್ಷ್ಮಣ ಭಜಂತ್ರಿ, ಮುತ್ತುರಾಜ ಉಂಕಿ, ತಿಮ್ಮನ್ನಾ ಬಂಡಿವಡ್ಡರ ಸೇರಿದಂತೆ ಇತರರು ಇದ್ದರು.