ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹಿಂದೂಗಳಿಗೆ ಅಯೋಧ್ಯೆ ರಾಮಮಂದಿರ ಭಕ್ತಿಯ ಕೇಂದ್ರವಾಗಿದೆ. ಹಲವಾರು ವರ್ಷಗಳ ಹೋರಾಟದ ಫಲವಾಗಿ ಜನವರಿಯಲ್ಲಿ ಶ್ರೀರಾಮನ ಮಂದಿರ ಉದ್ಘಾಟನೆಯಾಗುತ್ತಿದೆ. ಧರ್ಮವನ್ನು ನಾವು ಕಾದರೆ ಅದು ನಮ್ಮನ್ನು ಕಾಯುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಲಂಬಾಣಿ ಗುರು ಪೀಠದ ಶ್ರೀ ಸರ್ದಾರ ಸೇವಾಲಾಲ್ ಶ್ರೀಗಳು ತಿಳಿಸಿದರು.ನಗರದ ಭೋವಿ ಹಾಸ್ಟೆಲ್‌ನಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ತಾಲೂಕು ಕೇಂದ್ರಗಳಿಗೆ ವಿತರಣೆ ಮಾಡಿ ಮಾತನಾಡಿದ ಅವರು, ಅಯೋಧ್ಯೆ ಎನ್ನುವುದು ಹಿಂದೂಗಳಿಗೆ ಶಕ್ತಿ, ಕೇಂದ್ರವಾಗಿ ಹೊರ ಹೊಮ್ಮಿದೆ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೂಡ್ಡದಾದ ಹೋರಾಟವೇ ನಡೆದಿತ್ತು. ಧರ್ಮದಲ್ಲಿ ನಡೆಯುವವರಿಗೆ ಜಯ ತಂತಾನೇ ಲಭ್ಯವಾಗುತ್ತದೆ ಎಂದರು.
ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾದ ಅನೇಕರು ಈಗ ನಮ್ಮೊಂದಿಗಿಲ್ಲ. ಇನ್ನೂ ಕೆಲವರು ವಯೋ ವೃದ್ಧರಾಗಿದ್ದಾರೆ. ಇವರ ಸೇವೆ ನಾವುಗಳು ಸ್ಮರಣೆ ಮಾಡಬೇಕಿದೆ. ಅವರ ಹೋರಾಟದ ಫಲವಾಗಿ ಶ್ರೀರಾಮ ಮಂದಿರ ಕಾಣುತ್ತಿದ್ದೇವೆ. ಇಂದು ನೀಡುವ ಮಂತ್ರಾಕ್ಷತೆ ಜಿಲ್ಲೆಯ ಪ್ರತಿಯೊಂದು ಮನೆ ಮನೆಗೂ ತಲುಪಿಸಬೇಕಿದೆ. ಇದರಿಂದ ಅವರಲ್ಲಿ ಭಕ್ತಿ ಹೆಚ್ಚಾಗುತ್ತದೆ ಎಂದು ಸೇವಾಲಾಲ್ ಶ್ರೀಗಳು ತಿಳಿಸಿದರು.ಇಮ್ಮಡಿ ಕೇತೇಶ್ವರ ಶ್ರೀಗಳು ಮಾತನಾಡಿ, ಹಿಂದೂಗಳಿಗೆಲ್ಲಾ 2024ರ ಜನವರಿಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಐತಿಹಾಸಿಕ ದಿನವಾಗಿದೆ. ಇದರಿಂದ ಶ್ರೀರಾಮನಿಗೂ ಸಂತೋಷವಾಗಲಿದೆ. ಇದರ ಬಗ್ಗೆ ಹೋರಾಟ ಮಾಡಿದವರಿಗೂ ಸಹ ಜಯ ಸಿಗಲಿದೆ. ನಮಗೆ ಈ ರೀತಿಯ ಕಾರ್ಯಕ್ರಮದಲ್ಲಿ ಬಾಗಿಯಾಗಲು ಅವಕಾಶ ಸಿಕ್ಕಿರುವುದು ಸಂತೋಷ ತಂದಿದೆ ಎಂದರು.
ವಿಶ್ವ ಹಿಂದೂ ಪರಿಷತ್‍ನ ಪ್ರಾಂತ ಸಹ ಸಂಯೋಜಕ ಪ್ರಭಂಜನ್ ಮಾತನಾಡಿ, ಬದುಕಿನಲ್ಲಿ ಯಾವ ರೀತಿ ಇರಬೇಕು ಎಂಬುದನ್ನು ರಾಮಾಯಣ ತಿಳಿಸುತ್ತದೆ. ಪ್ರತಿಯೊಂದು ಮನೆಯಿಂದಲೂ ಸಹ ಶ್ರೀರಾಮ ಮತ್ತು ಸೀತೆ ಎಂತಹ ಮಕ್ಕಳ ಜನನವಾಗಬೇಕಿದೆ. ಅದೇ ರೀತಿ ಮನೆಯಲ್ಲಿ ಸಹೋದರರು ರಾಮ ಭರತರಂತೆ ಇರಬೇಕಿದೆ. ರಾಮ ಎಲ್ಲರಿಗೂ ಆದರ್ಶನಾಗಿದ್ದಾನೆ. ರಾಮನಲ್ಲಿ ಎಲ್ಲಾ ರೀತಿಯ ಒಳ್ಳೆಯ ಗುಣಗಳು ಇವೆ. ಮಂದಿರ ನಿರ್ಮಾಣಕ್ಕೆ ಸುಧೀರ್ಘವಾದ ಹೋರಾಟ ನಡೆದಿದ್ದು ಅದರ ಫಲ ಈಗ ಸಿಕ್ಕಿದೆ ಎಂದರುಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ ಮೊಳಕಾಲ್ಮೂರು ಮತ್ತು ಹಿರಿಯೂರು ತಾಲೂಕುಗಳಿಗೆ ಮಂತ್ರಾಕ್ಷಾತೆ ವಿತರಣೆ ಮಾಡಲಾಯಿತು. ಹಾಗೂ ಕರ ಸೇವಕರನ್ನು ಈ ವೇಳೆ ಸನ್ಮಾನಿಸಲಾಯಿತು. ಸ್ವಯಂ ಸೇವಕರಾದ ಮಧುಕರ್, ವಿಭಾಗ ಸಹಾ ಕಾರ್ಯದರ್ಶಿ ಚಂದ್ರಶೇಖರ್, ಸ್ವಯಂ ಸೇವಕರಾದ ನಾಗರಾಜ್ ಜಿಲ್ಲಾ ಕಾರ್ಯದರ್ಶೀ ರುದ್ರೇಶ್ ಭಾಗವಹಿಸಿದ್ದರು. ಇದಕ್ಕೂ ನಗರದ ರಾಮ ಮಂದಿರದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ಕರ ಪತ್ರಗಳಿಗೆ ಪೂಜೆ ಸಲ್ಲಿಸಲಾಯಿತು.
ಈ ವೇಳೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ. ಎಸ್ ಕೆ.ಬಸವರಾಜನ್, ಮುಖಂಡರಾದ ಅನಿತ್ ಕುಮಾರ್, ರಘುಚಂದನ್, ಮುರಳಿ, ಡಾ,ಸಿದ್ಧಾರ್ಥ, ಮಲ್ಲಿಕಾರ್ಜನ್, ಸುರೇಶ್ ಸಿದ್ದಾಪುರ ಬದರಿನಾಥ್, ಶಿವಣ್ಣಚಾರ್, ವಿಶ್ವನಾಥಯ್ಯ, ಜಿ.ಎಂ.ಸುರೇಶ್, ನಂದಿ ನಾಗರಾಜ್, ಈಶ್ವರಪ್ಪ, ರಾಮದಾಸ್, ತಿಪ್ಪೇಸ್ವಾಮಿ ನಾಗರಾಜ್ ಬೇದ್ರೇ, ಡಾ.ಪಿ.ಎಂ.ಮಂಜುನಾಥ್, ರಂಗನಾಥ್ ಇದ್ದರು.