ಅಯೋಧ್ಯೆ ರಾಮಮಂದಿರ ಹಿಂದುಗಳ ಅಸ್ಮಿತೆ

| Published : Jan 13 2024, 01:34 AM IST

ಸಾರಾಂಶ

ಪ್ರಪಂಚವೇ ಎದುರು ನೋಡುತ್ತಿರುವ ಸಮಸ್ತ ಹಿಂದುಗಳ ಪರಮಾಧ್ಯ ದೈವ ಮಾರ್ಯಾದಾ ಪುರಷ್ಟೋತ್ತಮ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇದೊಂದು ಹಿಂದುಗಳ ಅಸ್ಮಿತತೆ ಎಂದು ಹೊಸರ ಗ್ರಾಮದ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪ್ರಪಂಚವೇ ಎದುರು ನೋಡುತ್ತಿರುವ ಸಮಸ್ತ ಹಿಂದುಗಳ ಪರಮಾಧ್ಯ ದೈವ ಮಾರ್ಯಾದಾ ಪುರಷ್ಟೋತ್ತಮ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇದೊಂದು ಹಿಂದುಗಳ ಅಸ್ಮಿತತೆ ಎಂದು ಹೊಸರ ಗ್ರಾಮದ ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ನುಡಿದರು.

ಹೊಸೂರ ಗ್ರಾಮದಲ್ಲಿ ಬುಧವಾರ ಅಯೋಧ್ಯೆಯ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಯೋಧ್ಯೆಯಿಂದ ಮಂತ್ರಾಕ್ಷತೆ ಪ್ರತಿ ಊರಿಗೂ ತಲುಪುತ್ತಿದೆ. ಈ ಮಂತ್ರಾಕ್ಷತೆಯುನ್ನು ಗ್ರಾಮದ ಪ್ರತಿ ಮನೆಗೂ ತಲುಪಿಸುವ ಜವಾಬ್ದಾರಿಯನ್ನು ಹಿಂದು ಕಾರ್ಯಕರ್ತರೊಂದಿಗೆ ಮುಸ್ಲಿಂ ಯುವಕರು ಪಾಲ್ಗೊಂಡು ಸೌಹಾರ್ದ ಮೆರದಿದ್ದಾರೆ. ಇದೊಂದು ನಾಡಿಗೆ ಒಳ್ಳೆಯ ಸಂದೇಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಡಹಳ್ಳಿಯ ಪಂಚಾಕ್ಷರಿ ಮಹಾಸ್ವಾಮೀಜಿ ಮಾತನಾಡಿ, ಅಯೋಧ್ಯೆ ರಾಮ ಮಂದಿರದಿಂದ ಆಗಮಿಸಿರುವ ರಾಮ ಮಂತ್ರಾಕ್ಷತೆ ಪ್ರತಿ ಹಿಂದುಗಳ ಮನೆಗೆ ತಲುಪಿ, ರಾಮನಲ್ಲಿದ್ದಂತಹ 16 ಸಾತ್ವಿಕ ಗುಣಗಳು ಪ್ರತಿ ಹಿಂದೂವಿನಲ್ಲಿ ಬರುವಂತಾಗಲಿ ಅನ್ನೋ ಆಶಯವೂ ಇದೆ. ಜೊತೆಗೆ ರಾಮ ಮಂತ್ರಾಕ್ಷತೆಯು ಸುಖ, ನೆಮ್ಮದಿ ಹಾಗೂ ಅಭಿವೃದ್ಧಿಯ ಸಂಕೇತವೂ ಆಗಿದೆ ಎಂದರು.

ಗ್ರಾಮದ ಹಿರಿಯರಾದ ಗುರುಪಾದ ಕಳ್ಳಿ, ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ವಕ್ಕುಂದ ಮಾತನಾಡಿ, ಕಾರ್ಯಕರ್ತರು ಮನೆಮನೆಗೆ ತೆರಳಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಿಸುವ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆಯ ಜೊತೆಗೆ ರಾಮ ಮಂದಿರದ ಭಾವಚಿತ್ರ ಇರಬೇಕು. ಮನೆಯ ಹೊರಗಡೆ ನಿಂತು ಮಂತ್ರಾಕ್ಷತೆ ನೀಡಬಾರದು. ರಾಮನ ಜಪ ಮಾಡುತ್ತ ಮನೆ ಒಳಗಡೆ ಹೋಗಿ ಮಂತ್ರಾಕ್ಷತೆಯ ಮಹತ್ವದ ಬಗ್ಗೆ ಮನೆ ಮಂದಿಗೆ ತಿಳಿಸಿಕೊಡಬೇಕು. ಜೊತೆಗೆ ಮಂತ್ರಾಕ್ಷತೆ ಸ್ವೀಕರಿಸುವ ಮನೆಯವರು ಕೂಡ ಭಕ್ತಿಯಿಂದ ತೆಗೆದುಕೊಳ್ಳಬೇಕು. ಮಂತ್ರಾಕ್ಷತೆ ಈಗಾಗಲೇ ಹಲವು ಮನೆಗಳಿಗೆ ತಲುಪಿದ್ದು, ಇನ್ನೂ ಕೆಲವೆಡೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಮಂತ್ರಾಕ್ಷತೆ ಸಿಕ್ಕಿದ ಕೂಡಲೇ ಅದನ್ನು ಉಪಯೋಗಿಸುವಂತಿಲ್ಲ. ಬದಲಾಗಿ ಜ.22 ರವರೆಗೆ ತಮ್ಮ ತಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು. ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುವಾಗ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀದೇವಿ ತಳವಾರ, ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ, ಗೌಡಪ್ಪ ಹೊಸಮನಿ, ಜಗದೀಶ ಬುದಿಹಾಳ, ಸೋಮಲಿಂಗ ಮೆಳ್ಳಿಕೆರಿ, ಮಡಿವಾಳಪ್ಪ ಚಳಕೊಪ್ಪ, ಈರಣ್ಣ ಸಂಪಗಾಂವ, ಮಲ್ಲಿಕಾರ್ಜುನ ಕರಡಿಗುದ್ದಿ, ಮಡಿವಾಳಪ್ಪ ಚಳಕೊಪ್ಪ, ಮೋಹನ ವಕ್ಕುಂದ, ಉಮೇಶ ಸಂಗೊಳ್ಳಿ, ದುಂಡಪ್ಪ ಪಣದಿ, ನಾಗರಾಜ ಬುಡಶೆಟ್ಟಿ, ಪ್ರಶಾಂತ ಮಾಕಿ, ಮಂಜುನಾಥ ಸಂಗೊಳ್ಳಿ, ಮಂಜುನಾಥ ಹೊಸಮನಿ, ಮುನೀರ ಶೇಖ, ದಿಲಾವಾರ ದುಪದಾಳ, ದಿಲಾವಾರ ಶೇಖ, ದಾದಾಪೀರ ಶೇಖ, ಅಪ್ಪು ಇಳಿಗೇರ, ಮಲ್ಲವ್ವ ಬಾರಿಗಿಡದ, ಸಂಜು ಪಾಟೀಲ, ಬಸವರಾಜ ವಿವೇಕಿ, ಸಿದ್ದನಗೌಡ ಇಂಗಳಗಿ, ಈರಣ್ಣ ಕಳ್ಳಿ, ಮಲ್ಲವ್ವ ಸುತಗಟ್ಟಿ, ಗಂಗವ್ವ ಅರವಳ್ಳಿ, ರೋ?ನಬೀ ಶೇಖ, ಶಿವನಾಯಕ ಪಾಟೀಲ, ದೀಪಾ ಪಾಟೀಲ ಮುಂತಾದವರ ಇದ್ದರು.