ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ರಥದ ಬೀದಿಯಲ್ಲಿ ಶ್ರೀವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಅಯೋಧ್ಯೆ ರಾಮ ಗಣಪತಿಯ ವಿಸರ್ಜನಾ ಶೋಭಯಾತ್ರೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ ಶುಕ್ರವಾರ ನಡೆಯಲಿದೆ.ಗುರುನಂಜಶೆಟ್ಟರ ಛತ್ರದ ಮುಂಭಾಗದಿಂದ ಆರಂಭಗೊಳ್ಳಲಿರುವ ಶೋಭಾಯಾತ್ರೆಯು ಕಡಕ್ ಮೊಹಲ್ಲಾ, ಡಾ.ಬಿ.ಆರ್.ಅಂಬೇಡ್ಕರ್ ಬೀದಿ, ಡಿವಿಯೇಷನ್ ರಸ್ತೆ, ದೇವಾಂಗ ೩ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲ ನಾಯಕರ ಬೀದಿ, ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ನಾಗಪ್ಪಶೆಟ್ಟರ ಚೌಕ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ವೀರಮದಕರಿ ನಾಯಕರ ಬೀದಿ, ಶ್ರೀಭಗೀರಥ ಉಪ್ಪಾರ ಬಡಾವಣೆ, ಶ್ರೀಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಭ ೨ನೇ ಕ್ರಾಸ್, ಭ್ರಮರಾಂಭ ೧ನೇ ಕ್ರಾಸ್, ಕುರಬರಬೀದಿ, ಹಳ್ಳದಬೀದಿ, ಅಗ್ರಹಾರ, ನಗರಸಭಾ ಕಚೇರಿ ರಸ್ತೆ, ಚಾಮಾಲ್ ಬೀದಿ, ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿ ಮುಖಾಂತರ ಹೊರಟು ಶ್ರೀ ದೊಡ್ಡರಸನ ಕೊಳದವರೆಗೆ ನಡೆಯಲಿದ್ದು ಶನಿವಾರ ಬೆಳಗಿನಜಾವ ಬಾಣಬಿರುಸುಗಳೊಂದಿಗೆ ಗಣಪತಿ ವಿಸರ್ಜನೆ ನಡೆಯಲಿದೆ. ಈಗಾಗಲೇ ಬುಧವಾರ ಎಲ್ಲಾ ಕೋಮುವಾರು ಮುಖಂಡರ ಸಭೆ ಕರೆದು ಶಾಂತಿಯತ ವಿಸರ್ಜನೆಗೆ ಎಲ್ಲರು ಸಹಕರಿಸುವಂತೆ ಮನವಿ ಮಾಡಲಾಗಿದೆ. ಪೊಲೀಸ್ ಗಣಪತಿ ಎಂದು ಪ್ರಖ್ಯಾತಿ ಪಡೆದಿರುವ ಈ ಗಣಪತಿ ವಿಸರ್ಜನಾ ಶೋಭಯಾತ್ರೆಗೆ ಎಸ್ಪಿ ಡಾ.ಬಿ.ಟಿ, ಕವಿತಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ, ಸೂಕ್ಷ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿದೆ.