ಅಯೋಧ್ಯೆ ಮಂದಿರ ಉದ್ಘಾಟನೆ: ಮಾಂಸ ಮಾರಾಟ ನಿಷೇಧ

| Published : Jan 22 2024, 02:17 AM IST

ಸಾರಾಂಶ

ಚಾಮರಾಜನಗರಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ವಿಶೇಷ ಸಭೆ ನಡೆಸಿ ಗ್ರಾಪಂ ಸದಸ್ಯರು ಮಾಂಸ ಮಾರಾಟ ನಿಷೇಧಿಸುವಂತೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ನಿರ್ಧರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಜನವರಿ 20 ರಿಂದ 22 ರವರೆಗೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಮಾಂಸದ ಅಂಗಡಿಗಳು ಮತ್ತು ಹೋಟೆಲ್ ಗಳಲ್ಲಿ ಮಾರಾಟ ನಿಷೇಧ ಮಾಡಿ ಗ್ರಾಪಂ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮೂರು ದಿನಗಳವರೆಗೆ ಮಾರಾಟ ಸ್ಥಗಿತಗೊಳಿಸಬೇಕು. ಮಾಂಸಾಹಾರ ಹೋಟೆಲ್ ಸೇರಿದಂತೆ ಮಾಂಸ ಮಾರಾಟ ಹೋಟೆಲ್ ಗಳಿಗೂ ನೋಟೀಸ್ ನೀಡಲಾಗಿದೆ. ಈ ನಡುವೆ ಮಾಂಸ ಮಾರಾಟ ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.

ಗ್ರಾಪಂ ಸದಸ್ಯರ ಸಭೆಯಲ್ಲಿ ನಿರ್ಧಾರ । ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರಕ್ಕೆ ಎಲ್‌ಇಡಿ ಟಿ.ವಿ ವ್ಯವಸ್ಥೆ

ಕನ್ನಡಪ್ರಭ ವಾರ್ತೆ ಚಾಮರಾಜನಗರಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ವಿಶೇಷ ಸಭೆ ನಡೆಸಿ ಗ್ರಾಪಂ ಸದಸ್ಯರು ಮಾಂಸ ಮಾರಾಟ ನಿಷೇಧಿಸುವಂತೆ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ನಿರ್ಧರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಜನವರಿ 20 ರಿಂದ 22 ರವರೆಗೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಮಾಂಸದ ಅಂಗಡಿಗಳು ಮತ್ತು ಹೋಟೆಲ್ ಗಳಲ್ಲಿ ಮಾರಾಟ ನಿಷೇಧ ಮಾಡಿ ಗ್ರಾಪಂ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮೂರು ದಿನಗಳವರೆಗೆ ಮಾರಾಟ ಸ್ಥಗಿತಗೊಳಿಸಬೇಕು. ಮಾಂಸಾಹಾರ ಹೋಟೆಲ್ ಸೇರಿದಂತೆ ಮಾಂಸ ಮಾರಾಟ ಹೋಟೆಲ್ ಗಳಿಗೂ ನೋಟೀಸ್ ನೀಡಲಾಗಿದೆ. ಈ ನಡುವೆ ಮಾಂಸ ಮಾರಾಟ ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.ಅನ್ನಸಂತರ್ಪಣೆ, ರಾಮೋತ್ಸವ ಕಾರ್ಯಕ್ರಮ:

ಚಾಮರಾಜನಗರದ ಹಿಂದೂ ಮುಖಂಡರಿಂದ ಸೋಮವಾರ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ಅಂಗವಾಗಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಮಧ್ಯಾಹ್ನ ೧೨ ಗಂಟೆಗೆ ರಾಮೋತ್ಸವ, ಶ್ರೀರಾಮ ಕ್ಯಾಲೆಂಡರ್ ಬಿಡುಗಡೆ ಮತ್ತು ಜನರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರಾದ ಶ್ರೀಕಂಠು, ಕೃಷ್ಣಕುಮಾರ್ ತಿಳಸಿದ್ದಾರೆ.

ಮಹಿಳೆಯರಿಂದ ಲಿಲಿತ ಸಹಸ್ರನಾಮ:ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಚಾಮರಾಜನಗರದದಲ್ಲಿ ಸೋಮವಾರ 400 ಕ್ಕೂ ಹೆಚ್ಚು ಮಹಿಳೆಯರಿಂದ ಲಿಲಿತ ಸಹಸ್ರನಾಮ ಏರ್ಪಡಿಸಲಾಗಿದೆ. ಶಂಕರಪುರ ರಾಮಮಂದಿರದಲ್ಲಿ ಶ್ರೀರಾಮತಾರಕ ಮಹಾಮಂತ್ರ ಜಪ ಸಾಂಗತ ಯಜ್ಞ ನಡೆಯಲಿದ್ದು, ಯಜ್ಞಕ್ಕಾಗಿ ರಾಮಮಂದಿರ ಆವರಣದಲ್ಲಿ ಯಾಗ ಮಂಟಪ ನಿರ್ಮಾಣ ಮಾಡಲಾಗಿದೆ. ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರದ ವೀಕ್ಷಣೆಗೆ ಬೃಹತ್ ಎಲ್‌ಇಡಿ ಟಿ.ವಿ ವ್ಯವಸ್ಥೆ ಮಾಡಲಾಗಿದೆ.ಲಾಡು ವಿತರಣೆ: ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಪಚ್ಚಪ್ಪ ಸರ್ಕಲ್ ಬಳಿ ಭಕ್ತಾದಿಗಳಿಗೆ ಲಾಡು ಹಾಗೂ ಸಿಹಿ ತಿನಿಸುಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್‌ ತಿಳಿಸಿದ್ದಾರೆ.