ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಅಯೋಧ್ಯಾಪತಿ ಶ್ರೀ ರಾಮಚಂದ್ರನ ಆದಶ೯ಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಉತ್ತರಾದಿ ಮಠಾಧೀಶರಾದ ಸತ್ಯಾತ್ಮ ತೀರ್ಥ ಶ್ರೀಪಾದರು ಕರೆ ನೀಡಿದರು.ಅಯೋಧ್ಯೆಯಿಂದ ಕಲಬುರಗಿಗೆ ಬಂದಿರುವ ಮಂತ್ರಾಕ್ಷತೆಯ ಪವಿತ್ರ ಕಲಶಗಳನ್ನು ನಗರದಲ್ಲಿರುವ ಜೇವರ್ಗಿ ಕಾಲೋನಿ ರಾಯರ ಮಠದ ಪ್ರಾಂಗಣದಲ್ಲಿ ಉತ್ತರಾದಿ ಮಠಾಧೀಶರಾದ ಸತ್ಯಾತ್ಮ ತೀರ್ಥ ಸ್ವಾಮೀಜಿ ಯವರು ಮಂತ್ರಾಕ್ಷತೆಯ ಕಲಶಗಳಿಗೆ ಸ್ಪಶಿ೯ಸಿ ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಿದರು.
ಅಯೋಧ್ಯೆಯ ರಾಮ ನಿಮಗೆಲ್ಲರಿಗೂ ಆಶೀ೯ವಾದದ ರೂಪದಲ್ಲಿ ಮಂತ್ರಾಕ್ಷತೆಯನ್ನು ಕೊಟ್ಟಿದ್ದಾನೆ ಸ್ವೀಕರಿಸಿ ಬೇಕೆಂದು ಸೇರಿದ್ದವರೆಲ್ಲರಿಗೂ ತಿಳಿಸಿದರು, ಸ್ವಯಂ ಸೇವಕರಿಗೆ ಪ್ರತಿಯೊಂದು ಮನೆಗಳಿಗೂ ಮಂತ್ರಾಕ್ಷತೆಯನ್ನು ಮುಟ್ಟಿಸಬೇಕೆಂದು ಕರೆ ನೀಡಿದರು.ಸಾಂಕೇತಿಕವಾಗಿ ಮಠದ ದಿವಾನರಾದ ಪಂ. ಶಶಿ ಆಚಾರ ಕಲಶವನ್ನು ಎತ್ತಿಹಿಡಿಯುವ ಮುಖಾಂತರ ಮನೆ ಮನೆ ಸಂಪರ್ಕಿಸುವ ಅಭಿಯಾನಕ್ಕೆ ಚಾಲನೆ ನೀಡಿದರು. ಮಠಾಧಿಕಾರಿಗಳಾದ ಘಂಟಿ ರಾಮಾಚಾರ, ಪಂ. ಗಿರಿಶಾಚಾರ ಅವಧಾನಿ, ಪಂ ಹನುಮಂತಾಚಾರ ಸರಡಗಿ, ಪಂ ಅಭಯಾಚಾರ, ಸಂಜೀವಾಚಾರ, ಜೇವರ್ಗಿ ಕಾಲನೀಯ ರಾಘವೇಂದ್ರ ಸ್ವಾಮಿ ಮಠದ ಅದ್ಯಕ್ಷರಾದ ನರೇಂದ್ರ ಫಿರೋಜಾಬಾದ, ಕಾರ್ಯದರ್ಶಿಗಳಾದ ಪ್ರಶಾಂತ ಕೊರಳ್ಳಿ, ವಾಸುದೇವ ಮುಂಡರಗಿ, ಮಾಧವರಾವ್ ತಾವರಗೇರಾ, ನರಸಿಂಹಾಚಾರ ಭುಲಿ೯, ಪವನ್ ಅರವಿಂದ ಹುಣಸಗಿ ವ್ಯಾಸರಾಜ ಸಂತೆಕೆಲ್ಲೂರ.. ವಿಶ್ವ ಹಿಂದೂ ಪರಿಷತ್ತಿನ ವಿನಾಯಕ ಕುಲಕರ್ಣಿ, ರಾಮಚಂದ್ರ ಸುಗೂರ ಇದ್ದರು.
ನಗರದ ಭಾರತೀಯ ಜನತಾ ಪಕ್ಷದಿಂದ ಈ ಅಭಿಯಾನದ ಕಲಬುರ್ಗಿ ನಗರದ ಸಂಚಾಲಕರಾದ ಅರವಿಂದ ನವಲಿ ಹಾಗೂ ನೂರಾರು ಭಕ್ತರ ಮದ್ಯೆ ಈ ಮಂತ್ರಾಕ್ಷತಾ ಅಭಿಮಾನಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಸಂಚಾಲಕ ಅರವಿಂದ ನವಲಿ ರಾಮನ ಕೆಲಸ ಮಾಡುವ ಸೌಭಾಗ್ಯ ನಮ್ಮದಾಗಿದೆ, ಜ.7ರಂದು ಮಹಾ ಸಂಪರ್ಕ ಅಭಿಯಾನವಿರುವುದರಿಂದ ಭಾಗವಹಿಸುವ ರಾಮಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅರವಿಂದ ನವಲಿ ಕರೆ ನೀಡಿದರು.500 ವರ್ಷಗಳ ನಿರಂತರ ಹೋರಾಟ ಅಸಂಖ್ಯಾತ ಸಾಧು ಸಂತರ ಕಾರಸೇವಕರ ಬಲಿದಾನದಿಂದ ಜ.2 ರಂದು ಸೀತಾ ಸಹಿತ ರಾಮ ಅಯೋಧ್ಯೆಗೆ (ನಮ್ಮ ನಮ್ಮ ಮನೆಗೆ) ತನ್ನ ಮನೆಗೆ ಬರುತ್ತಿರುವನು. ಈ ಯಜ್ಞದಲ್ಲಿ ಭಾಗವಹಿಸಿ ಎಲ್ಲರೂ ಕೃತಾರ್ಥರಾಗುವಂತೆ ಅರವಿಂದ ನವಲಿ ಕರೆ ನೀಡಿದ್ದಾರೆ. ಅಭಿಯಾನದ ಮಾಹಿತಿಗಾಗಿ ಆಸಕ್ತರು ಅರವಿಂದ ನವಲಿಯವರನ್ನು 9986312480 ಸಂಪರ್ಕಿಸಬಹುದಾಗಿದೆ.