ಸುಂಟಿಕೊಪ್ಪ: ಸುಂಟಿಕೊಪ್ಪ ವಾಹನ ಚಾಲಕರ ಸಂಘದ 56ನೇ ವಾರ್ಷಿಕೋತ್ಸವದ ಆಯುಧಪೂಜಾ ಸಮಾರಂಭದ ಅಂಗವಾಗಿ ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಮಕ್ಕಳ ಮಂಟಪಗಳು ಮಂಜಿನಗರಿ ದಸರಾ ಸಮಾರಂಭವನ್ನೇ ನೆನಪಿಸುತ್ತಿತ್ತು. ತೀವ್ರ ಪೈಪೋಟಿಯಿಂದ ಕೂಡಿದ ಸ್ಪರ್ಧೆಯ ಕೊನೆಯಲ್ಲಿ ಟೀಮ್ ವಾರಿಯರ್ಸ್ ತಂಡವು ಪ್ರಥಮ ಬಹುಮಾನವನ್ನು ಪಡೆಯಿತು.ಸಮಾರಂಭದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ವಿವಿಧ ಅಲಂಕಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಅದರಂತೆ ಈ ಬಾರೀ 4 ಮಕ್ಕಳ ಮಂಟಪಗಳು ವಿವಿಧ ಮಾದರಿಗಳಿಂದ ಕೂಡಿದ್ದು ದೇವಾನು ದೇವತೆಗಳ ನರ್ತನ ಹಾಗೂ ಅಸುರರ ವದನದ ಕಥಾ ಸಂಕಲನವು ಮೂಡಿಬಂತು.
ಮಕ್ಕಳ ಮಂಟಪದ ಪ್ರಥಮ ಬಹುಮಾನ ಟೀಮ್ ವಾರಿಯರ್ಸ್ ತಂಡದವರು ಪಡೆದರೆ, ದ್ವಿತೀಯ ಬಹುಮಾನವನ್ನು ಟೀಮ್ ಅಗ್ನಿ ಜ್ವಾಲೆ ಸುಂಟಿಕೊಪ್ಪ ಹಾಗೂ ಟೀಮ್ ದೇವಿ ರೋರ್ಕ್ಸ್ಟ್ ತಂಡಗಳು ಪಡೆದರೆ ತೃತೀಯ ಬಹುಮಾನವನ್ನು ಟೀಮ್ ಟಿಸಿಎಲ್ ಸುಂಟಿಕೊಪ್ಪ ತಂಡದವರು ಪಡೆದುಕೊಂಡರು.ಕಚೇರಿ ಮತ್ತು ಸಂಘ ಸಂಸ್ಥೆ ಅಲಂಕಾರ ಸ್ಪರ್ಧೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆ ಪ್ರಥಮ, ದ್ವಿತೀಯ ಸ್ಥಾನವನ್ನು ಚೆಸ್ಕಾಂ ಇಲಾಖೆ, ತೃತೀಯ ಸ್ಥಾನವನ್ನು ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಪಡೆದುಕೊಂಡಿತು. ದೊಡ್ಡವಾಹನ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹೊಸಕೋಟೆಯ ಕೆಎ17 ಬಿ 9103 ಲಾರಿ, ದ್ವಿತೀಯ ಬಹುಮಾನ ಹೊಸಕೋಟೆಯ ಕೆಎ 45 ಎ 3489, ತೃತೀಯ ಬಹುಮಾನವನ್ನು ಟಿಸಿಎಲ್ ಚೆಂಜರ್ ಸುಂಟಿಕೊಪ್ಪ ವಾಹನವು ಪಡೆದುಕೊಂಡಿತು. ಅಂಗಡಿ ಮಳಿಗೆ ಅಲಂಕಾರ ಸ್ಫರ್ದೆಯಲ್ಲಿ ಪ್ರಥಮ ಬಹುಮಾನ ಶ್ರೀಮಾನ್ ಎಂಟರ್ ಪ್ರೈಸಸ್, ದ್ವಿತೀಯ ಬಹುಮಾನ ಸ್ಟುಡೆಂಟ್ ಕಾರ್ನರ್, ಚಿಕ್ಕ ವಾಹನಗಳ ಅಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಕೆಎ09 ಎಎ0912, ದ್ವಿತೀಯ ಬಹುಮಾನ ಕೆಎ35ಎಂ4128, ತೃತೀಯ ಬಹುಮಾನ ಕೆಎ51ಎಂ9097, ಆಟೋರಿಕ್ಷಾಗಳ ಅಲಂಕಾರ ಸ್ಪರ್ಧೆಯಲ್ಲಿ ಶಿವಮಣಿ ಪ್ರಥಮ, ವರ್ಕ್ಶಾಫ್ಗಳ ಅಲಂಕಾರ ಸ್ಪರ್ಧೆಯಲ್ಲಿ ಗದೆಹಳ್ಳದ ಪ್ರಭ ವರ್ಕ್ಶಾಪ್ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿತು.
ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಪ್ರಧಾನ ಕಾರ್ಯದರ್ಶಿ ಮುನೀರ್ ಕಂಬಿಬಾಣೆ, ಖಜಾಂಜಿ ಅಸೀಸ್ ಕೊಡರಗರಹಳ್ಳಿ ಉಪಾಧ್ಯಕ್ಷ ಅಂಬೆಕಲ್ಚಂದ್ರು, ಕೃಷ್ಣಪ್ಪ ಬಿ.ಎ., ಸಹಕಾರ್ಯದರ್ಶಿ ಪಟ್ಟೆಮನೆ ಸುನಿಲ್ಕುಮಾರ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ಲ್ಲಕುಟ್ಟಿ, ಸಲಹಾ ಸಮಿತಿ ಸದಸ್ಯರಾದ ಎಸ್.ಯು.ಮಮ್ಮದ್, ಜೈನುದ್ದೀನ್, ದೇವಯ್ಯ, ಇಸ್ಮಾಯಿಲ್(ಕಾಕು) ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿ.ಎ.ಬಸಪ್ಪ, ಸತೀಶ್, ಪಟ್ಟೆಮನೆ ಮಧು, ತನ್ಶೀರ್, ಮೋನು, ರಫೀಕ್, ಶಕ್ತಿವೇಲು, ಜಿ.ಕುಮಾರ, ನಾಸರ್ ಆಜ್ಮಲ್, ಸಚಿನ್, ಪ್ರವಿಣಸಾಜು, ಸಲಾಂ, ಅಸ್ಕರ್, ಪಟ್ಟೆಮನೆ ರಕ್ಷಿತ್ ರಿನು, ಸಲೀಂ, ಅಸೀಸ್ ಹೊಸಕೋಟೆ ಮತ್ತಿತರರು ಇದ್ದರು.