11ರಂದು ಖಾಸಗಿ ಬಸ್‌ ಕಾರ್ಮಿಕರ ಸಂಘದಿಂದ ಆಯುಧ ಪೂಜಾ ಕಾರ್ಯಕ್ರಮ

| Published : Oct 05 2024, 01:37 AM IST

11ರಂದು ಖಾಸಗಿ ಬಸ್‌ ಕಾರ್ಮಿಕರ ಸಂಘದಿಂದ ಆಯುಧ ಪೂಜಾ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅ.11ರಂದು ಬೆಳಗ್ಗೆ 10.30ಕ್ಕೆ ಸಂಘದ ಕಚೇರಿಯಲ್ಲಿ ಆಯುಧ ಪೂಜೆ ನಡೆಯಲಿದೆ. ನಂತರ ಸ್ಥಳೀಯ ಕಲಾ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ತೋರ ಗ್ರಾಮದ ಗೋಪಮ್ಮ ತಂಡದಿಂದ ಕೊಡಗಿನ ಜನಪದ ಕಲೆಯಾದ ಉರೂಟ್ಟಿ ಕೊಟ್ಟ್ ಪಾಟ್, ಪ್ರಥಮ ಬಾರಿಗೆ ಕಾಲೇಜು ವಿದ್ಯಾರ್ಥಿಗಳಿಂದ ಚೆಂಡೆಮೇಳ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಡಗು ಖಾಸಗಿ ಬಸ್‌ ಕಾರ್ಮಿಕರ ಸಂಘದ ವತಿಯಿಂದ ೧೭ನೇ ವರ್ಷದ ಆದ್ದೂರಿಯ ಆಯುಧ ಪೂಜಾ ಕಾರ್ಯಕ್ರಮದ ಆಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಖಾಸಗಿ ಬಸ್‌ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕೊಡಗು ಜಿಲ್ಲಾ ಖಾಸಗಿ ಬಸ್‌ ಕಾರ್ಮಿಕರ ಸಂಘ ವಿರಾಜಪೇಟೆ ವತಿಯಿಂದ ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷ ಕುಂಬೇಯಂಡ ಸುರೇಶ್ ಮಾತನಾಡಿ, ಅ.11ರಂದು ಬೆಳಗ್ಗೆ 10.30ಕ್ಕೆ ಸಂಘದ ಕಚೇರಿಯಲ್ಲಿ ಆಯುಧ ಪೂಜೆ ನಡೆಯಲಿದೆ. ನಂತರ ಸ್ಥಳೀಯ ಕಲಾ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ತೋರ ಗ್ರಾಮದ ಗೋಪಮ್ಮ ತಂಡದಿಂದ ಕೊಡಗಿನ ಜನಪದ ಕಲೆಯಾದ ಉರೂಟ್ಟಿ ಕೊಟ್ಟ್ ಪಾಟ್, ಪ್ರಥಮ ಬಾರಿಗೆ ಕಾಲೇಜು ವಿದ್ಯಾರ್ಥಿಗಳಿಂದ ಚೆಂಡೆಮೇಳ ಮತ್ತು ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 7.30ಕ್ಕೆ ವೇದಿಕೆಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಖಾಸಗಿ ಬಸ್‌ ಕಾರ್ಮಿಕರ ಮಕ್ಕಳು ಸೇರಿದಂತೆ, ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಖಾಸಗಿ ಬಸ್‌ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಜ್ಯೂಡಿ ವಾಜ್ ಮಾತನಾಡಿ, ಆಯುಧ ಪೂಜಾ ಅಂಗವಾಗಿ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಕೊಡಗು ಮತ್ತು ಮೈಸೂರು ವಿಭಾಗದ ನುರಿತ ಬೈಕ್ ಸವಾರರಿಂದ ಮಧ್ಯಾಹ್ನ 3 ಗಂಟೆಗೆ ಬೈಕ್ ಶೋ ಕಾರ್ಯಕ್ರಮ ಹಾಗೂ ರಾತ್ರಿ 9.30ಕ್ಕೆ ಶಾರದೆ ಮ್ಯೂಸಿಕಲ್ ನೈಟ್ಸ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಆಸಕ್ತ ಪ್ರತಿಭೆಗಳು ೯೮೪೪೫೫೮೫೩೫, ೮೭೬೨೨೭೯೩೯೭ ಮತ್ತು ೯೪೮೧೮೮೨೭೦೮ ಸಂಪರ್ಕಿಸಬಹುದಾಗಿದೆ. ನೊಂದಾಯಿಸಿಕೊಳ್ಳಲು ಅ.೮ ಅಂತಿಮ ದಿನವಾಗಿದೆ ಎಂದು ಮಾಹಿತಿ ನೀಡಿದರು.

ಕೊಡಗು ಖಾಸಗಿ ಬಸ್‌ ಕಾರ್ಮಿಕರ ಸಂಘದ ಕೋಶಾಧಿಕಾರಿ ವಿ.ಎ. ದಿನೇಶ್, ನಿರ್ದೇಶಕರಾದ ಮಹೇಶ್ ಎಂ.ಕೆ. ಮತ್ತು ಎಂ.ಪಿ. ದಿನೇಶ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪೊಟೊ: ಪತ್ರಿಕಾಗೋಷ್ಠಿಯಲ್ಲಿ ಆಯೂಧ ಪೂಜಾ ಕಾರ್ಯಕ್ರಮದ ಮಾಹಿತಿ ನೀಡುತ್ತಿರುವ ಕೊಡಗು ಖಾಸಗಿ ಬಸ್ಸು ಕಾರ್ಮಿಕರ ಸಂಘದ ಪದಾಧಿಕಾರಿಗಳು.