ಸಾರಾಂಶ
ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿ ನಮಗೆ ಪ್ರೇರಣೆಯಾಗಬೇಕು ಎಂದು ಶಾಸಕರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸಮಸ್ಯೆಗಳನ್ನು ಎದುರಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಆಯುಧಪೂಜೆ ಮತ್ತು ವಿಜಯದಶಮಿ ನಮಗೆ ಪ್ರೇರಣೆಯಾಗಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಹೇಳಿದ್ದಾರೆ.ಮಾದಾಪುರದ ಸಾರ್ವಜನಿಕ ಆಯುಧಾ ಪೂಜಾ ಸಮಿತಿ ವತಿಯಿಂದ 5ನೇ ವರ್ಷದ ಅದ್ಧೂರಿ ಆಯುಧಪೂಜಾ ಸಮಾರಂಭದ ಅಂಗವಾಗಿ ಬಸ್‌ನಿಲ್ದಾಣದಲ್ಲಿ ಅಯೋಜಿತವಾಗಿದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಾದಾಪುರ, ಸುಂಟಿಕೊಪ್ಪ, ಸೋಮವಾರಪೇಟೆ ಮಡಿಕೇರಿಗಳಲ್ಲಿ ಅತ್ಯಂತ ಅದ್ಧೂರಿಯಿಂದ ಆಯುಧಪೂಜೆ ಮತ್ತು ವಿಜಯದಶಮಿಯನ್ನು ಆಚರಿಸಲಾಗುತ್ತಿದೆ. ಮಾದಾಪುರದ ಕಾರ್ಯಕ್ರಮ ಆಯೋಜನೆಗೊಳ್ಳುವ ಸಂದರ್ಭದಲ್ಲಿ ಸಮಯವಕಾಶ ಕಡಿಮೆ ಇದ್ದ ಹಿನ್ನಲೆಯಲ್ಲಿ ಹೆಚ್ಚಿನ ಮೆರುಗನ್ನು ನೀಡಲು ಸಾಧ್ಯವಾಗಲಿಲ್ಲ. ಆದರೆ ಮುಂದಿನ ವರ್ಷ ವೈಯಕ್ತಿಕವಾಗಿ ಮಾದಾಪುರ ಸಾರ್ವಜನಿಕ ಆಯುಧಪೂಜಾ ಸಮಾರಂಭದೊಂದಿಗೆ ನಿಂತು ಅತ್ಯಂತ ಅದ್ಧೂರಿಯಾಗಿ ಆಯುಧಪೂಜಾ ಸಮಾರಂಭವನ್ನು ಆಚರಿಸಲಾಗುವುದು ಎಂದು ಡಾ. ಮಂತರ್‌ಗೌಡ ಖಚಿತ ಭರವಸೆ ನೀಡಿದರು. ಮುಖ್ಯ ಅತಿಥಿ ಕೊಡಗು ಜಿಲ್ಲಾಡಳಿತ ಕಾನೂನು ಸಲಹೆಗಾರರಾದ ಎ. ಲೋಕೇಶ್‌ಕುಮಾರ್, ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬಗಳು ಜಾತ್ಯಾತೀತ ಮತ್ತು ಧರ್ಮತೀತ ನೆಲೆಗಟ್ಟಿನಲ್ಲಿ ನಡೆಯುತ್ತಿದ್ದು, ಈ ರೀತಿಯ ಸಮಾರಂಭಗಳು ಜನತೆಯಲ್ಲಿ ಒಗ್ಗಟ್ಟು ಮತ್ತು ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದು, ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಲು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಆಯುಧಪೂಜಾ ಆಚರಣಾ ಸಮಿತಿ ಅಧ್ಯಕ್ಷ ವಿ.ಕುಮಾರ್ ವಹಿಸಿದ್ದರು.ಸಾರ್ವಜನಿಕ ಆಯುಧಪೂಜಾ ಸಮಿತಿಗೆ ಸಾರ್ವಜನಿಕ ಉಪಯೋಗಕ್ಕಾಗಿ ಬೆಂಗಳೂರಿನ ಬಾಬಸ್‌ಪಾಳ್ಯ ಜಿ.ಎಲ್.ಆರ್. ವೆಂಚರ್ಸ್, ಎಲ್‌ಎಲ್‌ಪಿ ಲಲ್ಲೇಶ್ ರೆಡ್ಡಿ ಅಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ ವಾಹನವನ್ನು ಶಾಸಕ ಡಾ. ಮಂತರ್‌ಗೌಡ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಯುವಜನ ಸೇವಾ ಮತ್ತು ಕ್ರೀಡಾ ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚು ರಂಜನ್ , ಕರ್ನಾಟಕ ಒಕ್ಕಲಿಗ ಸಂಘ ಕಾರ್ಯಧ್ಯಕ್ಷರು, ಅಧ್ಯಕ್ಷರು ಮತ್ತು ಖರೀದಿ ಸಮಿತಿ ಹರಪ್ಪಳ್ಳಿ ರವೀಂದ್ರ, ಮಾದಾಪುರ ಗ್ರಾ.ಪಂ.ಅಧ್ಯಕ್ಷ ಎಂ.ಜಿ.ಸೋಮಣ್ಣ, ಕೆಡಿಸಿಸಿ ಬ್ಯಾಂಕ್ ಸದಸ್ಯ ಹಾಗೂ ಮಾದಾಪುರ ಪ್ರಾ.ಕೃ.ಪ.ಸ.ಸಂ.ನಿ ಅಧ್ಯಕ್ಷ ಉಮೇಶ್ ಉತ್ತಪ್ಪ, ಜಿ.ಪಂ.ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಮಾದಾಪುರ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರವಿ, ಕೆದಕಲ್ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಸಂಜು ಪೊನ್ನಪ್ಪ, ನಿರ್ಮಾಪಕರು ಮತ್ತು ಚಲನಚಿತ್ರ ನಟ ಎಂ.ಆದ್ಯ ತಿಮ್ಮಯ್ಯ, ಸೋಮವಾರಪೇಟೆ ತಹಸೀಲ್ದಾರ್ ಕೃಷ್ಣಮೂರ್ತಿ, ಉದ್ಯಮಿ ವಿ.ರಾಜ, ಎಸ್.ಜೆ.ಎಂ.ಶಾಲಾ ವ್ಯವಸ್ಥಾಪಕ ಅನೀಶ್‌ಕುಮಾರ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಠೋ, ಮನುಮುದ್ದಪ್ಪ, ಕೊಪ್ಪತಂಡ ಗಣೇಶ್, ಮಾದಾಪುರ ಗ್ರಾ.ಪಂ.ಉಪಾಧ್ಯಕ್ಷ ವಿ.ಆರ್.ಸುರೇಶ್, ಸದಸ್ಯ ಕೆ.ಎ.ಲತೀಫ್, ಹನೀಫ್ ಮಾದಾಪುರ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಹನೀಫ್, ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸುರೇಶ್, ಬೆಂಗಳೂರಿನ ರೋಹಿತ್ ಮತ್ತಿತರರು ಉಪಸ್ಥಿತರಿದ್ದರು. 5ನೇ ವರ್ಷದ ಆಚರಣೆಯ ಅಂಗವಾಗಿ ಏರ್ಪಡಿಸಿರುವ 5ನೇ ವರ್ಷದ ಆಯುಧ ಪೂಜೆಯ ಪ್ರಯುಕ್ತ ಮಕ್ಕಳಿಗೆ ಗ್ರೂಪ್ ಡ್ಯಾನ್ಸ್ ಮತ್ತು ಅಂತಾರಾಷ್ಟ್ರೀಯ ಗಾಯಕ ಗಾಯಕಿಯರ ಹಿನ್ನಲೆ ವಾದಕರ ಖ್ಯಾತಿಯ ಮಂಗಳೂರಿನ ವಿಶ್ವಾಸ್ ಮ್ಯೂಸಿಕ್ ಮತ್ತು ಸಿಜ್ಲಿಂಗ್ ಡ್ಯಾನ್ಸ್ ತಂಡದವರಿಂದ ಸಂಗೀತ ರಸ ಸಂಜೆ ನೃತ್ಯ ತಂಡ ಮಂಗಳೂರು ಗಾಯನ ನೃತ್ಯ ಮಿಮಿಕ್ರಿ ಕಾರ್ಯಕ್ರಮ ಹಾಗೂ ವಿವಿಧ ವಾಹನಗಳ ಅಲಂಕಾರ, ಆಟೋರಿಕ್ಷಾ ಅಲಂಕಾರ, ಕಚೇರಿ ಸಂಘ ಸಂಸ್ಥೆಗಳ ಅಲಂಕಾರ, ಅಂಗಡಿ ಮಳಿಗೆ ಅಲಂಕಾರ, ಮಕ್ಕಳ ಮಂಟಪ ಅಲಂಕಾರ ಸ್ಪರ್ಧೆಗಳು ನಡೆದವು.