ಸಾರಾಂಶ
ಆಯುಧಪೂಜೆ ಮುನ್ನಾದಿನ ಸೋಮವಾರಪೇಟೆ ಪಟ್ಟಣದಲ್ಲಿ ಸೇವಂತಿಗೆ ಹೂವಿಗೆ ಮಾರು ಒಂದಕ್ಕೆ ರು. ೧೦೦ ರಿಂದ ೧೫೦ರಂತೆ, ಬೂದಿಕುಂಬಳ ಕೆಜಿಗೆ ರು. ೧೨೦ ಹಾಗೂ ಎಲ್ಲ ಹಣ್ಣುಗಳಿಗೆ ಹೆಚ್ಚಿನ ಬೆಲೆ ನಿಗದಿಗೊಳಿಸಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಈ ಬಾರಿ ಮಾರುಕಟ್ಟೆಯಲ್ಲಿ ಬಾಳೆ ಕಂಬ, ಕಬ್ಬು ಸೇರಿದಂತೆ ಯಾವುದೇ ವ್ಯಾಪಾರಸ್ಥರೂ ಕಂಡು ಬರಲಿಲ್ಲ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಆಗಾಗ ಸುರಿಯುತ್ತಿರುವ ಮಳೆ ಒಂದೆಡೆಯಾದರೆ, ಹೂವು, ಬೂದಿ ಕುಂಬಳ, ಹಣ್ಣುಗಳು ಸೇರಿದಂತೆ ಎಲ್ಲದರ ಬೆಲೆ ದುಪ್ಪಟ್ಟಾದರೂ, ಜನರು ಆಯುಧ ಪೂಜೆ ನಡೆಸಲು ಉತ್ಸಾಹದಿಂದ ಖರೀದಿಗೆ ಮುಂದಾಗಿರುವುದು ಪಟ್ಟಣದಲ್ಲಿ ಗುರುವಾರ ಕಂಡುಬಂದಿತು.ಸೇವಂತಿಗೆ ಹೂವಿಗೆ ಮಾರು ಒಂದಕ್ಕೆ ರು. ೧೦೦ ರಿಂದ ೧೫೦ರಂತೆ, ಬೂದಿಕುಂಬಳ ಕೆಜಿಗೆ ರು. ೧೨೦ ಹಾಗೂ ಎಲ್ಲ ಹಣ್ಣುಗಳಿಗೆ ಹೆಚ್ಚಿನ ಬೆಲೆ ನಿಗದಿಗೊಳಿಸಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಈ ಬಾರಿ ಮಾರುಕಟ್ಟೆಯಲ್ಲಿ ಬಾಳೆ ಕಂಬ, ಕಬ್ಬು ಸೇರಿದಂತೆ ಯಾವುದೇ ವ್ಯಾಪಾರಸ್ಥರೂ ಕಂಡು ಬರಲಿಲ್ಲ.
ಆಗಾಗ ಮಳೆ ಬೀಳುತ್ತಿರುವುದರಿಂದ ಬಲೂನು ಸೇರಿದಂತೆ ಮಕ್ಕಳಿಗೆ ಆಟವಾಡುವ ವಸ್ತುಗಳನ್ನು ತಂದಿರುವ ವ್ಯಾಪಾರಿಗಳು ತಾವು ತಂದು ವಸ್ತುಗಳ ಚೀಲವನ್ನು ಬಿಚ್ಚದೆ, ಆಕಾಶದತ್ತ ಮುಖ ಮಾಡಿದ್ದಾರೆ. ಮಳೆ ಜೋರಾದಲ್ಲಿ ಜನರು ಪಟ್ಟಣಕ್ಕೆ ಬರುವುದು ಕಡಿಮೆಯಾಗುವುದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುವುದು ಎಂದು ಸೋಮಪ್ಪ ತಿಳಿಸಿದರು.ಈ ಬಾರಿ ಇಲ್ಲಿಯವರೆಗೆ ಉತ್ತಮ ವ್ಯಾಪಾರವಾಗುತ್ತಿದ್ದು, ಜನರು ಹೂವಿನ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಹಾಸನದ ಹೂವಿನ ವ್ಯಾಪಾರಿ ರಾಜೇಶ್ ತಿಳಿಸಿದರು.