ಸಾರಾಂಶ
ತರೀಕೆರೆಯಲ್ಲಿ ಆಯುರ್ವೇದ ನಡಿಗೆ, ಆರೋಗ್ಯದ ಕಡೆಗೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಆಯುರ್ವೇದ ಚಿಕಿತ್ಸೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಭಾರತೀಯ ವೈದ್ಯ ಪದ್ಧತಿಯಾಗಿದೆ ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಗೌತಮ್ ಎಲ್. ಆರ್. ಹೇಳಿದ್ದಾರೆ. ಸರ್ಕಾರ, ಜಿಲ್ಲಾ ಆಯುಷ್ ಇಲಾಖೆ ಚಿಕ್ಕಮಗಳೂರು, ಸರ್ಕಾರಿ ಆಯುರ್ವೇದ ಆಸ್ಪತ್ರೆಯಿಂದ ಪಟ್ಟಣದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ನಡೆದ ಹತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ಕೊಡುಗೆ, ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ, ಎಂಬ ಘೋಷವಾಕ್ಯದೊಂದಿಗೆ ಆಯುರ್ವೇದ ನಡಿಗೆ, ಆಯುರ್ವೇದ ಆರೋಗ್ಯ ಶಿಬಿರ, ಸ್ವಚ್ಛತಾ ಅಭಿಯಾನ ಮತ್ತು ಯೋಗ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಯುರ್ವೇದ ಚಿಕಿತ್ಸೆ ರೋಗಗಳ ಚಿಕಿತ್ಸೆಯಷ್ಟೇ ಅಲ್ಲದೆ, ಸಮಗ್ರ ಆರೋಗ್ಯವನ್ನು ಉತ್ತೇಜಿಸುವ ಮತ್ತು ಆಯುರ್ವೇದ ಚಿಕಿತ್ಸೆ ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ದೇಹದ ಸಮತೋಲನ ಕಾಪಾಡುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಮನಸ್ಸಿಗೆ ಶಾಂತಿ ನೀಡುತ್ತದೆ. ರೋಗ ಗುಣಪಡಿಸುತ್ತದೆ. ಔಷಧಿ ಹಾಗೂ ಪಂಚಕರ್ಮ ಚಿಕಿತ್ಸಾ ವಿಧಾನಗಳು ವಿವಿಧ ರೋಗಗಳಿಗೆ ಸಂಪೂರ್ಣ ಚಿಕಿತ್ಸೆ ನೀಡುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಆಯುರ್ವೇದ ಕೇವಲ ಚಿಕಿತ್ಸಾ ವಿಧಾನವಲ್ಲ. ಬದಲಿಗೆ ಆರೋಗ್ಯಕರ ಮತ್ತು ಸಮತೋಲಿತ ಜೀವನಶೈಲಿ ರೂಢಿಸಿಕೊಳ್ಳಲು ಸಹಾಯ ಮಾಡುವ ಒಂದು ಸಂಪೂರ್ಣ ಜ್ಞಾನ ಮತ್ತು ವೈದ್ಯ ಪದ್ಧತಿ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಕಿಶೋರ್ ಕುಮಾರ್ ಬಿ.ವಿ. ಡಾ.ಕಾವ್ಯಶ್ರೀ, ಡಾ. ಮಧುಸೂದನ್, ಯೋಗ ತರಬೇತಿ ದಾರ ಕವಿತಾ, ಜ್ಯೋತಿ ಪಿ. ಆಯುಷ್ಮಾನ್ ಆರೋಗ್ಯ ಮಂದಿರ ನಂದಿ, ಆಸ್ಪತ್ರೆ ಸಿಬ್ಬಂದಿ ಅರ್ಪಿತ, ಕಮಲ, ನೇತ್ರಾವತಿ, ಅಮೃತ, ಮಧು, ಮಂಜುನಾಥ್, ಪ್ರಜ್ವಲ್, ಅನಿತಾ ಭಾಗವಹಿಸಿದ್ದರು.-
23ಕೆಟಿಆರ್.ಕೆ20ಃ ತರೀಕೆರೆ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆದ ಆಯುರ್ವೇದ ನಡಿಗೆ, ಆರೋಗ್ಯದ ಕಡೆಗೆ ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ ಡಾ.ಗೌತಮ್ ಎಲ್.ಆರ್ಸ ಡಾ. ಕಿಶೋರ್ ಕುಮಾರ್ ಬಿ.ವಿ. ಮತ್ತಿತರರು ಭಾಗವಹಿಸಿದ್ದರು.