ಸಾರಾಂಶ
ಶಿರಸಿ: ನಗರದ ಆದರ್ಶ ವನಿತಾ ಸಮಾಜದಲ್ಲಿ ಬೈರುಂಬೆಯ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ಮಹಿಳಾ ಸಂಘಟನೆಯ ಸದಸ್ಯೆಯರಿಗೆ ಆಹಾರ, ಆರೋಗ್ಯ, ಆಯುರ್ವೇದ, ಯೋಗದ ಬಗ್ಗೆ ತಿಳಿವಳಿಕೆ ನೀಡಲಾಯಿತು.ವೈದ್ಯಾಧಿಕಾರಿ ಡಾ. ಪೂರ್ಣಿಮಾ ಅವರು ಈ ಕುರಿತು ಮಾಹಿತಿ ನೀಡಿದರು. ಆಯುರ್ವೇದ ೫ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಮನುಕುಲದ ಮೊದಲ ವೈದ್ಯ ಪದ್ಧತಿಯಾಗಿದೆ. ಭಾರತದ ಹೆಮ್ಮೆಯ ಪರಿಪೂರ್ಣ ವೈದ್ಯ ಪದ್ಧತಿ ಇದು. ಪಂಚಕರ್ಮ, ಕ್ಷಾರಸೂತ್ರದಂತಹ ವಿಶಿಷ್ಟ ಚಿಕಿತ್ಸೆಗಳು ಇದರಲ್ಲಿ ತಿಳಿಸಲ್ಪಟ್ಟಿದೆ.
ಇದರಲ್ಲಿ ಚಿಕಿತ್ಸೆಯೊಂದೇ ಅಲ್ಲ, ರೋಗ ಬಾರದಂತೆ ತಡೆಯುವ ವೈದ್ಯ ವಿಜ್ಞಾನವೂ ಆಯುರ್ವೇದವಾಗಿದೆ. ಹಲವು ವ್ಯಾಧಿಗಳಿಗೆ ಪ್ರಪಂಚದಾದ್ಯಂತ ಭರವಸೆ ಮೂಡಿಸಿದ ವೈದ್ಯ ಪದ್ಧತಿ ಇದಾಗಿದೆ ಎಂದರು.ಈ ವೇಳೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಹಿಳೆಯರು ಸಮಸ್ಯೆಗಳಿಗೆ ವೈದ್ಯರಿಂದ ಪರಿಹಾರ ಕಂಡುಕೊಂಡರು. ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಮಂಗಲಾ ಹಬ್ಬು, ಉಪಾಧ್ಯಕ್ಷೆ ರೇಖಾ ಭಟ್, ಕಾರ್ಯದರ್ಶಿ ಸಹನಾ ಜೋಶಿ, ಖಜಾಂಚಿ ಜ್ಯೋತಿ ಹೆಗಡೆ, ಆಡಳಿತ ಕಮಿಟಿಯ ಉಷಾ ಭಟ್, ವನಜಾ ಬೆಣಗಾಂವಕರ್, ಗೀತಾ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.ಜೆಜೆಎಂ ಕಾಮಗಾರಿಯಲ್ಲಿ ಅಕ್ರಮವಾಗಿಲ್ಲ: ಸ್ಪಷ್ಟನೆಹೊನ್ನಾವರ: ತಾಲೂಕಿನ ಸಾಲಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಜೆಜೆಎಂ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಇದರಲ್ಲಿ ಗ್ರಾಪಂ ಸದಸ್ಯರ ಹಸ್ತಕ್ಷೇಪ ಇದೆ ಎಂದು ಕರುನಾಡ ವಿಜಯಸೇನೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸಾಲಕೋಡ ಗ್ರಾಪಂ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.
ಕರುನಾಡ ವಿಜಯಸೇನೆ ಸಂಘಟನೆ ಕೆಲದಿನಗಳ ಹಿಂದೆ ಸಾಲಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಅಸಮರ್ಪಕ ಕಾಮಗಾರಿ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಬಗ್ಗೆ ಸಾಲಕೋಡದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಲಚಂದ್ರ ನಾಯ್ಕ, ಸದಸ್ಯರಾದ ರಜನಿ ನಾಯ್ಕ ಪ್ರತಿಕ್ರಿಯಿಸಿದರು.2021- 22ನೇ ಸಾಲಿನ ಬ್ಯಾಚ್- 2 ಜೆಜೆಎಂ ಯೋಜನೆ ಅಡಿ ಕಾಮಗಾರಿಯಿಂದ 50,000 ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲ ಸಂಗ್ರಹಗಾರದ ಮೂಲಕ 51 ಮನೆಗಳಿಗೆ ನೀರಿನ ಸಂಪರ್ಕ ಆಗಿತ್ತು. ಟ್ರಯಲ್ ರನ್ ವೇಳೆ ಏಕಕಾಲದಲ್ಲಿ 51 ಮನೆಗಳಿಗೆ ನೀರು ಪೂರೈಕೆ ಆಗದ ಕಾರಣ ಹಾಗೂ 13 ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವುದು ಬಾಕಿ ಇರುವುದರಿಂದ ಬೋರ್‌ವೆಲ್ ನೀರನ್ನು ನೇರವಾಗಿ ಪಂಪಿಂಗ್ ಮೂಲಕ ಸಂಪರ್ಕ ಮಾಡಿರುವ ಬಗ್ಗೆ ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ನಾಯ್ಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಯಮುನಾ ನಾಯ್ಕ, ಅಪ್ಪಿ ಭಟ್, ಆಶಾ ಮಡಿವಾಳ, ಗಣಪತಿ ಭಟ್, ಪಾತ್ರೊನ್ ಮೆಂಡಿಸ್, ಲಕ್ಷ್ಮೀ ಮುಕ್ರಿ ಉಪಸ್ಥಿತರಿದ್ದರು.