ಸಾರಾಂಶ
ಬ್ಯಾಂಕ್‌ನ ನಿವೃತ್ತ ನೌಕರರಿಗೆ ಹಾಗೂ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ.ಶ್ರೀನಿವಾಸ್ ರಾವ್ ಹೇಳಿದರು. ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಬ್ಯಾಂಕ್ ನಿವೃತ್ತರ ಸಂಘ ಆಯೋಜನೆ
ಶಿವಮೊಗ್ಗ: ಮೈಸೂರು ಬ್ಯಾಂಕ್ ನಿವೃತ್ತ ನೌಕರರ ಸಂಘದ ವತಿಯಿಂದ ಜ.16 ರಂದು ಬೆಳಿಗ್ಗೆ 10.30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಬ್ಯಾಂಕ್‌ನ ನಿವೃತ್ತ ನೌಕರರಿಗೆ ಹಾಗೂ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ.ಶ್ರೀನಿವಾಸ್ ರಾವ್ ಹೇಳಿದರು.ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್‌ನ ನಿವೃತ್ತ ನೌಕರರ ನ್ಯಾಯಯುತ ಸೌಲಭ್ಯ ಹಾಗೂ ಅವರ ಉತ್ತಮ ಜೀವನ ನಿರ್ವಹಣೆಯ ಸೌಲಭ್ಯದ ಲಭ್ಯತೆಗೆ ಸಹಕಾರಿಯಾಗಿ ಸಂಘ ಕೆಲಸ ಮಾಡುತ್ತಿದೆ. ನಿವೃತ್ತರಿಗೆ ಕಾಲ ಕಾಲಕ್ಕೆ ವೈದ್ಯಕೀಯ ತಪಾಸಣೆ, ನುರಿತ ವೈದ್ಯರಿಂದ ಆರೋಗ್ಯ ಬಗ್ಗೆ ಉಪನ್ಯಾಸ, ಎಲ್ಲ ಜನತೆಯ ಮನೋ ಉಲ್ಲಾಸದ ಕಾರ್ಯಕ್ರಮದ ಭಾಗವಾಗಿ ಸಾಂಸ್ಕೃತಿಕ , ಸಂಗೀತ ಕಾರ್ಯಕ್ರಮಗಳ ಆಯೋಜನೆ ಮತ್ತು ಹಲವು ಸಂಘಟನೆಯ ಕಾರ್ಯಕ್ರಮಗಳಲ್ಲಿ ನೇರವಾಗಿ ನೆರವಾಗುತ್ತಾ ಭಾಗಿಯಾಗುತ್ತದೆ ಎಂದರು.
ನೂರು ವರ್ಷಕ್ಕೂ ಹೆಚ್ಚು ಕಾಲ ರಾಜ್ಯದ ಜನಮನದ ಬ್ಯಾಂಕ್ ಆದ ಮತ್ತು ಮೈಸೂರು ಬ್ಯಾಂಕ್ ಎಂದೇ ಪ್ರಸಿದ್ಧಿಯಾಗಿ 2017ರಲ್ಲಿ ಎಸ್‌ಬಿಐನಲ್ಲಿ ಮಿನಲಗೊಂಡ ಹೆಮ್ಮೆಯ ಸಂಸ್ಥೆಯ ನೆನಪನ್ನು ಹಸಿರಾಗಿಡುವಲ್ಲಿ ಶ್ರಮಿಸುತ್ತಿದೆ. ಇದರ ಅಂಗವಾಗಿಯೇ ನಿವೃತ್ತ ನೌಕರರಿಗೆ ಆಯುಷ್ಮಾನ್ ಕಾರ್ಡ್ ಅನ್ನು ನೀಡಲಾಗುತ್ತಿದೆ ಎಂದರು.ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್. ಎನ್, ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮೈಸೂರು ಬ್ಯಾಂಕ್ ನೌಕರರ ಸಂಘಟನೆಯ ಕೇಂದ್ರ ಕಚೇರಿಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ಪ್ರಸಾದ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಪ್ರಮುಖರಾದ ಎಚ್.ಎಂ.ಶ್ರೀನಿವಾಸ್ ಪುರಾಣಿಕ್, ಎಸ್.ಶಿವಮೂರ್ತಿ, ಆನಂದ ಮೂರ್ತಿ, ಎಚ್.ಎಸ್.ಮಂಜುನಾಥ್, ಕೆ.ಜಿ.ಕೃಷ್ಣಾನಂದ, ಗುರುಮೂರ್ತಿ ಜೋಯಿಸ್, ಎಂ.ಪಿ.ವೀರಭದ್ರಪ್ಪ, ಲಕ್ಷ್ಣಣ್ ಶೆಟ್ಟಿ, ಗುರುರಾಜ್ ಇದ್ದರು.