ಅಯ್ಯಪ್ಪಸ್ವಾಮಿ ಜಾತ್ರಾ ಮಹೋತ್ಸವ

| Published : Jan 17 2024, 01:50 AM IST / Updated: Jan 17 2024, 01:51 AM IST

ಸಾರಾಂಶ

ಮಹಾಲಿಂಗಪುರ: ಮಕರ ಸಂಕ್ರಮಣದ ಪ್ರಯುಕ್ತ ಪಟ್ಟಣದ ಅಯ್ಯಪ್ಪ ಬಡಾವಣೆ ದೇವಸ್ಥಾನದಲ್ಲಿ 17ನೇ ವರ್ಷದ ಅಯ್ಯಪ್ಪಸ್ವಾಮಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಮಕರ ಸಂಕ್ರಮಣದ ಪ್ರಯುಕ್ತ ಪಟ್ಟಣದ ಅಯ್ಯಪ್ಪ ಬಡಾವಣೆ ದೇವಸ್ಥಾನದಲ್ಲಿ 17ನೇ ವರ್ಷದ ಅಯ್ಯಪ್ಪಸ್ವಾಮಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು.

ಸಮಿತಿಯ ಸದಸ್ಯರು, ಮಾಲಾಧಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಸ್ವಾಮಿ ಅಯ್ಯಪ್ಪಗೆ ಹಾಲಿನ ಅಭಿಷೇಕ ಮಾಡಿ ಸಮಸ್ತ ಸದ್ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಸೇವಕ/ ಸೇವಕಿಯರು ಸೇರಿದ ನೂರಾರು ಅಯ್ಯಪ್ಪ ಭಕ್ತರಿಗೆ ಹಾಲುಗ್ಗಿ, ಅನ್ನ ಮತ್ತು ಸಾಂಬಾರು ಬಡಿಸಿದರು.

ದೇವಾಲಯ ನಿರ್ಮಾಣಕ್ಕೆ ಜಾಗ ಕಾಣಿಕೆ: ಮಹಾಲಿಂಗಪುರ ಪಟ್ಟಣದ ಬಾಟ್ ಪರಿವಾರ ಅಯ್ಯಪ್ಪ ದರ್ಶನಕ್ಕೆ ಶಬರಿಮಲೈಗೆ ಹೊರಟಿದ್ದ ವೇಳೆ ರಸ್ತೆ ಅಪಘಾತದಲ್ಲಿ ಅಸುನೀಗಿದ 5 ವರ್ಷದ ಮಾಲಾಧಾರಿ ಬಾಲಕ ರಾಹುಲ್ ಮೇತ್ರಿ ಹೆಸರಲ್ಲಿ ಬಾಲ ಅಯ್ಯಪ್ಪಸ್ವಾಮಿ ದೇಗುಲ ನಿರ್ಮಾಣಕ್ಕೆ ತಮ್ಮ ತೋಟದಲ್ಲಿ 5 ಗುಂಟೆ ಜಮೀನು ನೀಡಿದ್ದಾರೆ.